ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಿದ್ಯಾರ್ಥಿಯಾದ ಮೈಸೂರಿಗ ಚಿದಾನಂದ್ ಎಸ್ ನಾಯಕ್ ಅವರ ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ! ಎಂಬ ಕಿರು ಚಿತ್ರಕ್ಕಾಗಿ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಲಾ ಸಿನೆಫ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇವರಿಗೆ ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮೇ.23 ರಂದು ಬುನ್ಯುಯಲ್ ಥಿಯೇಟರ್‌ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಫೈನಲ್ ಹಂತಕ್ಕೆ ಒಟ್ಟು 18 ಕಿರು ಚಿತ್ರಗಳು ಆಯ್ಕೆಯಾಗಿದ್ದು, ಎಲ್ಲವನ್ನು ಸೋಲಿಸಿರುವ ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ! ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ.
ಇನ್ನು 1 ವರ್ಷದ ಟಿಲಿವಿಷನ್ ಕೋರ್ಸ್‌ನ ವಿದ್ಯಾರ್ಥಿಯೊಬ್ಬನ ಚಿತ್ರ ಕ್ಯಾನಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಇದೇ ಮೊದಲಾಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಕಿಂಗ್ ಸ್ಟಾರ್ ಯಶ್, ಕೇನ್ಸ್ ನಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ಲಾ ಸಿನೆಫ್ ಪ್ರಶಸ್ತಿ ಗೆದ್ದಿದಕ್ಕಾಗಿ ಚಿದಾನಂದ್ ಎಸ್. ನಾಯಕ್ ಹಾಗೂ ಸನ್ ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ! ಗೆ ಅನಂತನಾಂತ ವಂದನೆಗಳು. ನೀವು ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಹೊದಿಸುವುದನ್ನು ನೋಡಲು ಬಯಸುತ್ತೇನೆ ಎಂದು ರಾಕಿ ಭಾಯ್ ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.
ಲಾ ಸಿನೆಫ್ ವಿಭಾಗವು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಪಂಚದಾದ್ಯಂತ ಚಲನಚಿತ್ರ ಶಾಲೆಗಳಿಂದ ಚಿತ್ರಗಳನ್ನು ಗುರುತಿಸುತ್ತದೆ. ಈ ವರ್ಷ ಒಟ್ಟು 18 ಕಿರುಚಿತ್ರಗಳು ಆಯ್ಕೆಯಾಗಿದ್ದು, ಅದರಲ್ಲಿ 14 ಲೈವ್ ಅಕ್ಷನ್ ಮತ್ತು 4 ಆನಿಮೇಷನ್ ಚಿತ್ರಗಳು ಆಯ್ಕೆಯಾಗಿವೆ. ಈ ಸ್ಪರ್ಧೆಯಲ್ಲಿ 2263 ಚಲನಚಿತ್ರಗಳು ಭಾಗವಹಿಸಿದ್ದವು.
ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ! ಕಥೆಯು ವಯಸ್ಸಾದ ಅಜ್ಜಿಯು ಹುಂಜವನ್ನು ಕದಿಯುವ ಕಥೆಯಾಗಿದ್ದು, ಇದು ಸಮುದಾಯವನು ಅಸ್ತವ್ಯಸ್ಥಗೊಳಿಸುತ್ತದೆ. ಹುಂಜವನ್ನು ಮರಳಿ ಪಡೆಯಲು ಭವಿಷ್ಯವಾಣಿಯ ಮೊರೆ ಹೋಗಿ, ಅಲ್ಲಿಂದ ಅಜ್ಜಿಯ ಕುಟುಂಬವನ್ನು ಗಡಿಪಾರು ಮಾಡುತ್ತದೆ. ಇದು ಕಥೆಯ ತಿರುಳಾಗಿದೆ.
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…
ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ…