ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಶುಭ ಕೋರಿದ್ದಾರೆ.
ಮುಂಚೆ ಕ್ರಿಕೆಟ್ ಆಡುತ್ತಿದ್ದೆ, ಈಗ ಬರೀ ನೋಡುತ್ತಿದ್ದೇನೆ. ನಮ್ಮ ಭಾರತ ಗೆಲ್ಲಲಿ ಆಲ್ ದಿ ಬೆಸ್ಟ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.
ಇಂಡಿಯಾ ವಿನ್ ಆಗೇ ಆಗುತ್ತಾರೆ. ಆ ಕಡೆ ಟೀಂ ನ್ಯೂಜಿಲೆಂಡ್ ಕೂಡ ಕಡಿಮೆಯಿಲ್ಲ. ಅವರ ಫೀಲ್ಡಿಂಗ್ ನೋಡಿದರೆ ಭಯ ಆಗುತ್ತದೆ. ಈ ಬಾರಿ ಇಂಡಿಯಾ ಗೆಲ್ಲಬೇಕು ಅಂದರೆ, ಪ್ರತಿ ಬಾಲ್ 6 ರನ್ ಹೊಡೆಯಬೇಕು. 4 ರನ್ ಹೊಡೆದರೆ ಪಕ್ಕಾ ಹಿಡಿಯುತ್ತಾರೆ. ಈ ಸಲ ಭಾರತ ತಂಡ ಗೆಲ್ಲಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಚಂದನ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಆಲ್ ದಿ ಬೆಸ್ಟ್ ಟೀಂ ಇಂಡಿಯಾ. ಆವತ್ತಿನ ದಿನ ಯಾರು ಉತ್ತಮ ಆಟವಾಡುತ್ತಾರೋ ಅವರಿಗೆ ಗೆಲುವು ಸಿಗುತ್ತದೆ. ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವ ಮುಖ್ಯ. ಯಾರೇ ಸೋತರೂ ಟ್ರೋಲ್ ಮಾಡಬೇಡಿ. ಆಟ ಕೂಡ ಕಲೆ ತರಾನೇ ಜನರನ್ನು, ದೇಶವನ್ನು ಬೆಸೆಯಬೇಕು ಎಂದು ನಟ ಕಿಶೋರ್ ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.
ಟೀಂ ಇಂಡಿಯಾಗೆ ಆಲ್‌ದಿ ಬೆಸ್ಟ್. ನಮ್ಮ ದೇಶಕ್ಕೆ ಗೆಲುವಾಗಲಿ. ನಮ್ಮ ಇಂಡಿಯಾ ಟೀಂ ಚೆನ್ನಾಗಿ ಆಡಲಿ ಎಂದು ನಟಿ ಅಂಕಿತಾ ಅಮರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ…
ವಿವಾಹದ ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿಯೇ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಲ್ಲಿ ತನಕ ನನಗೆ…
ಮಡಿಕೇರಿ: ಅನೈತಿಕ ಸಂಬಂಧ ಹಿನ್ನೆಲೆ ಸಹೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ೭೦ ವರ್ಷದ ವೃದ್ಧ…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು…