ಮನರಂಜನೆ

‘ದೂರ ತೀರ ಯಾನ’ಕ್ಕೆ ಹೊರಟ ನಿರ್ದೇಶಕ ಮಂಸೋರೆ …

ಮಂಸೋರೆ ಚಿತ್ರಗಳೆಂದರೆ ಏನಾದರೂ ಸಾಮಾಜಿಕ ಸಮಸ್ಯೆ, ಕಾಳಜಿ ಇರಬೇಕು ಎನ್ನುವಷ್ಟರ ಮಟ್ಟಿಗೆ ಆ ತರಹದ ಚಿತ್ರಗಳನ್ನೇ ಮಾಡುತ್ತಿದ್ದರು ಮಂಸೋರೆ. ಅದಕ್ಕೆ ಉದಾಹರಣೆಯಾಗಿ ‘ಆ್ಯಕ್ಟ್ 1978’, ‘ಹರಿವು’, ’19.20.21’ ಮುಂತಾದ ಚಿತ್ರಗಳು ಸಿಗುತ್ತವೆ. ಅದೇ ತರಹದ ಚಿತ್ರಗಳನ್ನು ಮಾಡುತ್ತಿದ್ದರೆ, ಬ್ರಾಂಡ್‍ ಆಗಿಬಿಡಬಹುದು ಎಂದು ಅವರಿಗೆ ಅನಿಸಿದ್ದಿದೆ. ಅದೇ ಕಾರಣಕ್ಕೆ, ಅವರು ಒಂದು ವರ್ಷದ ಗ್ಯಾಪ್‍ನ ನಂತರ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ಪ್ರೇಮಕಥೆಯೊಂದನ್ನು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ ‘ದೂರ ತೀರ ಯಾನ’ ಎಂಬ ಹೆಸರು ಇಡಲಾಗಿದೆ.

‘ದೂರ ತೀರ ಯಾನ’ ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್‍ನಡಿ ದೇವರಾಜ್‍ ನಿರ್ಮಿಸುತ್ತಿದ್ದು, ವಿಜಯ್‍ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್‍ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಂಸೋರೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಕಥೆ ಹೇಳುವ ಶೈಲಿ ಬದಲಿಸುತ್ತಿರುವುದಾಗಿ ಹೇಳುವ ಮಂಸೋರೆ, ‘ಇಲ್ಲೂ ಕಥೆ ಆಳವಾಗಿದೆ. ಅದನ್ನು ಹೇಳುವ ಶೈಲಿ ಮಾತ್ರ ಬದಲಾಯಿಸುತ್ತಿದ್ದೇನೆ. ಇದೊಂದು ಪ್ರಯಾಣದ ಚಿತ್ರ. ಬೆಂಗಳೂರಿನಿಂದ ಶುರುವಾಗಿ ಗೋವಾದಲ್ಲಿ ಮುಗಿಯುತ್ತದೆ. ಇದೊಂದು ಪ್ರೇಮಕಥೆ. ಮೊದಲ 10 ನಿಮಿಷ ಬೆಂಗಳೂರಿನಲ್ಲಿ ನಡೆಯುತ್ತದೆ. ನಂತರ ಗೋವಾವರೆಗೂ ಪ್ರಯಾಣ ಮುಂದುವರೆಯುತ್ತದೆ. ಇಲ್ಲಿ ನಾಯಕ ಪಿಟೀಲು ನುಡಿಸುತ್ತಾನೆ. ನಾಯಕಿ ಕೊಳಲು ನುಡಿಸುತ್ತಾಳೆ. ಅದು ಅವರಿಬ್ಬರ ಪ್ರವೃತ್ತಿ. ವೃತ್ತಿಯಲ್ಲಿ ಅವರಿಬ್ಬರೂ ಸಾಫ್ಟ್ವೇರ್ ಇಂಜಿನಿಯರ್‍ಗಳು. ಅವರಿಬ್ಬರ ಪ್ರೀತಿಯ ಹುಡುಕಾಟವೇ ಈ ಚಿತ್ರದ ಕಥೆ’ ಎಂದರು.

ಇದೊಂದು ತೀರಾ ಗಂಭೀರವಲ್ಲದ ಮತ್ತು ಲವಲವಿಕೆಯಿಂದ ಕೂಡಿರುವ ಚಿತ್ರ ಎನ್ನುವ ಮಂಸೋರೆ, ‘ಇದೊಂದು ಪ್ರೀತಿಯ ಹುಡುಕಾಟದ ಕಥೆ. ಈಗ ಪ್ರೀತಿಯ ವ್ಯಾಖ್ಯಾನ ಬದಲಾಗಿದೆ. ಅದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರಕ್ಕಾಗಿ ಅವರು ಒಂದು ವರ್ಷ ರೀಸರ್ಚ್ ಮಾಡಿದ್ದೇನೆ. ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಅವಲೋಕಿಸಿದ್ದೇನೆ. ಪ್ರೇಕ್ಷಕರು ಯಾವ ರೀತಿಯ ಕಥೆ ಮತ್ತು ಚಿತ್ರಗಳನ್ನು ಇಷ್ಟಪಡುತ್ತಾರೆ ಎಂದು ಮಾಹಿತಿ ಕಲೆ ಹಾಕಿ, ಅದೆಲ್ಲವನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇನೆ’ ಎಂದರು.

ವಿಜಯ್‍ ಕೃಷ್ಣಗೆ ಇದು ಮೊದಲ ಚಿತ್ರ. ಆದರೆ, ಹಿಂದಿ ಸಿನಿಮಾ ಮತ್ತು ವೆಬ್‍ಸರಣಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಮೂಲತಃ ಕನ್ನಡದವರಾದ ಅವರಿಗೆ ಕನ್ನಡದಲ್ಲೇ ಏನಾದರೂ ಮಾಡಬೇಕು ಎಂಬ ಆಸೆ ಇತ್ತಂತೆ. ಅದು ಈ ಚಿತ್ರದಲ್ಲಿ ಈಡೇರಿದೆ. ಇನ್ನು, ನಾಯಕಿ ಪ್ರಿಯಾಂಕಾಗೆ ಇದು ಮೂರನೆಯ ಚಿತ್ರ. ಈ ಹಿಂದೆ ‘ಬ್ಯಾಡ್‍ ಮ್ಯಾನರ್ಸ್’ ಮತ್ತು ‘ರುದ್ರ ಗರುಡ ಪುರಾಣ’ ಚಿತ್ರಗಳಲ್ಲಿ ಅವರು ನಟಿಸಿದ್ದರು.

‘ದೂರ ತೀರ ಯಾನ’ ಚಿತ್ರ ಮುಂದಿನ ಜುಲೈನಲ್ಲಿ ಬಿಡುಗಡೆ ಆಗಲಿದೆ. ಶೇಖರ್‍ ಚಂದ್ರು ಛಾಯಾಗ್ರಹಣ ಮತ್ತು ಬಕ್ಕೇಶ್‍ ಸಂಗೀತ ಈ ಚಿತ್ರಕ್ಕಿದೆ.

ಭೂಮಿಕಾ

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago