ಪುನೀತ್ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು.
ಅಂತೆಯೇಮೊನ್ನೆಕನ್ನಡರಾಜ್ಯೋತ್ಸವ ದಿನದಂದುಅವರಿಗೆ ಈ ಗೌರವವನ್ನು ನೀಡಲಾಯಿತು. ನಟರಾದರಜನಿಕಾಂತ್, ಜೂನಿಯರ್‍ಎನ್‍ಟಿಆರ್ ಮತ್ತು ಸುಧಾಮೂರ್ತಿ, ರಾಜ್‍ಕುಟುಂಬವರ್ಗ, ಮುಖ್ಯಮಂತ್ರಿಗಳ ಜೊತೆಅವರ ಸಚಿವ ಸಂಪುಟದ ಸದಸ್ಯರು ಸಹಸ್ರಾರು ಮಂದಿ ಅಭಿಮಾನಿಗಳಸಮ್ಮುಖದಲ್ಲಿಅಶ್ವಿನಿ ಪುನೀತ್‍ರಾಜಕುಮಾರ್ ಈ ಗೌರವವನ್ನು ಸ್ವೀಕರಿಸಿದರು.
ಮೂಲಗಳ ಪ್ರಕಾರ, ಕುಟುಂಬದ ಸಲಹೆಯಂತೆ ವಿಧಾನಸೌಧದ ಭವ್ಯ ಮೆಟ್ಟಲುಗಳ ಮೇಲೆ ಸಿದ್ಧಗೊಳಿಸಿದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ. ಇದುತಮ್ಮ ಮತ್ತುತಮ್ಮ ಸರ್ಕಾರದ ಪುಣ್ಯಎಂದರು ಮುಖ್ಯಮಂತ್ರಿಗಳು! ಪುನೀತ್ ನಿಧನದ ವೇಳೆ ಆಸ್ಪತ್ರೆಯಲ್ಲಿದ್ದಕಾರಣ, ಈ ವರ್ತಮಾನವನ್ನುತಡವಾಗಿತಮಗೆ ತಿಳಿಸಲಾಯಿತು; ಆತ ಮೂರು ವರ್ಷದವನಿದ್ದಾಗ, ಶಬರಿಮಲೆಗೆ ಹೋಗುವ ಹಿರಿಯರ ನಡುವೆ, ಆತʻಸ್ವಾಮಿಯೇಅಯ್ಯಪ್ಪʼಹೇಳಿಎಲ್ಲರ ಗಮನಸೆಳೆದಿದ್ದ;ʻಅಪ್ಪುಚಿತ್ರವನ್ನುಅಣ್ಣಾವ್ರಜೊತೆನೋಡಿ, ʻಇದುನೂರುದಿನಓಡುತ್ತೆʼಎಂದಿದ್ದೆ. ʻಹಾಗಾದರೆನೀವೇಶತದಿನೋತ್ಸವಕ್ಕೆಅತಿಥಿಯಾಗಿಬರಬೇಕುʼಎಂದಅವರಮಾತಿನಂತೆಬಂದೆ. ಎನ್‍ಟಿಅರ್, ಎಂಜಿಆರ್‍ಅವರುಅರವತ್ತುವರ್ಷಗಳಲ್ಲಿಮಾಡಿದ್ದನ್ನುಅಪ್ಪು 21 ವರ್ಷದಲ್ಲೇಮಾಡಿಹೋದ, ಅವನುದೇವರಮಗʼಎಂದುರಜನಿಕಾಂತ್‍ಹೇಳಿದರೆ, ಗೆಳೆಯಅಪ್ಪುವಿನಗುಣಗಾನ ಮಾಡಿದರುಜೂನಿಯರ್‍ಎನ್‍ಟಿಆರ್. ಸುರಿದ ಮಳೆ ಕಾರ್ಯಕ್ರಮವನ್ನು ಮೊಟಕುಗೊಳಿಸಿತು.
ಮೂವತ್ತು ವರ್ಷಗಳ ಹಿಂದೆ, 1992 ರ ನವೆಂಬರ್ 14ರಂದು, ಇದೇಜಾಗದಲ್ಲಿಡಾ. ರಾಜಕುಮಾರ್‍ಅವರಿಗೆʻಕರ್ನಾಟಕರತ್ನʼನೀಡಿ ಅಂದಿನಸರ್ಕಾರ ಗೌರವಿಸಿತ್ತು. ಆಗಮುಖ್ಯಮಂತ್ರಿಗಳಾಗಿದ್ದವರುಸಾರೆಕೊಪ್ಪ ಬಂಗಾರಪ್ಪ. ದೇಶದಅತ್ಯುನ್ನತ ನಾಗರಿಕಗೌರವʻಭಾರತರತ್ನʼದಂತೆನಾಡಿನಅತ್ಯುನ್ನತಪ್ರಶಸ್ತಿಯಾಗಿ ʻಕರ್ನಾಟಕರತ್ನʼಪ್ರಶಸ್ತಿಯನ್ನುಸ್ಥಾಪಿಸಿ, ರಾಜಕುಮಾರ್‍ಅವರಿಗೆಅದನ್ನುಮೊದಲುನೀಡಲುಅವರು ಯೋಚಿಸಿದ್ದರು. ಇದನ್ನುಅವರ ಗಮನಕ್ಕೆತಂದಾಗ, ʻಮೊದಲು ಕುವೆಂಪು ಅವರಿಗೆ ಈ ಗೌರವ ನೀಡಿ. ಅವರಿಗಿಂತ ಮೊದಲು ನಾನದನ್ನು ಸ್ವೀಕರಿಸುವುದು ಸರಿಯಲ್ಲ. ಮುಂದೆಯೋಗವಿದ್ದರೆ ನನಗೂ ಬರಬಹುದುʼಎಂದರು. ಸರ್ಕಾರ ಕುವೆಂಪುಮತ್ತುರಾಜಕುಮಾರ್‍ಇಬ್ಬರಿಗೂʻಕರ್ನಾಟಕರತ್ನʼಪ್ರಶಸ್ತಿಯನ್ನುರಾಜ್ಯೋತ್ಸವದವೇಳೆಪ್ರಕಟಿಸಿತು. ವಯೋಸಹಜದೇಹಾಲಸ್ಯದಕಾರಣ ಕುವೆಂಪು ಅವರು ಬಂದಿರಲಿಲ್ಲ.
ರಾಜಕುಮಾರ್‍ಅವರಿಗೆ, ಅದ್ದೂರಿ ಸಮಾರಂಭದಲ್ಲಿ ಅಂದಿನ ರಾಜ್ಯಪಾಲರಾದಖುರ್ಷಿದ್‍ಆಲಂಖಾನ್ ಪ್ರಶಸ್ತಿ ಪ್ರದಾನ ಮಾಡಿದರು. ಸಹಸ್ರಾರು ಮಂದಿ ಅಭಿಮಾನಿಗಳು ಅಲ್ಲಿ ಸೇರಿದ್ದರು. ಅಂದೇ ಮೊದಲ ಬಾರಿಗೆರಾಜಕುಮಾರ್‍ಅವರು ಅಭಿಮಾನಿಗಳನ್ನು ʻಅಭಿಮಾನಿ ದೇವರುʼಗಳೆಂದುಕರೆದರು.
ಕುವೆಂಪು ಅವರು ಪ್ರಶಸ್ತಿಪ್ರದಾನಕ್ಕೆ ಬಂದಿರಲಿಲ್ಲವμÉ್ಟೀ. ಸರ್ಕಾರವೇ ಮುಂದೆ ಮೈಸೂರಿನಅವರ ನಿವಾಸಕ್ಕೆ ತೆರಳಿ, ಪ್ರಶಸ್ತಿ ನೀಡಿ ಗೌರವಿಸಿತು. ರಾಜಕುಮಾರ್‍ಅವರೂʻಉದಯರವಿʼಗೆ ತೆರಳಿ ಕುವೆಂಪುಅವರನ್ನುಭೇಟಿಯಾಗಿ, ಗೌರವಿಸಿಬಂದರು.
ಪುನೀತ್‍ರಾಜಕುಮಾರ್ ಮಹತ್ವಾಕಾಂಕ್ಷೆಯ ಸಾಕ್ಷ್ಯಕಥಾನಕ, ʻಗಂಧದಗುಡಿʼ ಕಳೆದವಾರ, ಅವರಮೊದಲಪುಣ್ಯತಿಥಿಯಸಂದರ್ಭದಲ್ಲಿತೆರೆಕಂಡಿದೆ. ಕನ್ನಡನಾಡಿನಪ್ರಕೃತಿ, ಖಗಮೃಗ, ಜಲಚರಗಳನ್ನುಪರಿಚಯಿಸುತ್ತಾ, ಅವುಗಳನ್ನು ಉಳಿಸಲುಕರೆನೀಡುವ ಈ ಕಥಾನಕದಲ್ಲಿಅವರಜೀವನಯಾನ, ಎಂ.ಪಿ.ಶಂಕರ್ ನಿರ್ಮಿಸಿದ ʻಗಂಧದಗುಡಿʼಚಿತ್ರದಮೂಲಕರಾಜಕುಮಾರ್‍ಕಾಡು ಉಳಿಸಲುಕರೆನೀಡಿದ್ದೇಮೊದಲಾದವಿವರಗಳಿವೆ. ಶಿವರಾಜಕುಮಾರ್‍ಅಭಿನಯದʻಗಂಧದಗುಡಿಭಾಗ 2ʼರಲ್ಲೂಇದೇಕರೆ. ಅದರಲ್ಲಿರಾಜಕುಮಾರ್‍ಅವರು ಕಾಣಿಸಿಕೊಂಡಿದ್ದರು. ಅಶ್ವಿನಿ ಪುನೀತ್‍ಕುಮಾರ್ ನಿರ್ಮಿಸಿ, ಅಮೋಘವರ್ಷ ನಿರ್ದೇಶಿಸಿದ ʻಗಂಧದಗುಡಿʼಚಿತ್ರಕ್ಕೆ ಚಿತ್ರರಸಿಕರಿಂದಅಪೂರ್ವಸ್ವಾಗತಸಿಕ್ಕಿದೆ.
ಸೆಪ್ಟೆಂಬರ್ 30ರಂದುತೆರೆಕಂಡʻಕಾಂತಾರʼದಜೈತ್ರಯಾತ್ರೆಯೂಮುಂದುವರಿದಿದೆ. ದೇಶವಿದೇಶಗಳಲ್ಲಿ ಈ ಚಿತ್ರದಕುರಿತಂತೆತರಹಾವರಿವಿಮರ್ಶೆ, ವಿಶ್ಲೇಷಣೆಗಳುಸಾಮಾಜಿಕ ತಾಣಗಳಲ್ಲಿ ಕಾಣಬಹುದು. ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ, ಕರ್ನಾಟಕದಲ್ಲಿಅತ್ಯಧಿಕಜನರು ವೀಕ್ಷಿಸಿದ ಚಿತ್ರವಿದುಎಂದುತನ್ನದಾಖಲೆಯನ್ನು ಮುಂದಿಟ್ಟಿದೆ. ಕನ್ನಡದಲ್ಲೇ ವಿಶ್ವಾದ್ಯಂತತೆರೆಕಂಡʻಕಾಂತಾರʼ ಇದೀಗಇತರಭಾμÉಗಳಲ್ಲೂಡಬ್ ಆಗಿ ಪ್ರದರ್ಶನಕಾಣುತ್ತಿದೆ. ಎಲ್ಲಭಾμÉಗಳಜನಪ್ರಿಯತಾರೆಯರು ಈ ಚಿತ್ರದಕುರಿತತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಜನಿಕಾಂತ್ ,ʻನಮಗೆ ತಿಳಿದಿರುವುದಕ್ಕಿಂತಅಜ್ಞಾತವಾಗಿರುವುದೇಹೆಚ್ಚುಎನ್ನುವುದನ್ನುಹೊಂಬಾಳೆಯ, ರಿಶಭ್‍ಶೆಟ್ಟಿಯವರಚಿತ್ರಕ್ಕಿಂತಚೆನ್ನಾಗಿಯಾರೂಹೇಳಲುಸಾಧ್ಯವಿಲ್ಲ. ನೀವು ನನ್ನನ್ನು ರೋಮಾಂಚನಗೊಳಿಸಿದಿರಿʼಎಂದುತಮ್ಮಟ್ವಿಟರ್‍ನಲ್ಲಿಹೇಳಿಕೊಂಡಿದ್ದಾರೆ. ಎರಡುಬಾರಿತಮ್ಮಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಪಡೆದಿರುವತಾರೆ ಕಂಗನಾರನಾವತ್, ಈ ಚಿತ್ರವನ್ನುವೀಕ್ಷಿಸಿ, ʻಇದೊಂದುಅನುಭವʼಎಂದದ್ದೇಅಲ್ಲದೆ, ಮುಂದಿನವರ್ಷ ಈ ಚಿತ್ರಭಾರತದಿಂದಆಸ್ಕರ್‍ಗೆ ಪ್ರವೇಶಪಡೆಯಬೇಕುಎಂದಿದ್ದಾರೆ.
ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯಎನ್ನುವುದಕ್ಕೆʻಕಾಂತಾರʼಚಿತ್ರಸಾಕ್ಷಿಎನ್ನುವುದಾಗಿಮೊನ್ನೆಜಾಗತಿಕಹೂಡಿಕೆದಾರರಸಮಾವೇಶದಲ್ಲಿಕೇಂದ್ರಕೈಗಾರಿಕಾಸಚಿವಪೀಯೂಶ್‍ಗೋಯಲ್‍ಹೇಳಿದರು. ʻಕರಾವಳಿಸಂಸ್ಕøತಿಯಶ್ರೀಮಂತಿಕೆ ಪ್ರತಿಬಿಂಬಿಸುವ ಚಿತ್ರಇದು. ಅತ್ಯಂತಕಡಿಮೆ ಬಜೆಟಿನ ಈ ಚಿತ್ರ ಹೂಡಿಕೆಗಿಂತ ಸುಮಾರುಇಪ್ಪತ್ತು ಪಟ್ಟು ಗಳಿಸಿದೆʼಎಂದು ಈ ಚಿತ್ರದಕುರಿತಂತೆಹೇಳಿದರು.
ʻಕಾಂತಾರʼಚಿತ್ರದಕುರಿತಂತೆಪ್ರಸ್ತಾಪವೇನೋಆಯಿತು. ಕರ್ನಾಟಕದಲ್ಲಿಮನರಂಜನೋದ್ಯಮಕ್ಕೆಮೂಲಸೌಲಭ್ಯಗಳನ್ನುಒದಗಿಸುವಪ್ರಸ್ತಾಪ ಈ ಸಮಾವೇಶದಲ್ಲಿಆಗಿದೆಯೇಎನ್ನುವುದು ಮುಂದೆ ತಿಳಿಯಬಹುದು. ಮನರಂಜನೋದ್ಯಮದಲ್ಲಿ ಹೂಡಿಕೆಗೆಕರ್ನಾಟಕ ಪ್ರಶಸ್ತವೇನೋ ಹೌದು. ಚಿತ್ರನಗರಿಯೂ ಸೇರಿದಂತೆ ಹಲವು ಯೋಜನೆಗಳಿಗೆ ಈ ಸಮಾವೇಶಕಾಯಕಲ್ಪವಾಗಬಹುದು.
ಕನ್ನಡರಾಜ್ಯೋತ್ಸವದ ಸಂದರ್ಭದಲ್ಲಿ ಮೀಡಿಯಾ ಹೌಸ್ ಮೂಲಕ ಶೈಲಜಾ ನಾಗ್ ನಿರ್ಮಿಸುತ್ತಿರುವʻಕ್ರಾಂತಿʼಚಿತ್ರದಪತ್ರಿಕಾಗೋಷ್ಠಿಇತ್ತು. ಚಿತ್ರದಹೆಸರುʻಕ್ರಾಂತಿʼಆದರೂ, ಅದುಅಕ್ಷರಕ್ರಾಂತಿಯಅಗತ್ಯದಕುರಿತಂತೆಇರುವಚಿತ್ರ, ಇಂದಿನಶಿಕ್ಷಣ ವ್ಯವಸ್ಥೆಗೆಕನ್ನಡಿಹಿಡಿಯುತ್ತದೆಎನ್ನುವುದುತಂಡದಮಾತುಗಳಲ್ಲಿಸ್ಪಷ್ಟವಾಗಿತ್ತು. ಇಂತಹ ವಸ್ತುವನ್ನುದಾಟಿಸಲು, ಜನಪ್ರಿಯ ನಟರು ಅಭಿನಯಿಸಿದರೆ ಮಾತ್ರ ಸಾಧ್ಯಎನ್ನುವುದು ನಿರ್ಮಾಪಕರಅಭಿಪ್ರಾಯ. ಹಾಗಾಗಿ ಹಿಂದೆತಮ್ಮʻಯಜಮಾನʼಚಿತ್ರದಲ್ಲಿನಟಿಸಿದ್ದದರ್ಶನ್‍ಅವರನ್ನೇಇಲ್ಲೂಮುಖ್ಯಭೂಮಿಕೆಗೆಆಯ್ಕೆಮಾಡಲಾಗಿತ್ತು.
ಕರ್ನಾಟಕದಲ್ಲಿಇಂದು ಸರ್ಕಾರಿ ಶಾಲೆಗಳ ಪರಿಸ್ಥಿತಿ, ಅದರಕಾರಣ, ಪರಿಹಾರವೇ ಮೊದಲಾಗಿಚಿತ್ರದಲ್ಲಿ ಹೇಳಲಾಗಿದೆ ಎನ್ನುವುದನ್ನುದರ್ಶನ್ ಮಾತುಗಳು ಹೇಳುತ್ತಿದ್ದವು. ಮೊದಲೆಲ್ಲ ಶಿಕ್ಷಣ ಸುಲಭವಾಗಿತ್ತು. ಈಗ ಶಾಲೆÉಗೆ ಸೇರಿಸಬೇಕಾದರೆ ಲಕ್ಷಗಟ್ಟಲೆಕೊಡಬೇಕಾದ ಪರಿಸ್ಥಿತಿ ಇದೆ. ಈ ಕುರಿತುಚಿತ್ರ ಹೇಳುತ್ತದೆ ಎನ್ನುವುದುಅವರ ಮಾತುಗಳಲ್ಲಿತ್ತು. ಕನ್ನಡರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿಯ ಕುರಿತು ಗಮನ ಸೆಳೆಯುವುದು ಮತ್ತುಅದನ್ನು ಪರಿಹರಿಸುವುದುಅತಿಅಗತ್ಯ. ʻಕ್ರಾಂತಿʼಚಿತ್ರವನ್ನುವಿ.ಹರಿಕೃಷ್ಣನಿರ್ದೇಶಿಸಿದ್ದು, ದರ್ಶನ್, ರಚಿತಾರಾಂ, ಬಿ.ಸುರೇಶ್‍ಪ್ರಮುಖಪಾತ್ರಧಾರಿಗಳು. ಕೊರೊನಾ ನಂತರಚಿತ್ರರಂಗ ತೊರೆಯಬಯಸಿದ್ದ ಕಲಾ ನಿರ್ದೇಶನತಂಡದ ಹುಡುಗರಿಗೆ ಈ ಚಿತ್ರ ಮರುಭರವಸೆ ನೀಡಿಆಸರೆಯಾದದ್ದನ್ನು ಶಶಿಧರ ಅಡಪ ನೆನಪಿಸಿಕೊಂಡರು.
ರಾಜ್ಯೋತ್ಸವದ ಸಂದರ್ಭದಲ್ಲಿಕನ್ನಡಚಿತ್ರರಂಗ ಹೊಸ ಯೋಚನೆಗಳಿಗೆ ತೆರೆಯುತ್ತಿರುವುದು, ಹೊಸ ಸಾಹಸಗಳು, ಹೊಸ ದಾಖಲೆಗಮನಾರ್ಹ. ಅದು ನಿರಂತರವಾಗಲಿ. ಹ್ಞಾಂ, ಕಲಾವಿದರಾದದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರುಅವರುರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಭಿನಂದನೆಗಳು.
ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…
ಹೈದರಾಬಾದ್: ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 11…
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…