mahavathara
ಭಾರತೀಯ ಚಿತ್ರಗಳು 100 ಕೋಟಿ ಕ್ಲಬ್ ಸೇರುವುದು ಹೊಸ ವಿಷಯವೇ ಅಲ್ಲ. ಯಾವುದೋ ಕಾಲಕ್ಕೆ ಅಂಥದ್ದೊಂದು ಸಾಧನೆ ಆಗಿದೆ. ಜನಪ್ರಿಯ ನಟರ ಮತ್ತು ತಂತ್ರಜ್ಞರ ಚಿತ್ರವೊಂದು 100 ಕೋಟಿ ರೂ. ಕ್ಲಬ್ ಸೇರುವುದು ದೊಡ್ಡ ವಿಷಯವೇ ಅಲ್ಲ. ಹೊಸಬರ, ಅದರಲ್ಲೂ ಯಾವುದೇ ಜನಪ್ರಿಯ ನಟರು ಇರದ ಆ್ಯನಿಮೇಟೆಡ್ ಚಿತ್ರವೊಂದು ಅಂಥದ್ದೊಂದು ದಾಖಲೆ ಮಾಡುವುದು ಅಪರೂಪ. ಈಗ ಅಂಥದ್ದೊಂದು ಸಾಧನೆಯನ್ನು ‘ಮಹಾವತಾರ ನರಸಿಂಹ’ ಮಾಡಿದೆ.
ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುವ ‘ಮಹಾವತಾರ ನರಸಿಂಹ’ ಚಿತ್ರವು ಬಾಕ್ಸ್ ಆಫೀಸ್‍ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಜುಲೈ.25ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡಗುಡೆ ಆದ ಈ ಚಿತ್ರವು ಒಟ್ಟಾರೆ 175 ಕೋಟಿ ರೂ. ಗಳಿಕೆ ದಾಟಿದ್ದು, ಈ ವಾರಾಂತ್ಯಕ್ಕೆ ಚಿತ್ರವು 200 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ಹೇಳಲಾಗುತ್ತಿದೆ.
ಆ್ಯನಿಮೇಟೆಡ್ ಚಿತ್ರಗಳ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ‘ಮಹಾವತಾರ ನರಸಿಂಹ’ ಪಾತ್ರವಾಗಿದ್ದು, ಆ ನಿಟ್ಟಿನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕನ್ನಡದಲ್ಲಿ ಈ ಚಿತ್ರವನ್ನು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅರ್ಪಿಸುವುದರ ಜೊತೆಗೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
‘ಮಹಾವತಾರ ನರಸಿಂಹ’ ಚಿತ್ರವನ್ನು ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆಯಡಿ ಶಿಲ್ಪಾ ಧವನ್ ನಿರ್ಮಿಸಿದರೆ, ಅವರ ಪತಿ ಅಶ್ವಿನ್ ಕುಮಾರ್ ನಿರ್ದೇಶಿಸಿದ್ದಾರೆ.
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…
ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…
ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…
ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…
ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇವಲ ಎರಡನೇ ಮಾತಿನಲ್ಲಿ…