ಮನರಂಜನೆ

ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಅನುರಾಗ್‌ ಕಶ್ಯಪ್‌

ದಕ್ಷಿಣ ಸಿನಿರಂಗದತ್ತ ಬಾಲಿವುಡ್‌ ತಾರೆಯರು ಬರುವುದು ಹೊಸದೇನಲ್ಲ. ಈಗಾಗಲೇ ಅನೇಕ ನಟ-ನಟಿಯರು ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿತ್ತಿದ್ದಾರೆ. ಈ ಸಾಲಿನಲ್ಲಿ ಇದೀಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಸೇರ್ಪಡೆಯಾಗಿದ್ದಾರೆ.

ಅನುರಾಗ್‌ ಕಶ್ಯಪ್‌ ತಮಿಳಿನ ʼಮಹಾರಾಜʼ, ತೆಲುಗಿನ ʼಡಕಾಯಿತ್‌ʼ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಅವರು, ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಹಾಸ್ಯ ನಟ-ನಿರ್ದೇಶಕ ಸಂಜಯ್‌ ಶಾಸ್ತ್ರಿ ನಿರ್ದೇಶನ ಮಾಡುತ್ತಿರುವ ಕನ್ನಡದ ‘8’ ಸಿನಿಮಾದಲ್ಲಿ ಅನುರಾಗ್‌ ಕಶ್ಯಪ್‌ ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆದ ‘8’ ಸಿನಿಮಾದ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಇದೊಂದು ಎಮೋಷನಲ್‌ ಕಥೆಯಾಗಿದ್ದು, ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ಅರವಿಂದ್‌ ಹಾಗೂ ಸಂಜಯ್‌ ಅವರಿಗೆ ಧನ್ಯವಾದ ಎಂದರು.

ಫುಟ್‌ಬಾಲ್‌ ಆಟದ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಎವಿಆರ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾದ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಅರವಿಂದ್‌ ವೆಂಕಟೇಶ್‌ ರೆಡ್ಡಿ ಹಣ ಹೂಡುತ್ತಿದ್ದು, ನಾಯಕ ನಟನಾಗಿ ಬಿಗ್‌ಬಾಸ್‌ ಖ್ಯಾತಿಯ ಮಹೇಶ್‌ ಕಾರ್ತಿಕ್‌ ನಟಿಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ದರ್ಶನ್‌ ಗ್ಯಾಂಗ್‌ ವಿರುದ್ಧ ಏ.2ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್‌ ಗ್ಯಾಂಗ್‌ ಜಾಮೀನು ಅರ್ಜಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಏಪ್ರಿಲ್‌.2 ರಂದು…

50 mins ago

ಕೊಡಗು| ವಿರಾಜಪೇಟೆ ಪಟ್ಟಣದಲ್ಲಿ ಒಂಟಿ ಸಲಗದ ಓಡಾಟ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಟ್ಟಣದ ಮಾರಿಯಮ್ಮ ದೇವಸ್ಥಾನದಿಂದ ತೆಲುಗರ ಬೀದಿಯಲ್ಲಿ ಒಂಟಿ ಸಲಗವೊಂದು ಓಡಾಟ ನಡೆಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ…

2 hours ago

ಚಾಮರಾಜನಗರ: ಹೈ-ಟೆನ್ನನ್ ವಿದ್ಯುತ್ ಕಂಬ ಏರಿ ಮೃತ ಪಟ್ಟ ಯುವಕ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಿ.ಸಿ.ಹುಂಡಿ ಗ್ರಾಮದ ಬಳಿ ಇರು ಹೈ-ಟೆನ್ನನ್‌ ವಿದ್ಯುತ್‌ ಕಂಬ ಏರಿ ಓರ್ವ ಯುವಕ ಮೃತಪಟ್ಟಿದ್ದಾನೆ.…

2 hours ago

ಪಾಂಡವಪುರ: ಪರಿಹಾರ ವಿಳಂಬ, ಬಸ್‌ ಜಪ್ತಿಗೆ ಪಟ್ಟಣ ನ್ಯಾಯಾಲಯ ಆದೇಶ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬಸ್‌ ನಿಲ್ದಾಣದಲ್ಲಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿ ಸಂಸ್ಥೆಯೂ…

3 hours ago

ಆತ್ಮಹತ್ಯೆಯ ಬೆದರಿಕೆಗಳಿಗೆ ಹೆದರಬೇಕಿಲ್ಲ

-ಅಂಜಲಿ ರಾಮಣ್ಣ ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆ-ತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ…

3 hours ago

ಕೂದಲು ಆರೈಕೆಗೆ ಈರುಳ್ಳಿ ಮತ್ತು ಮೆಂತ್ಯೆ

ಬಿರುಬೇಸಿಗೆಗೆ ಕೂದಲ ಆರೈಕೆಯೆಡೆಗೆ ಗಮನಹರಿಸುವುದು ಮುಖ್ಯ. ಬೇಸಿಗೆಯ ದೂಳಿಗೆ ಸಿಕ್ಕ ಕೂದಲು ಶುಷ್ಕಗೊಳ್ಳುತ್ತದೆ. ಕೂದಲ ಆರೈಕೆಗೆ ನಿತ್ಯ ಬಳಸುವ ಈರುಳ್ಳಿ…

4 hours ago