ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರ ತಂಡದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಮತ್ತೇನಾದರೂ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇದೆಯಾ ಎಂಬ ಪ್ರಶ್ನೆ ಬರಬಹುದು. ಅದು ಸಹಜ. ಏಕೆಂದರೆ, ಈಗಾಗಲೇ ಎರಡು ಬಾರಿ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಈ ಬಾರಿಯೂ ಅದು ಮುಂದುವರೆದಿದೆಯಾ ಎಂದು ಚಿತ್ರದ ಅಭಿಮಾನಿಗಳಲ್ಲಿ ಸಹಜವಾಗಿ ಆತಂಕವಾಗಬಹುದು. ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಿದೆ. ಆದರೆ, ಚಿತ್ರ ಮುಂದಕ್ಕೆ ಹೋಗಿಲ್ಲ. ಬದಲಿಗೆ, ಡಿ.6ರ ಬದಲು ಒಂದು ದಿನ ಮುಂಚಿತವಾಗಿಯೇ, ಅಂದರೆ ಡಿ.5ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಇನ್ನು, ‘ಪುಷ್ಪ 2’ ಚಿತ್ರದ ವಿತರಣೆ, ಡಿಜಿಟಿಲ್, ಸ್ಯಾಟಿಲೈಟ್ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ವಿತರಣೆ ಹಕ್ಕುಗಳಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ.ಗಳಿಕೆ ಎಂದು ಹೇಳಲಾಗುತ್ತಿದೆ. ಅವೆರಡೂ ಸೇರಿ ಚಿತ್ರವು ಬಿಡುಗಡೆಗೂ ಮೊದಲೇ 1000 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿದೆ.
ಈ ಚಿತ್ರಕ್ಕೆ ಅಲ್ಲು ಅರ್ಜುನ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಮೂಲಗಳ ಪ್ರಕಾರ, ಈ ಚಿತ್ರಕ್ಕಾಗಿ ಅರ್ಜುನ್ ಪಡೆದಿರುವ ಸಂಭಾವನೆ ದೇಶದಲ್ಲೇ ಮೊದಲಂತೆ. ಭಾರತೀಯ ಚಿತ್ರರಂಗದ ಯಾವ ಸ್ಟಾರ್ ನಟ ಸಹ ಇಷ್ಟೊಂದು ಸಂಭಾವನೆಯನ್ನು ಪಡೆದಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೊಂದು ಸಂಭಾವನೆ ಪಡೆಯುವ ಮೂಲಕ ಅರ್ಜುನ್, ದೇಶದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ ಎನ್ನುವುದು ವಿಶೇಷ.
ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ 275 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಇದಕ್ಕೂ ಮುನ್ನ ಶಾರೂಖ್ ಖಾನ್, ‘ಪಠಾಣ್’ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆದರು ಎಂದು ಹೇಳಲಾಗಿದೆ. ಇನ್ನು, ತಮಿಳು ನಟ ವಿಜಯ್ ತಮ್ಮ ಮುಂದಿನ ಚಿತ್ರಕ್ಕೆ 275 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆದರಂತೆ. ಅಲ್ಲು ಅರ್ಜುನ್ ಅವರಿಬ್ಬರನ್ನೂ ಹಿಂದಿಕ್ಕಿ ‘ಪುಷ್ಪ 2 – ದಿ ರೂಲ್’ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
‘ಪುಷ್ಪ – ದಿ ರೂಲ್’ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪುಷ್ಪ – ದಿ ರೈಸ್’ ಚಿತ್ರದ ಮುಂದುವರೆದ ಭಾಗವಾಗಿದೆ. ಅಲ್ಲು ಅರ್ಜುನ್ ಈಈ ಚಿತ್ರದಲ್ಲಿ ಪುಷ್ಪರಾಜ್ ಆಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಮಿಕ್ಕಂತೆ ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…