ಪೊಲೀಸ್ ಪಾತ್ರದಲ್ಲಿ ತಿಲಕ್ ಅಭಿನಯದ ‘ಉಸಿರು’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಮತ್ತೊಮ್ಮೆ ಅವರು ಖಾಕಿ ಯೂನಿಫಾರ್ಮ್ ತೊಟ್ಟಿದ್ದಾರೆ. ಅವರೀಗ ‘ವರ್ಣತರಂಗ’ ಎಂಬ ಚಿತ್ರದಲ್ಲಿ ಎಸಿಪಿಯಾಗಿ ನಟಿಸಿದ್ದಾರೆ.
ಶ್ರೀ ಪಾಷನಾಮೂರ್ತಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಬೆಳ್ತಂಗಡಿ ಉದ್ಯಮಿ ಬಿ.ಶಿವಕುಮಾರ್ ನಿರ್ಮಿಸುತ್ತಿರುವ ‘ವರ್ಣತರಂಗ’ ಚಿತ್ರಕ್ಕೆ ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ The Last Face ಎಂಬ ಅಡಿಬರಹ ಇದೆ.
ಈ ಚಿತ್ರದಲ್ಲಿ ನಾಯಕಿಯರಾಗಿ ಜೀವಿತಾ ಮತ್ತು ಸಾಕ್ಷಿ ಮೇಘನಾ ನಟಿಸಿದ್ದು, ಮಿಕ್ಕಂತೆ ವರ್ಧನ್, ಹೇಮಂತ್, ರಮೇಶ್ ಪಂಡಿತ್, ಬಲ ರಾಜವಾಡಿ, ಟೆನ್ನಿಸ್ ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್ ಭಟ್ ಮುಂತಾದವರು ನಟಿಸಿದ್ದಾರೆ.
ಇದನ್ನು ಓದು : ʻಗಾರ್ಡನ್ʼಗೆ ಹೊರಟ ಮನೋಜ್: ಕಸ ವಿಲೇವಾರಿ ಮಾಫಿಯಾದ ಸುತ್ತ
‘ವರ್ಣತರಂಗ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ತೀರ್ಥೇಶ್, ‘ವರ್ಣತರಂಗ’ ಅಂದರೆ ಬಣ್ಣಗಳ ಅಲೆಗಳು ಎಂದರ್ಥ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ? ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳು ಇರುವುದರಿಂದ ಇಷ್ಟನ್ನು ಮಾತ್ರ ಹೇಳಬಹುದು. ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಎಫ್‌ಎಕ್ಸ್ ಶೇಕಡ 25ರಷ್ಟು ಬರುತ್ತದೆ’ ಎಂದರು
ನಾನು ಈಗಾಗಲೇ ಎಸಿಪಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಮಾತು ಶುರು ಮಾಡಿದ ತಿಲಕ್, ‘ಇದರಲ್ಲೂ ಅದೇ ಪಾತ್ರವಿದ್ದರೂ ಕೇಸ್ ಬೇರೆಯದೆ ಆಗಿರುತ್ತದೆ. ಅದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ’ ಎಂದರು.
‘ವರ್ಣರಂಜಿತ’ ಚಿತ್ರಕ್ಕೆ ಆಕಾಶ್ ರೆಡ್ಡಿ ಮತ್ತು ಯಶವಂತ್ ಭೂಪತಿ ಸಂಗೀತ, ಮನು ಗೌಡ ಛಾಯಾಗ್ರಹಣವಿದ್ದು, ’ಸುಕ್ಕ ಸುಕ್ಕ …’ ಎಂಬ ಹಾಡಿಗೆ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ಇನ್ನರೆಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.
ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…
ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…
ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…
ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…
ಭಾರತೀಯ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು…
ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…