Andolana originals

ಓದುಗರ ಪತ್ರ: ಇರುವುದರಲ್ಲೇ ತೃಪ್ತಿ ಕಾಣಬೇಕು

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ ಒಪ್ಪುತ್ತದೆ. ಮಾನವ ಸಂಘಜೀವಿ. ಸಮಾಜದೊಳಗೆ ಸಮುದಾಯದ ಕಟ್ಟುಪಾಡುಗಳನ್ನು ಪಾಲಿಸಿ ಸಂಸ್ಕಾರ, ಸಂಪ್ರದಾಯವನ್ನು ಪಾಲಿಸಿ ಆರಾದಿಸಿ ಜೀವನ ನಡೆಸಿದಾಗ ಮಾತ್ರ ಸಮುದಾಯದಲ್ಲಿ ಆತ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ.

ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಮಾಜದಲ್ಲಿ ಬೇರೆಯವರ ಏಳಿಗೆಯನ್ನು ಸಹಿಸದಿರುವುದು, ಸ್ನೇಹದಲ್ಲಿ ನೈಜತೆ ಇಲ್ಲದಿರುವುದು, ಅಪನಂಬಿಕೆ ಮುಂತಾದ ಕೆಟ್ಟಗುಣಗಳು ಸಮಾಜದ ಪಿಡುಗುಗಳಾಗಿ ಜನರ ದಿಕ್ಕು ಬದಲಿಸುತ್ತಿವೆಯೇನೋ ಎಂಬ ಆತಂಕ ಪ್ರಜ್ಞಾವಂತರಲ್ಲಿ ಮೂಡುವಂತಾಗಿದೆ. ಹಿಂದೆ ಇದ್ದಂತಹ ಸಂಸ್ಕಾರವಿಲ್ಲ, ಆಚಾರವಿಲ್ಲ, ಬಲವಾದ ಸ್ನೇಹವಿಲ್ಲ, ನಂಬಿಕೆಯಿಲ್ಲ, ಪ್ರಾಮಾಣಿಕತೆಯಂತೂ ಮಾಯವಾಗುತ್ತಿದೆಯೆನೋ ಎಂಬ ಭಾವನೆ ಮೂಡುತ್ತಿದೆ. ಹೀಗೆ ನಮ್ಮನಮ್ಮ ಈ ಗುಣಗಳು ನಮ್ಮ ದಿಕ್ಕನ್ನು ಬೇರೆಡೆಗೆ ಬದಲಾಯಿಸಿ ಮಾನಸಿಕವಾಗಿ ಬಲಹೀನರಾಗಿ ಮಾಡುತ್ತಿದೆ.

ಹಾಗಾಗಿ ಮಾನವನಿಗೆ ಯಾವುದರಲ್ಲೂ ತೃಪ್ತಿ ಕಾಣದಾಗಿದೆ. ಯಾರಲ್ಲೂ ನಂಬಿಕೆಯಿಡಬೇಕೆಂಬ ಮನೋಭಾವವು ಬದಲಾಗುತ್ತಿದೆ. ಮೊದಲು ನಮ್ಮನ್ನು ನಾವು ತಿಳಿದು ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ನಾವೇ ಪ್ರಶಂಸಿಸಿಕೊಂಡು ಕೆಟ್ಟಗುಣಗಳನ್ನು ಬುಡಸಮೇತ ಕಿತ್ತುಹಾಕೋಣವಲ್ಲವೇ? ನಮಗಾಗಿ ಇಷ್ಟೇ ಎಂದು ನಿಶ್ಚಯಿಸಿರುವಾಗ ಅದರಲ್ಲಿಯೇ ಸಂತಸವನ್ನು ಕಾಣೋಣ. ನಮ್ಮಲ್ಲಿಲ್ಲದ ವಸ್ತುವಿನ ಬಗ್ಗೆ ಚಿಂತಿಸುವುದನ್ನು ಬಿಡೋಣ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ಜೀವನ ನಡೆಸಿದರೆ ಉತ್ತಮ ಅಲ್ಲವೇ?!

-ಅನಿಲ್ ರಾಜ, ಮೈಸೂರು

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

13 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

13 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

20 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

20 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

20 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

20 hours ago