ಮನರಂಜನೆ

ಮಹಾ ಕುಂಭಮೇಳದ ʻಮೊನಾಲಿಸಾʼಗೆ ಬಾಲಿವುಡ್‌ ಕರೆ

ಡೈರಿ ಆಫ್‌ ಮಣಿಪುರ ಚಿತ್ರದ ನಾಯಕಿಯಾಗಿ ಆಯ್ಕೆ

ಪ್ರಯಾಗರಾಜ್‌: ಆಕರ್ಷಕ ಕಣ್ಣು, ಕೃಷ್ಣ ವರ್ಣ, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಈಕೆಯ ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಇಂದೋರ್‌ನ ಬಂಜಾರ ಬುಡಕಟ್ಟು ಸಮುದಾಯಕ್ಕೆ ಸೇರಿದ ಈಕೆ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಳು.

ಕಳೆದ ಐದು ದಿನಗಳಿಂದ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಈಕೆಯದ್ದೆ ಮಾತು. ಈಕೆಯ ಸೌಂದರ್ಯಕ್ಕೆ ಜನ ಮಾರು ಹೋಗಿದ್ದರು. ಇದೀಗ ಆ ಯುವತಿಗೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ.

ಹೌದು… ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿ ಸರಗಳನ್ನು ಮಾರುತ್ತಿದ್ದ ಈ ಬೆಡಗಿಯ ವಿಡಿಯೊವೊಂದನ್ನು ಇನ್‌ಫ್ಲೂಯೆನ್ಸರ್‌ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಂದ ಶುರುವಾದ ಈಕೆಯ ಹವಾ ಪ್ರತಿ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆಯಾದವು. ಈಕೆಯ ಸರಳ ಸೌಂಧರ್ಯಕ್ಕೆ ಮೆಚ್ಚಿರುವ ನೆಟ್ಟಿಗರು ಮಹಾ ಕುಂಭಮೇಳದ ಮೊನಾಲಿಸಾ ಎಂದು ಕರೆದಿದ್ದಾರೆ.

ಇನ್ನೂ ಬಾಲಿವುಡ್‌ ಸಹ ಈಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದು, ಈ ಯುವತಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿಸಿದೆ. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾವನ್ನು ಸನೋಜ್ ಮಿಶ್ರ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಕುಂಭಮೇಳದ ಮೊನಾಲಿಸ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ನಡೆಸಲಾಗಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ಮೊನಾಲಿಸಾಗೆ ನಟನಾ ತರಬೇತಿಯನ್ನೂ ಸಹ ಕೊಡಿಸಲಾಗುತ್ತಿದೆ.

ಸ್ಯಾಂಡಲ್‌ವುಡ್‌ ನಟ ಶಿವರಾಜ ಕುಮಾರ ಅವರು ನಟಿಸುತ್ತಿರುವ ತೆಲಗು ಚಿತ್ರದಲ್ಲೂ ಮೊನಾಲಿಸಾಗೆ ಒಂದು ಪಾತ್ರ ನೀಡಲಾಗುವುದು ಎಂದು ಸಹ ಬಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿಯೂ ಪಿಸು ಪಿಸು ಮಾತುಗಳು ಶುರುವಾಗಿವೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರಿಗೆ ಸಿನಿಮಾ ಅವಕಾಶಗಳು ಲಭಿಸುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಬೀದಿಯಲ್ಲಿ ಹಾಡು ಹಾಡುತ್ತಿದ್ದ ರಾನು ಮಂಡಲ್‌ಗೆ ಬಾಲಿವುಡ್ ಸಿನಿಮಾ ಹಾಡು ಹಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿಬಿಟ್ಟಿ ದ್ದರು. ಕೇರಳದಲ್ಲಿ ಮೀನು ಮಾರುತ್ತಿದ್ದ ಯುವತಿಗೆ ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಮಾಡಲಾಗಿತ್ತು. ಮಲಯಾಳಿ ನಟಿ ಪ್ರಿಯಾ ವಾರಿಯರ್ ಕೂಡ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಕಣ್ಸನ್ನೆಯ ಒಂದು ಸಣ್ಣ ಕ್ಲಿಪ್‌ನಿಂದಲೇ. ಇದೀಗ ಮಹಾಕುಂಭದ 16 ವರ್ಷ ವಯಸ್ಸಿನ ಬೆಡಗಿ ಮೊನಾಲಿಸಾಳ ಸರದಿ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ರಾಜ್ಯದಲ್ಲಿ ಇನ್ಮುಂದೆ ದ್ವೇಷ ಭಾಷಣ ಮಾಡಿದ್ರೆ 5000 ದಂಡ, 3 ವರ್ಷ ಜೈಲು ಶಿಕ್ಷೆ

ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್‌ ಆಗಿದೆ. ವಿಧಾನಸಭೆಯಲ್ಲಿ ಇಂದು ಮಸೂದೆ ಮಂಡನೆ…

5 mins ago

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ಆರೋಪಿಸಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಹಣದ…

13 mins ago

ಗ್ಯಾರಂಟಿಗಳ ಬಗ್ಗೆ ಸಿಎಲ್‌ಪಿಯಲ್ಲಿ ಚರ್ಚೆಯೇ ಆಗಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಳಗಾವಿ: ಗ್ಯಾರಂಟಿಗಳ ಬಗ್ಗೆ ಸಿಎಲ್‌ಪಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಶಾಸಕರು…

24 mins ago

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ…

39 mins ago

ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಗ್ಯಾರಂಟಿ ಯೋಜನೆ ವಿರೋಧಿಸಿಲ್ಲ: ಸಚಿವ ಚಲುವರಾಯಸ್ವಾಮಿ

ಬೆಳಗಾವಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಕೂಡ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.…

49 mins ago

ಕೊಡಗು| ಆಸ್ತಿ ವಿಚಾರಕ್ಕೆ ಕಲಹ: ಅಣ್ಣನ ಮಗನ ಮೇಲೆ ಗುಂಡಿನ ದಾಳಿ

ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.…

1 hour ago