ಮನರಂಜನೆ

‘ಜಿ ಬಾಸ್‍’ ಅಂತ ಕರೆಯಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ ಗಣೇಶ್‍

‘ನನಗೆ ನೀವು ಪ್ರೀತಿಯಿಂದ ‘ಗೋಲ್ಡನ್‍ ಸ್ಟಾರ್’ ಅಂತ ಕರೆದಿದ್ದೀರಿ. ಅಷ್ಟು ಸಾಕು. ‘ಜಿ ಬಾಸ್’ ಎಂದು ಕರೆಯಬೇಡಿ’ ಎಂದು ಗಣೇಶ್‍ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಗುರುವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಖುಷಿಯಿಂದ ‘ಜಿ ಬಾಸ್‍’ ಎಂದು ಕರೆದಿದ್ದು ಗಣೇಶ್ ಗಮನಕ್ಕೆ ಬಂದಿದೆ. ಹಾಗೆ ಕರೆಯಬೇಡಿ ಎಂದು ಗಣೇಶ್‍ ಬಹಳ ನಯವಾಗಿ ತಮ್ಮಅಭಿಮಾನಿಗಳಿಗೆ ಚಿತ್ರದ ಸಂತೋಷಕೂಟದಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಅಭಿಮಾನಿಗಳು ಇತ್ತೀಚೆಗೆ ಸಂಭ್ರಮದಲ್ಲಿ ನನ್ನನ್ನು ‘ಜಿ ಬಾಸ್‍’ ಅಂತ ಕರೆಯುತ್ತಿದ್ದರು. ದಯಮಾಡಿ ನನ್ನನ್ನು ‘ಜಿ ಬಾಸ್‍’ ಅಂತೆಲ್ಲಾ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ ಗಣೇಶ್‍. ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಎಂಬ ಕರೆದಿದ್ದೀರಿ. ನನಗೆ ಅಷ್ಟು ಸಾಕು. ‘ಜಿ ಬಾಸ್‍’ ಅಂತ ಕರೆಯಬೇಡಿ’ ಎಂದು ಗಣೇಶ್‍ ಹೇಳಿದ್ದಾರೆ.

ಇನ್ನು, ಈ ಚಿತ್ರಕ್ಕೆ ಜನ ತೋರುತ್ತಿರುವ ಪ್ರೀತಿಯ ಬಗ್ಗೆ ಗಣೇಶ್‍ ಬಹಳ ಖುಷಿಯಾಗಿದ್ದಾರೆ. ‘ಮಂಡ್ಯದಲ್ಲಿ ಒಂದೇ ಕುಟುಂಬದ 30 ಜನ ಒಟ್ಟಿಗೆ ಬಂದು ಚಿತ್ರ ನೋಡಿದ್ದಾರೆ. ಇದು ಅವರು ನನ್ನ ಮೇಲೆ ಇಟ್ಟ ಪ್ರೀತಿಯನ್ನು ತೋರಿಸುತ್ತದೆ. ಪ್ರತೀ ಸಿನಿಮಾದಲ್ಲೂ ಜನರನ್ನು ಮನರಂಜಿಸುವ ಕೆಲಸ ಮಾಡುತ್ತಿರುತ್ತೀನಿ. ಅದು ಈ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಆಗಿದೆ. ನಿರ್ದೇಶಕರು 50 ಲಕ್ಷ ಜನ ನೋಡಿದರೆ ಸಾಕು ಎಂದರು. ನನಗೆ 30 ಲಕ್ಷ ಜನ ನೋಡುತ್ತಾರೆ ಎಂಬ ಭರವಸೆ ಇದೆ. ಚಿತ್ರ ನೋಡಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ’ ಎಂದರು.

‘ಕೃಷ್ಣಂ ಪ್ರಣಯ ಸಖಿ’ ಚಿತ್ರವನ್ನು ಗೆಲ್ಲಿಸಿದ ಜನರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಗಣೇಶ್ ‍ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ಅವರು ಟೂರ್‍ ಮಾಡಿ ಧನ್ಯವಾದ ಹೇಳುತ್ತಾರಂತೆ. ‘ಮೊದಲು ನಾವು ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್‍ ಇವೆಂಟ್‍ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಈ ಬಾರಿ ಯಶಸ್ಸಿನ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಚನೆ ಇದೆ. ಅದರ ಜೊತೆಗೆ ಮುಂದಿನ ವಾರದಿಂದ ಕರ್ನಾಟಕದಾದ್ಯಂತ ಟ್ರಿಪ್‍ ಮಾಡುವ ಯೋಚನೆ ಇದೆ. ಪ್ರತಿ ಜಿಲ್ಲೆ, ತಾಲ್ಲೂಕಿಗೆ ಹೋಗಿ ಧನ್ಯವಾದ ಹೇಳಿ ಬರುತ್ತೇವೆ. ನಾನು ಯಾವತ್ತೂ ಹೀಗೆ ಟೂರ್ ಮಾಡಿದವನಲ್ಲ. ಇದೇ ಮೊದಲ ಬಾರಿಗೆ ಟೂರ್‍ ಮಾಡುತ್ತಿದ್ದೇನೆ’ ಎಂದರು.

ಭೂಮಿಕಾ

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

34 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago