ಬೆಂಗಳೂರು: ಕನ್ನಡಿಗರ ಬಗ್ಗೆ ಮಾತನಾಡಿದ್ದಕ್ಕೆ ಫೋನ್‌ಪೇ ಸಂಸ್ಥೆ ಈಗ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.
ಕನ್ನಡಿಗರ ಬಗ್ಗೆ ಮಾತನಾಡಿದ್ದಕ್ಕೆ ಫೋನ್‌ಪೇ ಸಂಸ್ಥೆ ಈಗ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ನಟ ಕಿಚ್ಚ ಸುದೀಪ್ ಕೂಡ ಫೋನ್‌ಪೇಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆ ಬಗ್ಗೆ ಫೋನ್‌ಪೇ ಸಿಇಓ ಸಮೀರ್ ನಿಗಮ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಈ ಬೆನ್ನಲ್ಲೇ ಫೋನ್‌ಪೇ ಸಿಇಓ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಫೋನ್‌ಪೇ ವಿರುದ್ಧ ಭಾರೀ ಆಕ್ರೋಶ ಹೊರಹಾಕಿರುವ ನಟ ಕಿಚ್ಚ ಸುದೀಪ್ ಅವರು, ಫೋನ್‌ಪೇ ಇನ್ನು ಒಂದು ದಿನದ ಒಳಗೆ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರದ ನಿಲುವಿಗೆ ಬದ್ಧವಾಗಿ ಇರಬೇಕು. ಇಲ್ಲದೇ ಹೋದರೆ ತಾವು ಫೋನ್‌ಪೇ ಬ್ರಾಂಡ್‌ನ ಅಂಬಾಸಿಡರ್ ಆಗಿ ಮುಂದುವರಿಯದೇ ಇರಲು ನಿರ್ಧರಿಸಿದ್ದಾರೆ.
ಈ ಮೂಲಕ ನಟ ಕಿಚ್ಚ ಸುದೀಪ್ ಕನ್ನಡಿಗರ ಪರ ನಿಂತಿದ್ದು, ಅಭಿಮಾನಿಗಳಿಗೆ ಭಾರೀ ಸಂತಸ ತರಿಸಿದ್ದಾರೆ. ಈ ತಕ್ಷಣಕ್ಕೆ ಫೋನ್‌ಪೇ ಸಿಇಓ ಬುದ್ಧಿ ಕಲಿತು, ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆಯಿದೆ.
ಮಂಡ್ಯ: ತಾಲ್ಲೂಕಿನ ಹೊಸ ಬೂದನೂರಿನಲ್ಲಿ ನೆಲೆಯಾಗಿರುವ ಕಾಶಿ ವಿಶ್ವನಾಥ ಹಾಗೂ ಅನಂತಪದ್ಮನಾಭಸ್ವಾಮಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಉತ್ಸವಕ್ಕೆ…
ಬೆಂಗಳೂರು: ಈ ವರ್ಷ ಚಳಿ ಪ್ರಮಾಣ ಹೆಚ್ಚಾಗಿದ್ದರಿಂದ ಬಿಸಿಲ ಝಳವೂ ಹೆಚ್ಚಾಗಿರಲಿದ್ದು, ಮುಂದಿನ ಬೇಸಿಗೆಯಲ್ಲಿ ವಿಪರೀತ ಬಿಸಿಲು ಹವಾಮಾನ ಇರಲಿದೆ…
ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ…
ಬೆಂಗಳೂರು: ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ. ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ…
ಬೆಂಗಳೂರು: ಮನರೇಗಾ ಮರು ಜಾರಿ ಮಾಡುವವರೆಗೆ ನಾವು ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು…
ಮಂಡ್ಯ: ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಮೇಲೆ ದಾಳಿ ನಡೆಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು…