(ಚಿತ್ರಕೃಪೆ- ಅವಂತಾ ಆರ್ತಿಗಲ)
ಮಿಂಟ್ ರೋಡಿನಲ್ಲಿ ಯದ್ವಾತದ್ವಾ ಮಳೆಯಾಗುತ್ತಿತ್ತು. ಆ ಜಡಿ ಮಳೆಯ ನಡುವೆಯೇ ಶ್ರೀಮಾನ್ ರೂಪಾಯಿ ಮತ್ತು ಮಿಸ್ಟರ್ ಡಾಲರ್ ಮುಖಾಮುಖಿಯಾದರು. ರೂಪಾಯಿ ಮಳೆಯಲ್ಲಿ ತೋಯ್ದು ತೊಪ್ಪೆಯಾಗಿದ್ದ. ತೆರೆದರೆ ಎಲ್ಲಿ ಹರಿದು ಹಂಚಿ ಹೋಗಿಬಿಡುತ್ತಾನೋ ಎಂಬಷ್ಟು ಶಿಥಲವಾಗಿದ್ದ. ಡಾಲರ್ ಗರಿಗರಿಯಾಗಿದ್ದ. ಅಷ್ಟೆಲ್ಲ ಮಳೆ ಸುರಿದರೂ ಒಂದ್ಹನಿ ಮಳೆಯೂ ಮೈಸೋಕಿರಲಿಲ್ಲ. ಈಗಷ್ಟೇ ಪ್ರಿಂಟಿಂಗ್ ಪ್ರೆಸ್ ನಿಂದ ವಾಟರ್‌ಪ್ರೂಫ್ ಕೋಟ್ ಹಾಕಿಕೊಂಡು ಬಂತಂತೆ ಕಾಣುತ್ತಿದ್ದ.
ದಷ್ಟಪುಷ್ಟವಾಗಿದ್ದ ಡಾಲರ್ ಯಾವತ್ತೂ ಕಿತಾಪತಿ. ಮಾತಲ್ಲೇ ಚುಚ್ಚೋದು, ಎತ್ತಿಕಟ್ಟೋದು ಅವನಿಗೆ ಸಲೀಸು. ‘ಏನೋ ರುಪಾಯಿ ತುಂಬಾ ವೀಕ್ ಆಗಿದ್ದೀಯಲ್ಲಾ ಏನ್ ಹೆಲ್ತ್ ಪ್ರಾಬ್ಲಮ್ಮಾ?’ ಅಂತ ಕಿಚಾಯಿಸುವಂತೆ ಕೇಳಿದ.
ರೂಪಾಯಿಗೆ ಏನು ಹೇಳಬೇಕೆಂದೇ ಅರ್ಥವಾಗಲಿಲ್ಲ. ವೀಕ್ ಆಗಿಲ್ಲ ಅಂತಾನೂ ಹೇಳೋಕೆ ಆಗಲಿಲ್ಲ. ವೀಕ್ ಆಗಿಲ್ಲ ಅಂತಾ ಹೇಳಿದ್ರೆ ಸುಳ್ಳ್ ಹೇಳಿದಂತಾಗುತ್ತದೆ. ವೀಕ್ ಆಗಿದ್ದೀನಿ ಅಂದ್ರೆ ಮರ್ಯಾದೆ ಪ್ರಶ್ನೆ. ಮೌನಕ್ಕೆ ಶರಣಾದ.
ಡಾಲರ್ ಬಡ್ಡಿಮಗಾ ಮೊದಲೇ ಕಿತಾಪತಿ. ‘ಲೇ ರೂಪಾಯಿ, ನೀನ್ ಒಳ್ಳೆ ಪ್ಯಾದೆ ಥರಾ ಕಾಣ್ತಾ ಇದ್ದೀಯಾ ಕಣೋ.. ಅದಿಕ್ಕೆ ಕೇಳಿದ್ದು ಯಾಕ್ ವೀಕ್ ಆಗಿದ್ದೀಯಾ ಅಂತಾ? ರೂಪಾಯಿಗೆ ಉರಿದು ಹೋಯ್ತು. ಆದರೂ ತಾಳ್ಮೆಯಿಂದಲೇ ಇದ್ದ. ವೀಕ್ ಆಗಿದ್ದೀಯಾ ಅಂತಾ ಕೇಳ್ತಾನೆ. ಸುಮ್ಮನಿದ್ರೆ, ಪ್ಯಾದೆ ಥರಾ ಇದೀಯಾ ಅಂತಾ ಕೆಣಕುತ್ತಾನೆ, ಇದೊಲ್ಲೆ ಪೀಕಲಾಟ ಆಯ್ತಲ್ಲ ಅಂತಾ ದೇಶವಾರಿ ನಗೆ ನಕ್ಕ.
ದೇಶವಾರಿ ನಗೆಯನ್ನು ರೂಪಾಯಿಯ ವೀಕ್‌ನೆಸ್ ಅಂತಾನೆ ತಿಳ್ಕೊಂಡ ಡಾಲರ್, ‘ಲೇ ರೂಪಾಯಿ, ನಂಗನ್ಸುತ್ತೆ. ನಿಂಗೆ ಹೇಲ್ತ್ ಪ್ರಾಬ್ಲಂ ಇರ್ಬೇಕು.. ಮಾತೇ ಹೊರಡ್ತಿಲ್ಲವಲ್ಲೋ ಯಾರಾದ್ರೂ ಎಕ್ನಾಮಿಸ್ಟ್ ಹತ್ರಾ ತೋರಿಸ್ಕೊಳ್ಳೋ’ ಅಂತಾ ಒಂಥರಾ ಕೊಂಕುಮಾಡಿ ನಕ್ಕ.
ಇನ್ ಸುಮ್ನಿದ್ರೆ ಬಡ್ಡಿಮಗ ಡಾಲರ್ ಇದ್ದಬದ್ದ್ ಮರ್ಯಾದೆ ಕಳೀತಾನೆ ಅಂತಾ ನಿರ್ಧರಿಸಿದ ರೂಪಾಯಿ, ‘ಲೋ ಡಾಲರು, ನಂದ್ ಹೆಲ್ತ್ ಪ್ರಾಬ್ಲಮ್ ಅಲ್ಲ ಕಣೋ ವೆಲ್ತ್ ಪ್ರಾಬ್ಲಮ್ಮು..’ ಅಂತಾ ಪನ್ ಮಾಡಿದ.
ರೂಪಾಯಿ ಮಾಡಿದ ಪನ್ ಡಾಲರ್‌ಗೆ ರುಚಿಸಲಿಲ್ಲ. ಉರುಕೊಂಡು, ‘ಲೇ ರೂಪಾಯಿ, ನಿಂದು ಬೇಸಿಕಲಿ ಹೆಲ್ತ್ ಪ್ರಾಬ್ಲಮ್ ಕಣೋ, ಹೆಲ್ತ್ ಪ್ರಾಬ್ಲಮ್ಮಿಂದಾನೇ ವೆಲ್ತ್ ಪ್ರಾಬ್ಲಮ್ ಬಂದಿರೋದು ತಿಳ್ಕೊ’ ಅಂದ.
ಈ ಬಡ್ಡಿಮಗಾ ಡಾಲರು ಪದೇ ಪದೇ ನಾನು ವೀಕ್ ಅನ್ನೋದನ್ನಾ ಡೈರೆಕ್ಟಾಗಿ, ಇನ್ಡೈರೆಕ್ಟಾಗಿ ಹೇಳ್ತಾನೆ ಇದಾನೆ. ಇವ್ನಿಗೆ ಸರಿಯಾಗಿ ಬುದ್ದಿ ಕಲೀಸ್ಬೇಕು ಅಂತಾ, ‘ ಲೇ ಡಾಲರ್, ನಂಗೀರೋದು ಹೆಲ್ತ್ ಪ್ರಾಬ್ಲಮ್ ಅಲ್ಲ, ವೆಲ್ತ್ ಪ್ರಾಬ್ಲಮ್ ಅಂತಾ ನಾನ್ ಹೇಳ್ತಾ ಇದ್ರೂನು ನೀನ್ ಮಾತ್ರ, ಹೆಲ್ತ್ ಪ್ರಾಬ್ಲಮ್ಮೇ ಅಂತೀದೀಯಾ. ಅಂತಾದೇನೂ ಇಲ್ಲ. ವೆಲ್ತ್ ಪ್ರಾಬ್ಲಮ್ ಅನ್ನೋದನ್ನ ನೀನ್ ಒಪ್ಪಿಕೊಂಡ್ರೆ ಒಂದಿಷ್ಟ್ ನಿನ್ ವೆಲ್ತನ್ನ ನಂಜೊತೆ ಷೇರ್ ಮಾಡ್ಕೊಬೇಕಾಗುತ್ತದೆ ಅಂತಾ ಒಪ್ಕೊತಾ ಇಲ್ಲಾತಾನೇ? ನೀನೊಬ್ಬ ಗ್ರೀಡಿ ಗೊತ್ತು ಬಿಡೋ’ ಅಂದ.
ಡಾಲರ್‌ಗೆ ಮತ್ತೆ ಉರಿದುಹೋಯ್ತು ‘ಲೇ ರೂಪಾಯಿ ಜಟ್ಟಿ ಜಾರ್ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋತರ ಆಡ್ತಾ ಇದ್ದೀಯಾ.. ನೀನ್ ವೀಕ್ ಆಗಿದೀಯಾ, ವೀಕ್ ಆಗ್ತಾನೇ ಇದೀಯಾ.. ಅದೇ ಫ್ಯಾಕ್ಟು, ಅದೇ ಟ್ರುಥ್ಥು. ತಿಳ್ಕಾ..’ ಅಂದ.
ನೋಡಮ್ಮಾ ಡಾಲರ್, ನೀನ್ ಈ ಥರಾ ಅಡ್ಡನ್ಯಾಯಾ ಆಡ್ಬೇಡ ಊರಲ್ಲಿರೋರೆಲ್ಲರನ್ನೂ ಎತ್ತಿಕಟ್ಟಿ, ಬಡ್ಡಿಗೆ ಸಾಲ ಕೊಟ್ಟು, ಮೀಟ್ರು ಬಡ್ಡಿ ಹಾಕೋನು ನೀನು, ಜನರ ನಡುವೆ ಜಗ್ಳ ಹಚ್ಚಾಕಿ, ಹೊಡೆದಾಡೋಕೆ ಅಂತಾ ಮಚ್ಚು, ಕತ್ತಿಗಳನ್ನು ಯದ್ವಾತದ್ವಾ ರೇಟಿಗೆ ಸಪ್ಲೈ ಮಾಡೋನು ನೀನು.. ನೀನು ಮಾರಲ್ಲೀ ಪೊಲ್ಯುಟೆಡ್ ನಿನ್ನಂತಹವನು ನನ್ನ ಬಗ್ಗೆ ಟೀಕೆ ಮಾಡೋದ್ ಸರಿಯಲ್ಲಾ ನಾನು ಮನ್ಸ್ ಮಾಡಿದ್ರೆ ನೀನ್ ಮಾನ ಹರಾಜ್ ಹಾಕ್ಬಲ್ಲೆ ’ಅಂತಾ ರೂಪಾಯಿ ಆವಾಜು ಹಾಕಿಬಿಟ್ಟ.
‘ಲೇ ರೂಪಾಯಿ ನಿಂದ್ ಬರೀ ಮಾತು ಅಂತ್ ನಂಗೆ ಗೊತ್ತಿದೆ, ಮಾತಲ್ಲೇ ಮನೆಕಟ್ಟೋನು ನೀನು.. ನನ್ನ ಮೊರಾಲಿಟಿ ಬಗ್ಗೆ ಮಾತಾಡಬೇಡ.. ನನ್ ಮೊರಾಲಿಟಿ ಬಗ್ಗೆ ಮಾತಾಡೋ ಅಷ್ಟು ವ್ಯಾಲ್ಯೂ ನಿನ್ನಲ್ಲಿಲ್ಲ’ ಅಂತ ಡಾಲರ್ ತಿರುಗೇಟು ನೀಡಿದ.
‘ನೋಡೋ ಡಾಲರು, ನಂಗೆ ವ್ಯಾಲ್ಯೂ ಇಲ್ದೇ ಇರ್ಬಹುದು, ಆದ್ರೆ, ನಾನು ಮಾರಲ್ಲಿ ಸ್ಟ್ರಾಂಗು ಗೊತ್ತಾ? ಮಾರಲ್ಲಿ ಯಾರು ಸ್ಟ್ರಾಂಗಾಗಿದ್ದಾರೋ, ವ್ಯಾಲ್ಯೂ ಇರ್ಲಿ ಬಿಡ್ಲಿ, ಗೆದ್ದೇ ಗೆಲ್ತಾರೆ.. ತಿಳ್ಕಾ..’ ಅಂತ ಮತ್ತೊಂದು ಆವಾಜು ಬಿಟ್ಟ.
‘ಲೇ ನಿನ್ ನನ್ನತ್ರ ಗೆಲ್ಬೇಕಂದ್ರೆ ಎಂಭತ್ಕೆರೆ ನೀರ್ಕುಡಿಯಬೇಕು ಕಣೋ ರುಪಾಯಿ, ಇದುವರೆಗೆ ಎಷ್ಟ್ ಕೆರೆ ನೀರ್ಕುಡ್ದಿದ್ದೀಯಾ? ಅಂತಾ ತೀರಾ ಕಟುವಾಗಿ ಪ್ರಶ್ನಿಸಿದ ಡಾಲರ್.
ಎಂಭತ್ತು ಅದ ತಕ್ಷಣ ರುಪಾಯಿಗೆ
ಯಾಕೋ ಗರಬಡಿದಂತೆ ಆಯ್ತು. ಏನ್ ಮಾತಾಡಬೇಕು ಅಂತಾ ಗೊತ್ತಗಲಿಲ್ಲ. ಬಡ್ಡಿ ಮಗಾ ಡಾಲರ್ ವ್ಯಾಲ್ಯೂನಲ್ಲಿ ಎಷ್ಟು ಸ್ಟ್ರಾಂಗೋ ಮಾತಿನಲ್ಲೂ ಅಷ್ಟೇ ಸ್ಟ್ರಾಂಗು ನಾನ್ ಎಂಭತ್ತರ ಹತ್ರ ಬಂದಿದ್ದೀನಿ ಅಂತಾ ಏನಾದ್ರೂ ಎಂಭತ್ಕೆರೆ ವಿಷ್ಯ ಎತ್ತಿದ್ನಾ ಅಂತಾ ಡೌಟು ಬಂತು. ಡಾಲರ್ ಮಾತಿಗೆ ಕೌಂಟರ್ ಕೊಡೋದು ಹೇಗೆ ಅಂತಾ ಗೊತ್ತಾಗಲಿಲ್ಲ. ಇಲ್ಲೇ ಇದ್ರೆ ಬಡ್ಡಿಮಗಾ ಡಾಲರ್ ಮತ್ತಷ್ಟು ಮರ್ಯಾದೆ ಕಳೀತಾನೆ.. ಮತ್ತೆ ಮತ್ತೆ ಎಂಭತ್ಕೆರೆ ವಿಷ್ಯ ಎತ್ತುತ್ತಾನೆ ಅಂತಾ ಎಚ್ಚೆತ್ತುಕೊಂಡ ರೂಪಾಯಿ ಮೇಲೆ ನೋಡಿದ.
ಮಳೆ ಮತ್ತಷ್ಟು ಜೋರಾಯ್ತು. ಏನಾರಾ ಆಗ್ಲಿ ಮೊದ್ಲು ಮಳೆಯಿಂದ ತಪ್ಪಿಸ್ಕೊಳ್ಳೋಣ ಅಂತಾ ಮಿಂಟ್ ರೋಡಲ್ಲೇ ಇರೋ ಆರ್‌ಬಿಐ ಕೇಂದ್ರ ಕಚೇರಿ ಕಟ್ಟಡದೊಳಕ್ಕೆ ಹೊಕ್ಕು ಮಳೆಯಿಂದ ರಕ್ಷಣೆ ಪಡೆದ.
ಡಾಲರ್ ಮಾತ್ರ ಒಂಥರಾ ನಗ್ತಿದ್ದ. ಅವನ ನಗೆಯಲ್ಲೊಂದು ಸ್ಯಾಡಿಸ್ಟಿಕ್ ಇನ್‌ಸ್ಟಿಂಕ್ಟ್ ಇತ್ತು.!!
–‘ಅಷ್ಟಾವಕ್ರಾ’
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…