ಎಡಿಟೋರಿಯಲ್

‘ಡೊಳ್ಳು’ಚಿತ್ರದ ಶಬ್ದಗ್ರಹಣಕ್ಕೆ ಸಂದಪ್ರಶಸ್ತಿ ಬಾರಿಸಿದ ಅಪಸ್ವರ

೨೦೨೦ರ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿಯ ಚಿತ್ರ, ಜೊಬಿನ್‌ಜಯನ್ ಅವರಿಗೆ ‘ಡೊಳ್ಳು’ ಚಿತ್ರಕ್ಕಾಗಿ ಅತ್ಯುತ್ತಮ ಸಿಂಕ್‌ಸೌಂಡ್ ಶಬ್ದಗ್ರಾಹಕ, ‘ಡೊಳ್ಳು’ ಅತ್ಯುತ್ತಮ ಕನ್ನಡಚಿತ್ರ, ‘ಜೀಟಿಗೆ’ ಅತ್ಯುತ್ತಮ ತುಳು ಚಿತ್ರ ಹಾಗೂ ಕಥೇತರ ವಿಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿ ಸಂಪರ್ಕ ಇಲಾಖೆಗಾಗಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ‘ನಾದದನವನೀತ ಡಾ.ಪಂಡಿತ್‌ವೆಂಕಟೇಶಕುಮಾರ್‌ಟ ಸಾಕ್ಷ್ಯಚಿತ್ರ ಅತ್ಯುತ್ತಮ ಕಲೆ ಮತ್ತು ಸಂಸ್ಕಋತಿಯ ಚಿತ್ರಕ್ಕಿರುವ ಪ್ರಶಸ್ತಿ ಪಡೆಯಿತು. ಕನ್ನಡಿಗ ಕ್ಯಾಪ್ಟಾನ್ ಗೋಪಿನಾಥ್ ಅವರಆತ್ಮಕಥೆ ಆಧರಿಸಿ ತಯಾರಾದ ‘ಸೂರಾರೈಪೆಟ್ಟ್ರು’ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಯ ಜೊತೆಗೆ ಅದರ ನಟ, ನಟಿ, ಚಿತ್ರಕಥಾ ಲೇಖಕ ಮತ್ತು ಸಂಗೀತ ಸಂಯೋಜಕರಿಗೆ ಪ್ರಶಸ್ತಿ ತಂದುಕೊಟ್ಟಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿ, ಪ್ರಸನ್ನಸತ್ಯನಾಥ್ ಹೆಗ್ಡೆ ನಿರ್ದೇಶಿಸಿದ ‘ತಿಂಗಳಾಯ್ಚನಿಶ್ಚಯಂ’ ಅತ್ಯುತ್ತಮ ಮಲಯಾಳ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಪ್ರಶಸ್ತಿ ಪ್ರಕಟವಾಗುತ್ತಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವಿಜೇತರನ್ನು ಅಭಿನಂದಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್, ನಿರ್ದೇಶಕ ಪ್ರವೀಣ್ ಕೃಪಾಕರ್, ‘ಡೊಳ್ಳು’ ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ, ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಈ ಸಮಾರಂಭದಲ್ಲಿ ಗೌರವ ಸ್ವೀಕರಿಸಿದರು. ಪ್ರಶಸ್ತಿಗೆ ಉದ್ಯಮ ಸಂಭ್ರಮಿಸಿದಂತಿರಲಿಲ್ಲ. ಪದಾಧಿಕಾರಿಗಳಲ್ಲೂ ಎಲ್ಲರೂ ಅಲ್ಲಿರಲಿಲ್ಲವೆನ್ನಿ.

ಯಾವುದೇ ಪ್ರಶಸ್ತಿ ವಿವಾದಾತೀತ ಆಗಿರುವುದಿಲ್ಲ. ಈ ಬಾರಿಯೂಅದಕ್ಕೆ ಹೊರತಲ್ಲ. ವಿಶೇಷವಾಗಿ ಈ ವರ್ಷ ‘ಡೊಳ್ಳು’ ಚಿತ್ರಕ್ಕೆ ನೀಡಲಾದ ವೈಯಕ್ತಿಕ ಪ್ರಶಸ್ತಿಗೆ ಸಂಬಂಧಪಟ್ಟಂತೆ ಸಾಕಷ್ಟು ಟೀಕೆಗಳೆದ್ದವು. ಕಳೆದ ಕೆಲವು ವರ್ಷಗಳಿಂದ ಶಬ್ದಗ್ರಹಣ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಚಿತ್ರೀಕರಣವಾಗುತ್ತಿರುವ ತಾಣದಲ್ಲೇ (ಅದು ಹೊರಾಂಗಣವಿರಲಿ, ಒಳಾಂಗಣವಿರಲಿ) ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಳ್ಳುವ ಶಬ್ದಗ್ರಾಹಕ, ಶಬ್ದ ವಿನ್ಯಾಸಕ ಮತ್ತು ಅಂತಿಮ ಧ್ವನಿ ಮಿಶ್ರಣಕಾರ ಹೀಗೆ ಮೂರು ಪ್ರಶಸ್ತಿಗಳು. ಪೂರ್ತಿ ಚಿತ್ರಕ್ಕೆ ಚಿತ್ರೀಕರಣದ ವೇಳೆಯಲ್ಲೇ ಧ್ವನಿಮುದ್ರಿಸಿಕೊಳ್ಳುವ ಚಿತ್ರದ ಧ್ವನಿಗ್ರಾಹಕರಿಗೆ ಇದು ಸಲ್ಲುತ್ತದೆ. ಆದರೆ ‘ಡೊಳ್ಳು’ ಚಿತ್ರಕ್ಕೆ ಈ ತಾಂತ್ರಿಕತೆಯನ್ನು ಬಳಸಲಿಲ್ಲ, ಎಂದು ನಿರ್ದೇಶಕ ಸಾಗರ್ ಪುರಾಣಿಕ್ ಮತ್ತ ನಿರ್ಮಾಪಕ ಪವನ್‌ಒಡೆಯರ್ ಇಬ್ಬರೂ ಹೇಳುತ್ತಾರೆ. ‘ಡೊಳ್ಳು’ ಬಾರಿಸುವ ಧ್ವನಿಗ್ರಹಣವನ್ನು ಸ್ಟುಡಿಯೊದಲ್ಲಿ ಮಾಡಲುಅಸಾಧ್ಯ; ಹಾಗಾಗಿ ಅದನ್ನು ಪ್ರತ್ಯೇಕವಾಗಿ ಮಾಡಿದ್ದೇವೆ, ಎಂದು ಇಬ್ಬರೂ ಹೇಳುತ್ತಾರೆ.

ಅವರ ಪ್ರಕಾರ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವೇಳೆ ಆ ಪಾರಂನಲ್ಲಿ ಪೂರ್ತಿ ಚಿತ್ರದಧ್ವನಿಗ್ರಹಣಕ್ಕಾಗಿ ಎನ್ನುವ ಕಾಲಂ ಇರಲಿಲ್ಲ. ಸಾಮಾನ್ಯವಾಗಿ ಇಂತಹ ತಪ್ಪುಗಳು ಆಗುವುದು ಅಪರೂಪ. ಈ ತಪ್ಪು ಅರ್ಜಿ ಪಾರಂನಲ್ಲಿ ಆಗಿದ್ದರೆ, ಅದಕ್ಕೆ ಚಿತ್ರೋತ್ಸವ ನಿರ್ದೇಶನಾಲಯ ಹೊಣೆಯಾಗುತ್ತದೆ. ಅರ್ಜಿ ಪಾರಂನಲ್ಲಿ ಸರಿಯಾಗಿ ಸೂಚಿಸಿದ್ದು, ತುಂಬಿದ್ದು ತಪ್ಪಾದರೆ, ಅವರು ಜವಾಬ್ದಾರರಾಗುತ್ತಾರೆ. ಒಟ್ಟಿನಲ್ಲಿ ‘ಡೊಳ್ಳು’ ಬಾರೀಸದ್ದು ಮಾಡುತ್ತಿರುವುದಂತೂ ಹೌದು.

ಚಿತ್ರದ ಸೌಂಡ್ ಇಂಜಿನಿಯರ್ ನಿತಿನ್ ಲುಕೋಸ್, ಲೊಕೇಶನ್ ಸೌಂಡ್‌ಚಿತ್ರಕ್ಕೆ ನೀಡಬೇಕಾದ ಪ್ರಶಸ್ತಿಯನ್ನು ಸ್ಟುಡಿಯೊದಲ್ಲಿ ಡಬ್ ಮಾಡಿದ ಚಿತ್ರಕ್ಕೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿಯ ಪ್ರಕಟವಾಗುತ್ತಲೇ, ‘ರಾಷ್ಟ್ರೀಯ ಚಲನಚಿತ ್ರಪ್ರಶಸ್ತಿ ಮತ್ತದರ ಆಯ್ಕೆಯಲ್ಲಿ ತೆರೆಯ ಹಿಂದೆ ಏನೇನು ನಡೆದಿದೆಯೋ ನನಗೆ ತಿಳಿಯದು. ಆದರೆ ಡಬ್ ಮತ್ತು ಸಿಂಕ್ ಸೌಂಡ್ ಫಿಲಂಅನ್ನು ತಿಳಿಯಲು ಸಾಧ್ಯವಾಗದ, ಈ ಕ್ಷೇತ್ರದ ಪರಿಣತರು ಎಂದುಕೊಳ್ಳುವ ಈ ತೀರ್ಪುಗಾರರ ಬಗ್ಗೆ ನನಗೆ ಅನುಕಂಪವಿದೆ’ ಎಂದು ಅವರು ತಮ್ಮ ಟ್ವೀಟರ್‌ನಲ್ಲಿ ಹೇಳುತ್ತಲೇ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಧ್ವನಿತಂತ್ರಜ್ಞ ರಸೂಲ್ ಪೂಕುಟ್ಟಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.


ಈ ಮಾತಿಗೆ ಪೂರಕ ಎನ್ನುವಂತೆ ಪತ್ರಿಕೆಯೊಂದಕ್ಕೆ ತೀರ್ಪುಗಾರರಲ್ಲಿ ಒಬ್ಬರಾದ ನಿರ್ದೇಶಕ ವಿಜಯ್‌ತಂಬಿ ಅವರು ನೀಡಿದ್ದೆನ್ನಲಾದ ಹೇಳಿಕೆ ಇದೆ. ‘ನಾವು ಸರ್ವಾನುಮತದ ನಿರ್ಧಾರದೊಂದಿಗೆ ಲೊಕೇಶನ್ ಶಬ್ಧ ಗ್ರಾಹಕನಿಗಿರು ಪ್ರಶಸ್ತಿಯನ್ನು ನೀಡಿದ್ದೇವೆ. ಅವರ ಡೊಳ್ಳು ಬಾರಿಸುವಿಕೆಯನ್ನು ನಾವು ಪ್ರಶಂಸಿಸಿದ್ದೇವೆ, ಅದನ್ನು ಮೊದಲೇ ಧ್ವನಿಮುದ್ರಿಸಲಾಗುವುದಿಲ್ಲ ಮತ್ತು ಅದನ್ನು ಧ್ವನಿಮುದ್ರಿಸುವುದು ಸುಲಭವೂ ಅಲ್ಲ. ನಾವು ಚಲನಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿದ್ದೇವೆ, ಅಲ್ಲಿ ಡಬ್‌ನಿಂದ ಸಿಂಕ್ ಅನ್ನು ನಿರ್ಣಯಿಸುವುದು ಮತ್ತು ಪ್ರತ್ಯೇಕಿಸುವುದು ಸುಲಭವಲ್ಲ. ನಾವು ಕೇವಲ ‘ಡೊಳ್ಳು’ ಬಾರಿಸುವುದಕ್ಕೆ ಮಾತ್ರ ಈ ಪ್ರಶಸ್ತಿ, ಸಂಭಾಷಣೆ ಮತ್ತು ಧ್ವನಿಗಳಿಗಳಿಗಾಗಿ ಅಲ್ಲ ಎಂದುಕೊಂಡೆವು’ ಎಂದು ಹೇಳಿದ್ದಾಗಿ ವರದಿಯಾಗಿದೆ.

ಈ ಮಾತು ೬೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕುರಿತಂತೆ ಹಲವು ಅನುಮಾನಗಳನ್ನು ಹುಟ್ಟುಹಾಕಿದರೆ ತಪ್ಪೇನಲ್ಲ. ತಾವು ಆಯ್ಕೆ ಮಾಡಿದ ಈ ಪ್ರಶಸ್ತಿಯ ಕುರಿತಂತೆ ತಮಗೆ ಸರಿಯಾದ ಮಾಹಿತಿ ಇರಲಿಲ್ಲ, ತಾವು ಸರ್ವಾನುಮತದಿಂದ ಇದನ್ನು ಆಯ್ಕೆ ಮಾಡಿದ್ದೇವೆ ಎನ್ನುವುದಾದರೆ, ಉಳಿದ ಪ್ರಶಸ್ತಿಗಳ ಕುರಿತಂತೆಯೂ ಈ ಮಾತು ಅನ್ವಯವಾಗುತ್ತದೆ. ಪ್ರಶಸ್ತಿ ಆಯ್ಕೆಯ ಕುರಿತಂತೆ ತಕರಾರು ಮಾಡುವವರಿಗೂ ಇದು ರೊಟ್ಟಿತುಪ್ಪಕ್ಕೆ ಬಿದ್ದ ಹಾಗೆ.

ಯಾವುದೇ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಅದು ತೀರ್ಪುಗಾರರಿಗೆ ಸಿನಿಮಾ ಮಾಧ್ಯಮದ ಕುರಿತಂತೆ ಇರುವ ಜ್ಞಾನ, ಸಿನಿಮಾ ಭಾಷೆಯ ತಿಳುವಳಿಕೆಯ ಮೇಲೆ ಅವಲಂಬಿಸಿರುತ್ತದೆ. ಕನ್ನಡದಿಂದ ಈ ಬಾರಿ ಸ್ಪರ್ಧೆಯಲ್ಲಿದ್ದ ಅರವತ್ತಕ್ಕೂ ಚಿತ್ರಗಳಲ್ಲಿ, ದೇಶ ವಿದೇಶಗಳ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿಎಲ್ಲಿ’ ಸೇರಿದಂತೆ ಹತ್ತು ಚಿತ್ರಗಳು ಅಂತಿಮ ಹಂತದ ಸ್ಪರ್ಧೆಯಲ್ಲಿದ್ದವು ಎನ್ನಲಾಗಿದೆ. ‘ಪಿಂಕಿಎಲ್ಲಿ’ ಚಿತ್ರಕ್ಕಾಗಲೀ, ಅದರ ಇನ್ಯಾವುದೇ ವಿಭಾಗದಲ್ಲಾಗಲೀ ಪರಿಗಣಿಸದೇ ಇರುವುದು ಸಹಜವಾಗಿಯೇ ಈಗ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಒಂದೆರಡು ಮಕ್ಕಳ ಚಿತ್ರಗಳು, ಸಾಮಾಜಿಕ ಸಮಸ್ಯೆಯನ್ನು ಹೇಳಿದ ಚಿತ್ರ ಹೀಗೆ ಪರಿಗಣಿಸಬಹುದಾದ ಚಿತ್ರಗಳಿದ್ದವು.

ಒಟ್ಟು ಪ್ರಶಸ್ತಿಗಳ ಆಯ್ಕೆಯನ್ನು ಗಮನಿಸಿದರೆ, ಅದು ಕಲಾತ್ಮಕ ಅಂಶಗಳಿಗಿಂತ ಜನಪ್ರಿಯ ಚಿತ್ರಗಳತ್ತ ಮುಖ ಮಾಡಿದೆ ಎನ್ನುವ ಅನುಮಾನ ಸಹಜವಾಗಿಯೇ ಮೂಡುತ್ತದೆ.

ಕಳೆದ ಎರಡುಮೂರು ವರ್ಷಗಳಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಪನೋರಮಾ ಚಿತ್ರಗಳ ಆಯ್ಕೆಯ ಕುರಿತಂತೆ, ವಿಶೇಷವಾಗಿ ಕನ್ನಡದಿಂದ ಆಯ್ಕೆಯಾಗುವ ಚಿತ್ರಗಳ ಕುರಿತಂತೆ ಸಾಕಷ್ಟು ಭಿನ್ನಅಭಿಪ್ರಾಯ ಕೇಳಿಬಂದಿತ್ತು. ಚಲನಚಿತ್ರಗಳನ್ನು ಚಿತ್ರಗಳಾಗಿಯೇ ನೋಡುವವರ ಕೊರತೆಯೋ, ಇನ್ನೇನೋ ಒಟ್ಟಿನಲ್ಲಿ ಈ ಬೆಳವಣಿಗೆ ಇದ್ದಂತಿದೆ. ಯಾವುದೇ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ಅದರಆಯ್ಕೆಯ ಸಂದರ್ಭದ ಚರ್ಚೆಯ ವಿವರ ಬಹಿರಂಗಪಡಿಸುವಂತಿಲ್ಲ ಅದರೂ ಅಲ್ಲಲ್ಲಿ ಅದು ಹೊರ ಬರುತ್ತದೆನ್ನಿ.

ಈ ಬಾರಿ ತಮಿಳು ಚಿತ್ರರಂಗಕ್ಕೆ ಪ್ರಶಸ್ತಿಗಳ ಬಂಪರ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಇತಿಹಾಸದಲ್ಲೇ ಇಷ್ಟೊಂದು ಪ್ರಶಸ್ತಿಗಳನ್ನು ತಮಿಳು ಚಿತ್ರರಂಗ ಪಡೆದಿರಲಿಲ್ಲ. ತಮಿಳಿಗೆ ೯ ಪ್ರಶಸ್ತಿಗಳು ಬಂದರೆ, ಮಲಯಾಳ ಎಂಟು ಪ್ರಶಸ್ತಿಗಳೊಂದಿಗೆ ಅದರ ಬೆನ್ನಿಗಿದೆ. ಕನ್ನಡಚಿತ್ರರಂಗವೋ, ಕೆಲವೊಮ್ಮೆ ಅತ್ಯುತ್ತಮ ಕನ್ನಡಚಿತ್ರದ ಪ್ರಶಸ್ತಿಗೆ ತೃಪ್ತಿ ಪಡುವುದಿದೆ. ಅದು ಕನ್ನಡ ಚಿತ್ರಗಳಲ್ಲಿ ಉತ್ತಮ ಎನ್ನುವ ಪ್ರಶಸ್ತಿ. ಎರಡು ವರ್ಷಗಳ ಹಿಂದೆ ಒಂದಷ್ಟು ಹೆಚ್ಚು ಪ್ರಶಸ್ತಿಗಳು ಬಂದಾಗ, ಅದರ ವಿರುದ್ದ ಕಟಕಟೆಯೇರಿದ ಪ್ರಸಂಗವೂ ಇತ್ತು!

ಸಮರ್ಥರಿದ್ದರೂ, ಕೆಲವೊಮ್ಮೆ ಒಳ್ಳೆಯ ಚಿತ್ರಗಳು ಪ್ರಶಸ್ತಿ ವಂಚಿತವಾಗುವುದೂ ಇದೆ ಎನ್ನುವುದಕ್ಕೆ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಹೆಸರಿಸಬಹುದು. ಅದಕ್ಕೇ ‘ಯೋಗ್ಯತೆ ಜೊತೆ ಯೋಗವೂ ಬೇಕು’ ಎನ್ನುವ ಬಲ್ಲಿದರ ಮಾತು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ. ಅವೆರಡೂ ರಾಜಕೀಯದ ಮೂಲಕ ಬರಬಾರದು ಅಷ್ಟೇ!

andolana

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

3 hours ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

3 hours ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

4 hours ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

4 hours ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

4 hours ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

4 hours ago