ತಮಿಳಿನ ಸ್ಟಾರ್ ನಟ ‘ಇಳಯದಳಪತಿ’ ವಿಜಯ್ ನಟಿಸಿರುವ The Greatest of All Time (GOAT) ಚಿತ್ರವು ಇಂದು (ಸೆಪ್ಟೆಂಬರ್ 05) ಜಗತ್ತಿನಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಈ ಚಿತ್ರಕ್ಕೆ ವಿಜಯ್ ಪಡೆದಿರಬಹುದಾದ ಸಂಭಾವನೆ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ.
ಸಾಮಾನ್ಯವಾಗಿ ಒಂದು ಚಿತ್ರದ ಬಜೆಟ್ ಬಗ್ಗೆ ಅಥವಾ ನಾಯಕರ ಸಂಭಾವನೆಯ ಕುರಿತು ನಿರ್ಮಾಪಕರು ಮಾತನಾಡುವುದಿಲ್ಲ. ಸಂಭಾವನೆಯ ವಿಷಯವನ್ನು ಗೌಪ್ಯವಾಗಿ ಇಡಲಾಗಿದೆ. ಆದರೆ, ಈ ಚಿತ್ರದ ನಿರ್ಮಾಪಕರೇ ವಿಜಯ್ ಸಂಭಾವನೆ ಕುರಿತು ಒಂದಿಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.
‘GOAT’ ನಿರ್ಮಾಪಕಿ ಅರ್ಚನಾ ಕಲಾಪತಿ ಅವರ ಪ್ರಕಾರ, ಚಿತ್ರಕ್ಕೆ ವಿಜಯ್ ಪಡೆದಿರುವ ಸಂಭಾವನೆ 200 ಕೋಟಿ ರೂ.ಗಳಂತೆ. ಚಿತ್ರದ ಬಜೆಟ್ 380ರಿಂದ 400 ಕೋಟಿಯವರೆಗೂ ಆಗಿದ್ದು, ಅದರಲ್ಲಿ ವಿಜಯ್ ಅವರ ಸಂಭಾವನೆಯೇ ಅರ್ಧದಷ್ಟು ಆಗಿದೆ ಎಂದು ಹೇಳಲಾಗಿದೆ. ಈ ಮೂಲಕ ಭಾರತೀಯ ನಟರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರು ಯಾರು ಎಂಬ ಚರ್ಚೆಗಳು ಆಗಾಗ ಆಗುತ್ತಲೇ ಇರುತ್ತವೆ. ವಿಜಯ್ ಅವರ ಹೆಸರು ಸಹ ಈ ಪಟ್ಟಿಯಲ್ಲಿ ಕೆಲವು ವರ್ಷಗಳಿಂದ ಇದ್ದು, ಈಗ ಅವರು ಅಗ್ರಸ್ಥಾನಕ್ಕೇರಿದ್ದಾರೆ.
‘GOAT’ ಚಿತ್ರದಲ್ಲಿ ವಿಜಯ್ ಜೊತೆಗೆ ಪ್ರಶಾತ್, ಅಜ್ಮಲ್ ಅಮೀರ್, ಸ್ನೇಹಾ, ಲೈಲಾ, ಪ್ರಭುದೇವ, ಮೋಹನ್, ಜಯರಾಂ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ-ರಾಜಕಾರಣಿ ದಿವಂಗತ ವಿಜಯಕಾಂತ್ ಅವರನ್ನು ಈ ಚಿತ್ರದಲ್ಲಿ ಏಐ ತಂತ್ರಜ್ಞಾನದ ಮೂಲಕ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡಿದರೆ, ಯುವನ್ ಶಂಕರ್ ರಾಜ ಸಂಗೀತ ಸಂಯೋಜಿಸಿದ್ದಾರೆ. ಕಲಾಪತಿ ಎಸ್ ಅಘೋರಂ ಈ ಚಿತ್ರವನ್ನು ಎಜಿಎಸ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…