dk and kicha
ಬೆಂಗಳೂರು : ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ದರ್ಶನ್ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆಯೂ ಒಂದಿಷ್ಟು ಮೆಲುಕು ಹಾಕಿದ್ದು, ಇದೇ ವೇಳೆ ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟು ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ನಟ್ಟು ಬೋಲ್ಟು ಕಿತಾಪತಿ ಸಾಧು ಕೋಕಿಲ ಅವರದ್ದು, ಇದ್ರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಸಾಧು ಕೋಕಿಲ ಅವರು ಆಮೇಲೆ ಹೇಳ್ತಾರೆ, ಎಲ್ಲಾರನ್ನೂ ಒಟ್ಟಿಗೆ ಕರೆದ್ರೆ ನಾನು ಹೇಗೆ ಮೆಂಟೇನ್ ಮಾಡ್ಲಿ? ಯಾರಿಗೆ ಸೆಕ್ಯೂರಿಟಿ ಕೊಡ್ಲಿ ಅಂತಾರೆ. ಅದನ್ನ ಮೊದಲೇ ಅವರಿಗೆ ಹೇಳ್ಬೇಕು ತಾನೆ. ಅಲ್ಲಿ ಬಂದು ಹೇಳಿದಾಗ ಸೈಲೆಂಟ್ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ. ಅಷ್ಟಕ್ಕೆ ಕೆಲವರು ದೊಡ್ಡ ದೊಡ್ಡ ಮಾತುಗಳನ್ನಾಡಿದರು, ಪರ್ವಾಗಿಲ್ಲ ಅಂದರು.
ಪಾಪ ಸಾಧು ಅವರದ್ದು ಇದರಲ್ಲಿ ಏನೂ ತಪ್ಪಿಲ್ಲ. ಅವರು ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದ್ರೆ ಸೀರಿಯಸ್ ಆಗಿಬಿಡ್ತು ಅಷ್ಟೇ ಅಂತ ಹೇಳಿದರು.
ಡಿಕೆಶಿ ನಟ್ಟು ಬೋಲ್ಟು ಟೈಟ್ ಮಾಡೋದಾಗಿ ಹೇಳಿದ್ದೇಕೆ?
ಬೆಂಗಳೂರಲ್ಲೇ ಸಿನಿ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಮಾತನಾಡುವಾಗ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ. ಇದನ್ನು ವಾರ್ನಿಂಗ್ ಅಂತಾ ಆದ್ರೂ ಅಂದುಕೊಳ್ಳಿ, ಮನವಿ ಅಂತಾ ಆದ್ರೂ ಅಂದುಕೊಳ್ಳಿ. ಥಿಯೇಟರ್‌ಗೆ ಪರ್ಮಿಷನ್ ಕೊಡಲಿಲ್ಲಾ ಅಂದ್ರೆ ಸಿನಿಮಾನೇ ರಿಲೀಸ್ ಆಗಲ್ವಲ್ಲ ಅಂತ ಹೇಳಿದ್ದರು. ಈ ಹೇಳಿಕೆ ಸಿನಿಮಾರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು, ಇಡೀ ಚಿತ್ರರಂಗವೇ ದಂಗಾಗಿತ್ತು. ಆ ಸಮಯಕ್ಕೆ ಕೆಲವು ನಟ ನಟಿಯರು ಪ್ರತಿಕ್ರಿಯಿಸಿದ್ರು, ಕೆಲವರು ಡಿಕೆಶಿ ವಿರುದ್ಧ ಬೇಸರವನ್ನು ಸಹ ಹೊರ ಹಾಕಿದ್ದರು.
ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…
ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…
ಮಂಡ್ಯ: ಇದೇ ಅಕ್ಟೋಬರ್.11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…
ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್…