ಮನರಂಜನೆ

ಸದ್ದಿಲ್ಲದೆ ‘ಲವ್ ಮಾಕ್ಟೇಲ್‍ 3’ ಚಿತ್ರ ಪ್ರಾರಂಭಿಸಿದ ಕೃಷ್ಣ

‘ಫಾದರ್’ ಮತ್ತು ‘ಬ್ರ್ಯಾಟ್‍’ ಚಿತ್ರಗಳನ್ನು ಮುಗಿಸಿರುವ ಕೃಷ್ಣ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಕೃಷ್ಣ ಸದ್ದಿಲ್ಲದೆ ‘ಲವ್‍ ಮಾಕ್ಟೇಲ್‍ 3’ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

‘ಲವ್‍ ಮಾಕ್ಟೇಲ್‍ 3’ ಚಿತ್ರವು ‘ಲವ್‍ ಮಕ್ಟೇಲ್‍ 2’ನ ಮುಂದುವರೆದ ಭಾಗವಾಗಿದ್ದು, ಈ ಚಿತ್ರದ ಕೆಲಸಗಳು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಈ ಮಧ್ಯೆ, ಕೃಷ್ಣ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದರಿಂದ, ‘ಲವ್ ‍ಮಾಕ್ಟೇಲ್‍ 3’ನ ಕೆಲಸಗಳು ವಿಳಂಬವಾಯ್ತು. ಇದೀಗ ‘ಫಾದರ್’ ಮತ್ತು ‘ಬ್ರ್ಯಾಟ್‍’ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ‘ಲವ್‍ ಮಾಕ್ಟೇಲ್‍ 3’ ಚಿತ್ರದ ಒಂದು ಹಂತದ ಚಿತ್ರೀಕರಣವನ್ನೂ ಕೃಷ್ಣ ಮುಗಿಸಿದ್ದಾರೆ.

‘ಲವ್‍ ಮಾಕ್ಟೇಲ್‍ 3’ ಕುರಿತು ಮಾತನಾಡುವ ಕೃಷ್ಣ, ಮೊದಲೆರಡು ಭಾಗಗಳಂತೆ ಮೂರನೇ ಭಾಗವೂ ಅಷ್ಟೇ ವಿಭಿನ್ನವಾಗಿರುತ್ತದೆ. ಪಾತ್ರಗಳು ಅದೇ ಇರುತ್ತದೆ. ಆದರೆ, ಇದು ಬೇರೆ ತರಹದ ಸಿನಿಮಾ ಆಗಿರುತ್ತದೆ. ಹಳೆಯ ಪಾತ್ರಗಳ ಜೊತೆಗೆ, ಇನ್ನೊಂದಿಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗುತ್ತವೆ. ಎರಡನೇ ಭಾಗದಲ್ಲಿ ಕೆಲಸ ಮಾಡಿದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆಯುತ್ತದೆ. ಆ ಎರಡು ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರದ ಬಜೆಟ್‍ ಸಹ ಜಾಸ್ತಿ ಇರುತ್ತದೆ. ಹಾಗಂತ ಸುಮ್ಮನೆ ಖರ್ಚು ಮಾಡುತ್ತಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡುತ್ತಿದ್ದೇವೆ’ ಎನ್ನುತ್ತಾರೆ.

‘ಲವ್‍ ಮಾಕ್ಟೇಲ್‍ 3’ ಮಾಡುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಕೃಷ್ಣ, ‘ಒಂದು ಕಥೆ ಮಾಡುವುದು ಸುಲಭ. ಅದರ ಮುಂದುವರೆದ ಭಾಗ ಮಾಡುವುದು ನಿಜಕ್ಕೂ ಕಷ್ಟ. ಒಂದು ಆ್ಯಕ್ಷನ್‍ ಚಿತ್ರದ ಸೀಕ್ವೆಲ್‍ ಮಾಡುವುದು ಸುಲಭದ ವಿಷಯ. ಆದರೆ, ಭಾವನಾತ್ಮಕ ಕಥೆ ಮಾಡುವುದು ಸವಾಲಿನ ಕೆಲಸ. ಅದರಲ್ಲೂ ಮೂರನೆಯ ಭಾಗ ಮಾಡುವುದು ಇನ್ನೂ ಕಷ್ಟ. ನಾನು ಮೊದಲ ಭಾಗದ ಕಥೆ ಬರೆದಾಗ, ಕೇವಲ 19 ದಿನಗಳಲ್ಲಿ ಕಥೆ-ಚಿತ್ರಕಥೆ ಬರೆದಿದ್ದೆ. ಎರಡನೆಯ ಭಾಗ ಬರೆಯುವುದಕ್ಕೆ ಆರು ತಿಂಗಳು ಬೇಕಾಯಿತು. ಮೂರನೆಯ ಭಾಗ ಬರೆಯುವುದಕ್ಕೆ ಮೂರೂವರೆ ವರ್ಷಗಳು ಬೇಕಾದವು’ ಎನ್ನುತ್ತಾರೆ.

ಇನ್ನು, ‘ಬ್ರ್ಯಾಟ್‍’ ಮತ್ತು ‘ಫಾದರ್’ ಚಿತ್ರಗಳ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ, ‘ಇಬ್ಬರಲ್ಲಿ ಯಾರು ಮೊದಲು ಬರುತ್ತಾರೆ ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಎರಡೂ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎರಡೂ ಚಿತ್ರಗಳ ಕೆಲಸಗಳು ಒಂದು ಹಂತಕ್ಕೆ ಬಂದ ನಂತರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ. ವಿಶೇಷವೆಂದರೆ, ಇವೆರಡೂ ಚಿತ್ರಗಳು ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಪ್ಯಾನ್‍ ಇಂಡಿಯಾ ಚಿತ್ರಗಳು ಎನ್ನುತ್ತಾರೆ ಕೃಷ್ಣ.

ಆಂದೋಲನ ಡೆಸ್ಕ್

Recent Posts

ವಿಶ್ವಕಪ್‌ ಗೆದ್ದ ಬಳಿಕ ರೈಲು ಹತ್ತಿ ಬಂದ ಶಿವಂ ದುಬೆ!

ಮುಂಬೈ : ಭಾರತ ತಂಡ ಟಿ20 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್‌ನ್ನು 96 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ…

6 mins ago

ಫಾರುಕ್ ಹತ್ಯೆ ಯತ್ನ : ಆರೋಪಿ ಕಮಲ್‌ ಸಿಂಗ್‌ ಹೇಳಿದ್ದೇನು?

ಜಮ್ಮು : ರಾಷ್ಟ್ರೀಯ ಸಮ್ಮೇಳನ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಫಾರುಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಸಂಜೆ…

23 mins ago

ಅಡುಗೆ ಅನಿಲ ಕೊರತೆ ; ಸಂಸದರು ಬಾಯಿ ಬಿಡಬೇಕು ; ಡಿ.ಕೆ.ಶಿವಕುಮಾರ್‌

ಬೆಂಗಳೂರು : ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು…

50 mins ago

ಫಲ ನೀಡಿದ ಮಾತುಕತೆ : ಹಾರ್ಮುಜ್ ಜಲಸಂಧಿ ದಾಟಿದ ತೈಲ ಟ್ಯಾಂಕರ್‌

ಹೊಸದಿಲ್ಲಿ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿ ಬಂದ್ ಆಗುವ ಆತಂಕದಲ್ಲಿದ್ದ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ.…

1 hour ago

ವೈರಲ್‌ ಹುಡುಗಿ ʻಮೊನಾಲಿಸಾʼ ಮದುವೆಗೆ ತಂದೆ ವಿರೋಧಿಸಿದ್ದೇಕೆ….. ಯಾರಿ ಈ ಹುಡುಗ?

ತಿರುವನಂತಪುರಂ : 2025ರ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ವೈರಲ್ ಸ್ಟಾರ್ ಮೊನಾಲಿಸಾ ಭೋಸ್ಲೆ ಅವರು ತಮ್ಮ ಪ್ರಿಯಕರ ಮುಹಮ್ಮದ್…

2 hours ago

32 ವರ್ಷಗಳ ನಂತರ ನಾಗರತ್ನಮ್ಮ ಸ್ಮಾರಕಕ್ಕೆ ಅಭಿವೃದ್ಧಿ ಭಾಗ್ಯ

ಸಿಎಂಗೆ ಶಾಸಕ ಗಣೇಶ್ ಪ್ರಸಾದ್ ಮನವಿ; ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ:…

2 hours ago