ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಬಂಧನವಾಗಿದ್ದು ವಿಚಾರಣೆ ನಡೆಯುತ್ತಿದೆ.
ಇದರ ಬೆನ್ನಲ್ಲೇ ಡಿ ಗ್ಯಾಂಗ್‌ಗೆ ಮತ್ತೊಂದು ಸಂಕಟ ಎದುರಾಗಿದ್ದು, ದರ್ಶನ್ ಅವರು 10 ವರ್ಷಗಳ ಹಿಂದೆ ದರ್ಶನ್ ಬಳಿ ಸಹಾಯಕ್ಕಾಗಿ ಹೋಗಿದ್ದ ಸಂತ್ರಸ್ತನ ಮೇಲೆ ಹಲ್ಲೆ ಸಂಬಂಧ ದೂರು ದಾಖಲಾಗಿದೆ.
ಈ ಸಂಬಂಧ ಕನ್ನಡದ ಖಾಸಗಿ ವಾಹಿನಿ ಟಿವಿ9 ವರದಿ ಮಾಡಿದ್ದು, 10 ವರ್ಷಗಳ ಹಿಂದಿನ ಹಲ್ಲೆ ವಿರುದ್ಧ ಟಿವಿ9 ವಾಹಿನಿಯಲ್ಲಿ ನ್ಯಾಯಕ್ಕಾಗಿ ಸಂತ್ರಸ್ಥೆ ಕುಟುಂಬ ತಮ್ಮ ಅಳಲನ್ನು ತೋಡಿಕೊಂಡಿದೆ.
ನಟ ದರ್ಶನ್ ತಮ್ಮ ಮೈಸೂರಿನ ಫಾರ್ಮ್‌ಹೌಸ್‌ಗೆ ಪರಿಹಾರ ಕೇಳಲು ಬಂದ ಸಂತ್ರಸ್ತನ ಮೇಲೆ ನಾಯಿಯಿಂದ ದಾಳಿ ಮಾಡಿಸಿ ವಿಕೃತ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ನಿಜಲಿಂಗಪುರದ ಮಹೇಶ್ ಎಂಬುವವರೇ ದರ್ಶನ್‌ರಿಂದ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ದರ್ಶನ್ ಅವರ ವಿನೀಶ್ ದರ್ಶನ್ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತದ್ದ ಮಹೇಶ್‌ಗೆ ಎತ್ತು ತನ್ನ ಕೊಂಬಿನಿಂದ ತಿವಿದಿತ್ತು. ಪರಿಣಾಮ ಅವರ ಕಣ್ಣಿಗೆ ಪೆಟ್ಟಾಗಿದ್ದು, ಡಿ ಗ್ಯಾಂಗ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆ ಒದಗಿಸಿ ಮಹೇಶ್ ಅವರ ಮನೆಗೆ ಕರೆದೊಯ್ದು ಬಿಟ್ಟಿದ್ದಾರೆ.
ಇದಾದ ನಂತರ ದರ್ಶನ್ ಅವರ ಮನೆ ಕಡೆ ಮತ್ತೆಂದು ಮುಖ ಹಾಕಿಲ್ಲ. ಮಹೇಶ್ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬ ದರ್ಶನ್ ಅವರ ಫಾರ್ಮ್‌ಹೌಸ್‌ಗೆ ತೆರಳಿ ಪರಿಹಾರಕ್ಕಾಗಿ ಕೈಚಾಚಿದ್ದಾರೆ. ಇದನ್ನು ಕೀಳಾಗಿ ಕಂಡ ಡಿ ಗ್ಯಾಂಗ್ ತಮ್ಮ ಸಾಕು ನಾಯಿಗಳನ್ನು ಸಂತ್ರಸ್ತ ಕುಟುಂಬದವರ ಮೇಲೆ ದಾಳಿ ಮಾಡಲು ಬಿಡುತ್ತಿದ್ದರಂತೆ. ಸ್ವಲ್ಪ ದಿನಗಳ ಬಳಿಕ ಮೈಸೂರಿನ ಖಾಸಗಿ ಹೋಟೆಲ್‌ಕೆ ಬರಹೇಳಿ ಅಲ್ಲಿ ಸ್ಥಳೀಯ ರೌಡಿಗಳಿಂದ ಬೆದರಿಕೆ ಹಾಕಿದ್ದು, ಈ ವಿಚಾರ ಹೊರಗೆ ಬಾಯಿ ಬಿಟ್ಟರೇ ಸುಮ್ಮನೇ ಬಿಡುವುದಿಲ್ಲ ಎಂದು ಗದರಿಸಿದ್ದರು ಎಂದು ಸಂತ್ರಸ್ತರ ಕುಟುಂಬ ಖಾಸಗಿ ವಾಹಿನಿಯಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…