ಶಿಕ್ಷಣ

ಕೇಂದ್ರ ಬಜೆಟ್‌ : ಕೊಡಗು, ಚಾ.ನಗರಕ್ಕೆ ನರ್ಸಿಂಗ್ ಕಾಲೇಜು

ರಾಜ್ಯಕ್ಕೆ ಧಕ್ಕಲಿರುವ ಒಂಬತ್ತು ನರ್ಸಿಂಗ್ ಕಾಲೇಜುಗಳು

ಮೈಸೂರು: ಬುಧವಾರ ಕೇಂದ್ರದ ಬಜೆಟ್‌ನಲ್ಲಿ ದೇಶದಾದ್ಯಂತ 156 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಕುರಿತು ಆಗಿರುವ ಘೋಷಣೆ ಅನ್ವಯ ಕರ್ನಾಟಕಕ್ಕೆ ಚಾಮರಾಜನಗರ, ಕೊಡಗು ಸೇರಿದಂತೆ 9 ನರ್ಸಿಂಗ್ ಕಾಲೇಜುಗಳು ದೊರೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಜಿಲ್ಲೆಯಲ್ಲಿಯೂ ಒಂದು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಆಗಬೇಕು ಎನ್ನುವ ನಿಲುವನ್ನು ಈಗಾಗಲೇ ಬಹಿರಂಗಪಡಿಸಿದ್ದು ಅದಕ್ಕೆ ತಕ್ಕಂತೆ ಸರ್ಕಾರ ಕಾರ್ಯಯೋಜನೆಯನ್ನು ರೂಪಿಸಿದೆ. ಇದರ ಮುಂದಿನ ಹಂತವಾಗಿ ನರ್ಸಿಂಗ್ ಕಾಲೇಜ್‌ಗಳ ಸ್ಥಾಪನೆಗೆ ಮುಂದಾಗಿದೆ. ತನ್ಮೂಲಕ ವೈದ್ಯಕೀಯ ಸೇವೆಯಲ್ಲಿ ನೈಪುಣ್ಯತೆಯನ್ನು ಕಾಪಾಡಿಕೊಳ್ಳುವ ಜತೆಗೆ ವೈದ್ಯರು ಮತ್ತು ದಾದಿಯರ ಸಂಖ್ಯೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ.
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ಅನಂತರದಲ್ಲಿ ಸ್ಥಾಪನೆಯಾಗಿರುವ 175 ವೈದ್ಯಕೀಯ ಕಾಲೇಜ್‌ಗಳಲ್ಲಿ ಈ ನರ್ಸಿಂಗ್ ಕಾಲೇಜು ನಿರ್ಮಾಣವಾಗಲಿದೆ. ಈ ಮಾನದಂಡದ ಅನ್ವಯ ರಾಜ್ಯದಲ್ಲಿ 2014ರ ಬಳಿಕ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿ, ಕಾರವಾರ, ಕೊಪ್ಪಳ, ಗದಗ ಮತ್ತು ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಿದ್ದು ಇಲ್ಲಿ ನರ್ಸಿಂಗ್ ಕಾಲೇಜು ಕೂಡ ಬರುವ ಸಾಧ್ಯತೆಯಿದೆ.

ವೈದ್ಯಕೀಯ, ಔಷಧ ಕ್ಷೇತ್ರದ ಸಂಶೋಧನೆಗೆ ಅಡಿಪಾಯ: ಕೋವಿಡ್ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಮತ್ತು ಔಷಧ ಕ್ಷೇತ್ರಗಲ್ಲಿನ ಸಂಶೋಧನೆ ಮತ್ತು ಅನ್ವೇಷಣೆಯ ಮಹತ್ವವನ್ನು ಅರಿತಿರುವ ಸರ್ಕಾರ ಈ ರಂಗದಲ್ಲಿನ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ವಹಣೆಯಲ್ಲಿನ ಖಾಸಗಿ, ಸರಕಾರಿ ಸಹಭಾಗಿತ್ವವನ್ನು ಸಂಶೋಧನ ವಲಯಕ್ಕೂ ಈ ಬಜೆಟ್ ಮೂಲಕ ವಿಸ್ತರಿಸಲಾಗಿದೆ.

andolanait

Recent Posts

ಹೆಚ್ಚಾಯ್ತು ಸಫಾರಿ ವಿರೋಧ : 25ಕ್ಕೂ ಹೆಚ್ಚು ಗ್ರಾ.ಪಂ ಪಿಡಿಒಗಳಿಗೆ ಮನವಿ ಸಲ್ಲಿಸಿ ರೈತರು

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…

9 hours ago

ಟ್ರಂಪ್‌ ಸುಂಕ ರದ್ದುಪಡಿಸಿದ ಅಮೆರಿಕಾ ಸುಪ್ರೀಂಕೋರ್ಟ್‌ : ಭಾರತ ಹೇಳಿದ್ದೇನು?

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…

10 hours ago

ಗಡಿ ಭದ್ರತೆಗೆ ಒತ್ತು : ತಮಿಳುನಾಡು ಚುನಾವಣೆಗೆ ಕರ್ನಾಟಕ ಪೊಲೀಸ್ ಸಹಕಾರ ಭರವಸೆ

ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…

10 hours ago

ಶಾರ್ಟ್ ಸರ್ಕ್ಯೂಟ್ : ಎಲೆಕ್ಟ್ರಾನಿಕ್ಸ್ ಅಂಗಡಿ ಸುಟ್ಟು ಭಸ್ಮ, ಲಕ್ಷಾಂತರ ರೂ. ನಷ್ಟ

ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…

10 hours ago

ಇವಿ ಹಬ್ ಆಗಿ ಕರ್ನಾಟಕ ರೂಪಾಂತರ ; ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ವಿಶ್ವಾಸ

ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…

11 hours ago

ಶೇ.10 ರಷ್ಟು ಜಾಗತಿಕ ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…

11 hours ago