Lovers in the Wild; ‘Jungle Mangal’ Trailer Released
‘ಸೂಜಿದಾರ’ ನಂತರ ಯಶ್ ಶೆಟ್ಟಿ ನಾಯಕನಾಗಿ ನಟಿಸಿರಲಿಲ್ಲ. ಇದೀಗ ಅವರು ಸದ್ದಿಲ್ಲದೆ ‘ಜಂಗಲ್ ಮಂಗಲ್’ ಎಂಬ ಚಿತ್ರದದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್, ಮಂಗಳವಾರ ಸಂಜೆ ಬಿಡುಗಡೆಯಾಗಿದೆ.
ಸಹ್ಯಾದ್ರಿ ಸ್ಟುಡಿಯೋಸ್ ಬ್ಯಾನರ್ ಅಡಿ ಪ್ರಜೀತ್ ಹೆಗ್ಡೆ ಮುಂತಾದವರು ನಿರ್ಮಿಸಿರುವ ‘ಜಂಗಲ್ ಮಂಗಲ್’ ಚಿತ್ರಕ್ಕೆ ರಕ್ಷಿತ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ‘ಉಗ್ರಂ’ ಮಂಜು, ದೀಪಕ್ ರೈ ಪಣಾಜೆ ಮುಂತಾದವರು ನಟಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರಕ್ಷಿತ್ ಕುಮಾರ್, ‘ಮೊದಲು ಈ ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಟ್ಟಿದ್ದೆ. ಅದು ಬಹಳ ಕಾವ್ಯಾತ್ಮಕವಾಗಿರುತ್ತದೆ ಎಂಬ ಕಾರಣಕ್ಕೆ, ಟ್ರೇಲರ್ ನೋಡಿದ ಯೋಗರಾಜ್ ಭಟ್, ಈ ಚಿತ್ರಕ್ಕೆ ‘ಜಂಗಲ್ ಮಂಗಲ್’ ಎಂಬ ಹೆಸರಿಡಿ ಎಂದು ಸಲಹೆ ನೀಡಿದರು. ಸುನಿ ತಮ್ಮ ಬ್ಯಾನರ್ ಅಡಿ ಅರ್ಪಿಸುವುದಕ್ಕೆ ಮುಂದಾದರು. ಮೊದಲು ನಾನೊಂದು ಟ್ರೇಲರ್ ಮಾಡಿದ್ದೆ. ಅದನ್ನು ಸಂಕಲನಕಾರ ಮನು ಶೆಡ್ಗಾರ್ ಕಸದ ಬುಟ್ಟಿಗೆ ಎಸೆದು, ಈ ಟ್ರೇಲರ್ ಮಾಡಿಕೊಟ್ಟರು. ಈ ಟ್ರೇಲರ್ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದರು.
ಇದು ಯಾವ ಊರಿನ ಕಥೆ ಬೇಕಾದರೂ ಆಗಿರಬಹುದು ಎನ್ನುವ ರಕ್ಷಿತ್, ‘ಇಲ್ಲಿ ನಾಯಕ-ನಾಯಕಿ ಕಾಡಿಗೆ ಹೋಗುತ್ತಾರೆ. ಅವರನ್ನು ಊರಿನ ಜನ ಹಿಂಬಾಲಿಸುತ್ತಾರೆ. ಊರಿನ ಜನರ ಮುಗ್ಧ ಕುತೂಹಲವನ್ನು ಈ ಚಿತ್ರದ ಮೂಲಕ ಹೇಳುವ ತೋರಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ಯೂನಿವರ್ಸಲ್ ಆದ ಕಥೆ. ಎಲ್ಲಿ ಬೇಕಾದರೂ ನಡೆಯಬಹುದು. ಅದನ್ನು ತೆಳುಹಾಸ್ಯದೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಯಶ್ ಶೆಟ್ಟಿ ಈ ಚಿತ್ರ ಒಪ್ಪಲು ಕಥೆ ಕಾರಣವಂತೆ. ‘ನನಗೆ ನಾಯಕನಾಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರಿತಿಸಿಕೊಳ್ಳಬೇಕಷ್ಟೇ. ಈ ಚಿತ್ರದ ಒಪ್ಪಿಕೊಳ್ಳಲು ಕಥೆಯೇ ಕಾರಣ. ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ’ ಎಂದರು.
ನಾಯಕಿ ಹರ್ಷಿತಾ ರಾಮಚಂದ್ರ, ಈ ಚಿತ್ರದಲ್ಲಿ ದಿವ್ಯ ಎಂಬ ಮಧ್ಯಮ ವರ್ಗದ ಅಂಗನವಾಡಿ ಶಿಕ್ಷಕಿಯ ಪಾತ್ರ ಮಾಡಿದರೆ, ‘ಉಗ್ರಂ’ ಮಂಜು ತಮ್ಮದು ನಾಯಕಿಯನ್ನು ಪ್ರೀತಿಸುವಂತಹ ಮಜವಾದ ಪಾತ್ರವಂತೆ.
‘ಜಂಗಲ್ ಮಂಗಲ್’ ಚಿತ್ರಕ್ಕೆ ವಿಷ್ಣುಪ್ರಸಾದ್ ಛಾಯಾಗ್ರಹಣ, ಪ್ರಸಾದ್ ಕೆ. ಶೆಟ್ಟಿ ಸಂಗೀತ ಮತ್ತು ಮನು ಶೆಡ್ಗಾರ್ ಸಂಕಲನವಿದೆ.
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…
ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…
ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…
ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…