ಮನರಂಜನೆ

ಸೋನಲ್‍ಗೆ ಲೈನ್‍ ಹೊಡೆಯುತ್ತಿದ್ದೀಯ ಎಂದು ದರ್ಶನ್‍ ಕಿಚಾಯಿಸುತ್ತಿದ್ದರು: ತರುಣ್ ಸುಧೀರ್

ತರುಣ್‍ ಸುಧೀರ್ ಹಾಗೂ ಸೋನಲ್‍ ಇದೇ ಆಗಸ್ಟ್ 11ರಂದು ಮದುವೆಯಾಗುತ್ತಿದ್ದಾರೆ. ಈ ವಿಷಯವನ್ನು ಈಗಾಗಲೇ ಇಬ್ಬರೂ ಅಧಿಕೃತವಾಗಿ ಘೋಷಿಸಿದ್ದು, ಆಹ್ವಾನ ಪತ್ರಿಕೆಯನ್ನೂ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಇಬ್ಬರೂ ಶನಿವಾರ ಮಾಧ್ಯಮದವರ ಮುಂದೆ ಬಂದು ಆಹ್ವಾನಿಸುವುದರ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಪರಿಚಯದ ಕುರಿತು ಮಾತನಾಡಿದ ತರುಣ್‍ ಸುಧೀರ್, ‘‘ರಾಬರ್ಟ್’ ಚಿತ್ರದ ಸಂದರ್ಭದಲ್ಲಿ ನಮ್ಮಿಬ್ಬರ ಭೇಟಿಯಾಯಿತು. ನಮ್ಮ ಸಂಬಂಧ ಬಹಳ ವೃತ್ತಿಪರವಾಗಿತ್ತು. ಆ ನಂತರ ನಾಲ್ಕು ವರ್ಷಗಳ ಕಾಲ ಇಬ್ಬರೂ ವರ್ಷಕ್ಕೆ ಎರಡು ಮೆಸೇಜ್‍ಗಳನ್ನು ಹಾಕುತ್ತಿದ್ದೆವು. ಅವರು ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಮೆಸೇಜ್ ಮಾಡಿದರೆ, ನಾನು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮೆಸೇಜ್ ಮಾಡುತ್ತಿದ್ದೆ. ಅದು ಬಿಟ್ಟರೆ ಹೆಚ್ಚು ಮಾತಿರಲಿಲ್ಲ. ಯಾವುದಾದರೂ ಸಮಾರಂಭದಲ್ಲಿ ಸಿಕ್ಕರೆ ಹಲೋ ಎನ್ನುವುದು ಬಿಟ್ಟರೆ ನಮ್ಮಿಬ್ಬರ ನಡುವೆ ಹೆಚ್ಚು ಮಾತಿರಲಿಲ್ಲ. 2023ರಲ್ಲಿ ನಮ್ಮಿಬ್ಬರ ಬಾಂಡಿಂಗ್‍ ಶುರುವಾಯ್ತು’ ಎಂದರು.

‘ರಾಬರ್ಟ್’ ಚಿತ್ರದಲ್ಲಿ ದರ್ಶನ್‍ ಈ ವಿಷಯವಾಗಿ ಬಹಳ ಕಿಚಾಯಿಸುತ್ತಿದ್ದರು ಎಂದ ತರುಣ್, ‘’ರಾಬರ್ಟ್’ ಚಿತ್ರದ ಶೂಟಿಂಗ್ ಮಾಡುವಾಗ, ಸೋನಾಲ್‍ ಮಾತ್ರ ಯಾಕೆ ಇಷ್ಟು ಚೆನ್ನಾಗಿ ಫ್ರೇಮ್ ಇಡುತ್ತೀಯಾ? ನಮ್ಮನ್ನು ಯಾಕೆ ಚೆನ್ನಾಗಿ ತೋರಿಸಲ್ಲ? ಎಂದು ಕಾಲೆಳೆಯುತ್ತಿದ್ದರು. ನೀನು ಅವರಿಗೆ ಲೈನ್‍ ಹೊಡೆಯುತ್ತಿದ್ದೀಯ ಎಂದು ದರ್ಶನ್‍ ಕಿಚಾಯಿಸುತ್ತಿದ್ದರು. ಸೆಟ್‍ನಲ್ಲಿ ರೇಗಿಸುತ್ತಿದ್ದರು. ಅಮ್ಮ ಒಮ್ಮೆ ಸೆಟ್‍ಗೆ ಬಂದಾಗ, ಇವನಿಗೆ ಮದುವೆ ಮಾಡಿಸಲಾ? ಎಂದು ಕೇಳಿದ್ದರು. ಅದಕ್ಕೆ ಅಮ್ಮ, ‘ನೀನು ಯಾರನ್ನು ತೋರಿಸುತ್ತೀಯೋ, ಅವರು ನನಗೆ ಓಕೆ’ ಎಂದಿದ್ದರು. ಇದೊಂದು ತಮಾಷೆಯ ವಿಷಯವಾಗಿತ್ತು. ಬಹುಶಃ ಸೆಟ್‍ನಲ್ಲಿ ಹೀಗೆ ಮಾತು ಕೇಳಿಬಂದಿದ್ದರಿಂದ ಶುರುವಾಯ್ತೇನೋ ಗೊತ್ತಿಲ್ಲ. ಸೋನಲ್‍ ಬೇರೆ ಚಿತ್ರಗಳ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ, ‘ನೀವು ಮತ್ತು ತರುಣ್ ಡೇಟ್ ಮಾಢುತ್ತಿದ್ದೀರಾ?’ ಎಂದು ಕೇಳುತ್ತಿದ್ದರಂತೆ. ಆಗ ನಮಗೆ ಸರಿಯಾದ ಪರಿಚಯವಿರಲಿಲ್ಲ. ಸ್ನೇಹಿತರಾದ ಸುಧಾಕರ್, ಚಿಕ್ಕಣ್ಣ ಯಾವಾಗಲೂ ಹೇಳುತ್ತಿದ್ದರು. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಮದುವೆಯಾಗಿ’ ಎನ್ನುತ್ತಿದ್ದರು. ಸೋನಲ್ ಒಂದು ದಿನ ಫೋನ್ ಮಾಡಿ, ‘ಎಲ್ಲರೂ ನಮ್ಮ ಬಗ್ಗೆ ಮಾತಾಡುತ್ತಿದ್ದಾರೆ’ ಎಂದರು. ‘ನನ್ನ ಸ್ನೇಹಿತರು ಹಾಗೇ ಹೇಳುತ್ತಿದ್ದಾರೆ’ ಎಂದೆ. ಪದೇಪದೇ ಈ ವಿಷಯ ಕೇಳಿಬರುತ್ತಿದೆ, ಬಹುಶಃ ಪ್ರಕೃತಿಯೇ ನಮ್ಮನ್ನು ಒಂದು ಮಾಡುತ್ತಿದೆಯಾ? ಎಂದನಿಸಿತು. ಮೊದಲು ಪರಸ್ಪರ ಅರ್ಥ ಮಾಡಿಕೊಳ್ಳೋಣ ಎಂದು ಮುಂದಾದೆವು. ಕೆಲವು ತಿಂಗಳುಗಳ ಕಾಲ ಅರ್ಥ ಮಾಡಿಕೊಂಡು, ಈಗ ಮದುವೆ ಆಗುತ್ತಿದ್ದೇವೆ’ ಎಂದರು.

ಇನ್ನು, ದರ್ಶನ್‍ ಅವರಿಗೆ ಮದುವೆ ವಿಷಯದ ಬಗ್ಗೆ ಗೊತ್ತಿತ್ತಂತೆ. ‘ದರ್ಶನ್‍ ಅವರ ಬಳಿ ಡೇಟ್‍ ಬಗ್ಗೆ ಅವರಿಗೆ ಮೊದಲೇ ಮಾತಾಡಿದ್ದೆ. ಅವರು ಓಕೆ ಎಂದಿದ್ದರು. ಅವರಿಗೆ ಎಲ್ಲವೂ ಗೊತ್ತಿತ್ತು. ನಾನು ಜೈಲಿಗೆ ಹೋದಾಗ ಅವರು ಮೊದಲು ಹಾಯ್‍, ಹೆಲೋ ಎನ್ನಲಿಲ್ಲ. ಮದುವೆ ತಯಾರಿ ಸರಿಯಾಗಿ ನಡೆಯುತ್ತಿದೆಯಾ ಎಂದರು. ಯಾವುದೂ ಬದಲಾಗಬಾರದು, ಅಂದುಕೊಂಡ ದಿನದಂದೇ ಮದುವೆ ಮಾಡಿಕೊಳ್ಳಬೇಕು. ಏನೂ ಟೆನ್ಶನ್ ‍ಮಾಡಿಕೊಳ್ಳಬೇಡ. ನಾನು ಖಂಡಿತಾ ಬರುತ್ತೇನೆ. ಡೇಟ್ ಮುಂದಕ್ಕೆ ಹಾಕಬೇಡ ಎಂದು ಹೇಳಿದ್ದರು’ ಎಂದರು ತರುಣ್‍.

ಮದುವೆ ನಂತರ ನಟನೆ ಮುಂದುವರೆಸುವುದಾಗಿ ಹೇಳುವ ಸೋನಲ್, ‘ಮದುವೆ ನಂತರ ಖಂಡಿತಾ ಸಿನಿಮಾ ಮಾಡುವುದನ್ನು ಮುಂದುವರೆಸುತ್ತೇನೆ. ಈಗಾಗಲೇ ಒಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ ನಟಿಸುತ್ತೇನೆ. ಸಣ್ಣ ಗ್ಯಾಪ್‍ ತೆಗೆದುಕೊಂಡು, ನಟನೆಯನ್ನು ಮುಂದುವರೆಸುತ್ತೇನೆ’ ಎಂದರು.

ಭೂಮಿಕಾ

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

3 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

4 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

4 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

4 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

4 hours ago