ಮನರಂಜನೆ

ಯಾರೂ ಮುಟ್ಟದ ಕಥೆಯೊಂದನ್ನು ಚಿತ್ರ ಮಾಡ್ತಿದ್ದಾರಂತೆ ನಮ್‍ ಋಷಿ

‘ಒಳಿತು ಮಾಡು ಮನುಸ…’ ಹಾಡಿನ ಖ್ಯಾತಿಯ ನಮ್ ಋಷಿ, ನಿರ್ಮಾಣ, ನಿರ್ದೇಶನ ಹಾಗೂ ನಟನೆ ‘ಫ್ರಾಡ್ ಋಷಿ’ ಚಿತ್ರ ಪ್ರಾರಂಭವೇ ಆಗಿಲ್ಲ. ಆಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಎರಡನೇ ಹಾಡು ‘ಇವನೇ ಇವನೇ ಫ್ರಾಡು ಋಷಿ…’ ಇತ್ತೀಚೆಗೆ ಬಿಡುಗಡೆಯಾಗಿದೆ.

ನಮ್ ಋಷಿ ಬರೆದು ಶ್ರೀಗುರು ಸಂಗೀತ ನೀಡಿರುವ ಹಾಗೂ ಸೋಮಶೇಖರ್ ಅವರು ಹಾಡಿರುವ ಈ ಹಾಡನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿದ್ದಾರೆ. ನಮ್ ಋಷಿ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಇದನ್ನೂ ಓದಿ:-ಐತಿಹಾಸಿಕ ಚಿತ್ರಕ್ಕೆ ಶ್ರೀಮುರಳಿ ನಾಯಕ: ಪುನೀತ್‍ ರುದ್ರನಾಗ್‍ ನಿರ್ದೇಶನ

ಸಿನಿಮಾ ಮಾಡುವುದಕ್ಕೆ ದುಡ್ಡು ಬೇಕಾಗಿಲ್ಲ. ಒಳ್ಳೆಯ ತಂಡ ಬೇಕು ಎನ್ನುವ ಋಷಿ, ‘ಒಳ್ಳೆಯ ತಂಡವೆಂದರೆ, ಒಬ್ಬರನ್ನೊಬ್ಬರು ಪ್ರೀತಿಸುವಂತಿರಬೇಕು. ಅವರು ಬೆಳೆದರೆ ನಾವು ಖುಷಿಪಡಬೇಕು. ನಾವು ಬೆಳೆದರೆ ಅವರು ಖುಷಿಪಡಬೇಕು. ಸಣ್ಣ ವಿಷಯಗಳಿಗೆ ಕಿತ್ತಾಟಗಳಾಗುತ್ತವೆ. ಅದನ್ನೆಲ್ಲಾ ಮೀರಿದ ಒಂದು ತಂಡವಿರಬೇಕು. ನಾನು ಕಲಾವಿದರಿಗೆ ದುಡ್ಡು ಕೊಟ್ಟು ನಟನೆ ಮಾಡಿಸುವುದಿಲ್ಲ. ಕಲಾವಿದರಲ್ಲಿ ಎರಡು ತರಹದ ಕಲಾವಿದರಿರುತ್ತಾರೆ. ಕೆಲವರು ವೃತ್ತಿಪರ ಕಲಾವಿದರು. ಇನ್ನೂ, ಕೆಲವರು ಪ್ಯಾಷನ್‍ಗಾಗಿ ಅಭಿನಯ ಮಾಡುತ್ತಾರೆ. ಅವರಿಗೆ ಹಣದ ಅವಶ್ಯಕತೆ ಇರುವುದಿಲ್ಲ. ವೃತ್ತಿಪರ ಕಲಾವಿದರಿಗೆ ದುಡ್ಡು ಕೊಡಬೇಕಾಗುತ್ತದೆ. ಆದರೆ, ಪ್ಯಾಷನ್ ಇರುವವರನ್ನು ಆಯ್ಕೆ ಮಾಡಿಕೊಂಡರೆ, ಅವರಿಗೆ ಹಣ ನೀಡದಿದ್ದರೂ ಆಗುತ್ತದೆ. ಜೊತೆಗೆ ಅವರಿಂದ ಸಹಕಾರವೂ ಸಿಗುತ್ತದೆ. ನಾನು ಅಂಥವರನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡುತ್ತಿದ್ದೇನೆ’ ಎಂದರು.

‘ಫ್ರಾಡ್‍ ಋಷಿ’ ಚಿತ್ರೀಕರಣ ಅಕ್ಟೋಬರ್‍ ತಿಂಗಳಲ್ಲಿ ಶುರುವಾಗಿ, ಡಿಸೆಂಬರ್‍ ತಿಂಗಳಲ್ಲಿ ಬಿಡುಗಡೆಯಾಗುತ್ತದಂತೆ. ಈ ಕುರಿತು ಮಾತನಾಡುವ ಅವರು, ‘ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಅಕ್ಟೋಬರ್.10ರಿಂದ ಚಿತ್ರೀಕರಣ ಶುರುವಾಗಲಿದೆ. ಇದು ದೊಡ್ಡ ಬಜೆಟ್‍ ಚಿತ್ರವಲ್ಲ. ಆದರೆ, ಕಂಟೆಂಟ್‍ ಬಹಳ ಚೆನ್ನಾಗಿದೆ. ಚಿತ್ರದಲ್ಲಿ ಎಂಟು ಹಾಡುಗಳಿವೆ. ನನ್ನ ಮೂರು ಯಶಸ್ವಿ ಹಾಡುಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇನೆ. ಕಡಿಮೆ ಬಜೆಟ್‍ನಲ್ಲಿ ಈ ಚಿತ್ರ ಮಾಡುತ್ತಿದ್ದೇನೆ. ಶಂಕರ್ ಛಾಯಾಗ್ರಹಣ ಮತ್ತು ಶ್ರೀಗುರು ಸಂಗೀತ ಈ ಚಿತ್ರಕ್ಕಿದೆ. ಒಂದೊಳ್ಳೆಯ ತಂಡ ಕಟ್ಟಿದ್ದೇನೆ. ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಇದುವರೆಗೂ ಯಾರೂ ಮುಟ್ಟದ ಮತ್ತು ಎಲ್ಲರೂ ಹೇಳುವುದಕ್ಕೆ ಹೆದರುವ ಒಂದು ವಿಷಯವನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಇದೊಂದು ಸೂಕ್ಷ್ಮ ವಿಷಯವಿರುವ ಕಥೆ. ಜನರಿಗೆ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

3 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

3 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

3 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

3 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

3 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

3 hours ago