ವಿತ್ತ
ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು
ರೂಪಾಯಿ ಮೌಲ್ಯಕ್ಕೂ ವಿದೇಶಿ ವಿನಿಮಯ ಮಿಸಲು ನಿಧಿಗೂ ನೇರಾನೇರ ಸಂಬಂಧ ಇದೆ. ರೂಪಾಯಿ ಮೌಲ್ಯ ಹೆಚ್ಚಾದಷ್ಟೂ ವಿದೇಶಿ ವಿನಿಮಯ ಮೀಸಲು ನಿಧಿ ಹೆಚ್ಚುತ್ತದೆ. ರೂಪಾಯಿ ಮೌಲ್ಯ ಕುಸಿದಷ್ಟೂ ಕುಸಿಯುತ್ತದೆ. ಈಗ ರೂಪಾಯಿ ಮೌಲ್ಯ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಯಾವುದೇ ಕ್ಷಣದಲ್ಲಿ ೮೦ರ ಗಡಿದಾಟಬಹುದು. ಈಗಾಗಲೇ ೮೦ರ ಹೊಸ್ತಿಲಲ್ಲಿ ಕುಳಿತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರೂಪಾಯಿ ಮೌಲ್ಯ ೮೦ರ ಗಡಿದಾಟುವುದು ಕೊಂಚ ವಿಳಂಬವಾಗಿದೆಯಷ್ಟೇ. ರೂಪಾಯಿ ಮೌಲ್ಯ ಕುಸಿದಷ್ಟು ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿಯ ಬಳಕೆ ಹೆಚ್ಚಾಗುತ್ತದೆ. ರೂಪಾಯಿ ಕುಸಿತ ತಡೆಯಲೆಂದೇ ಆರ್ಬಿಐ ಹಲವು ಬಿಲಿಯನ್ ಡಾರ್ಲ ಗಳನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟಿದೆ. ಕಳೆದೊಂದು ವರ್ಷದಿಂದ ೬೦೦ ಬಿಲಿಯನ್ ಡಾಲರ್ ಮಟ್ಟವನ್ನು ಕಾಯ್ದುಕೊಂಡಿದ್ದ ಮಿಸಲು ನಿಧಿಯೀಗ ೫೮೦.೨೫ ಬಿಲಿಯನ್ ಡಾಲರ್‌ಗಳಿಗೆ ಕುಸಿದಿದೆ. ಇದು ಕಳೆದ ೧೫ ತಿಂಗಳಲ್ಲೇ ಕನಿಷ್ಠ ಪ್ರಮಾಣ. ಈ ಮೀಸಲು ನಿಧಿ ಕುಸಿದಷ್ಟೂ ನಾವು ಆರ್ಥಿಕ ಅಸ್ಥಿರತೆಗೆ ಸಮೀಪವಾಗುತ್ತೇವೆ.
ವಿಜ್ಞಾನ –
ಬಿಗಿ ಹಿಡಿತಕ್ಕೊಂದು ಹೊಸ ತಂತ್ರಜ್ಞಾನ
ಹಿಡಿತ ಬಿಗಿಯಾಗಿದ್ದರೆ ಅದನ್ನು ಅಷ್ಟಪಾದಿ (ಆಕ್ಟೋಪಸ್) ಹಿಡಿತ ಎನ್ನುತ್ತೇವೆ. ಬಿಡಿಸಿಕೊಳ್ಳಲಾಗದಷ್ಟು ಬಿಗಿಯಾಗಿರುತ್ತದೆ ಈ ಹಿಡಿತ. ವಾಸ್ತವವಾಗಿ ಅಷ್ಟಪಾದಿ ಹಿಡಿತ ಬಿಗಿಯಾಗಿರುವುದಿಲ್ಲ. ಆದರೆ, ಅದರ ಎಂಟೂ ತೋಳು-ಬಾಹುಗಳಲ್ಲೂ ಬಿಗಿಯಾಗಿ ಹಿಡಿದಿಡುವ ಪ್ರತ್ಯೇಕ ಹೀರಿಕೆ ಹಿಡಿತವಿರುತ್ತದೆ. ಅಕ್ಟೋಪಸ್ ಹಿಡಿತವನ್ನಾಧರಿಸಿ ಹೊಸ ಕೈಗಸನ್ನು (ಗ್ಲೌಸ್) ಶೋಧಿಸಲಾಗಿದೆ. ಪ್ರತಿ ಬೆರಳಲ್ಲೂ ಅಕ್ಟೋಪಸ್ ಹಿರಿಡಿತವನ್ನು ಈ ಕೈಗವಸು ಹೊಂದಿದೆ. ಆಳಸಮುದ್ರದಲ್ಲಿ ಸೂಕ್ಷ್ಮ ಜೀವಿಗಳನ್ನು ಹಿಡಿಯುಲು, ಜಾರಿಕೆಯಿರುವ ಅತ್ಯಂತ ಮೃದು ವಸ್ತುಗಳನ್ನು ಹಿಡಿಯಲು ಈ ತಂತ್ರಜ್ಞಾನ ನೆರವಾಗಲಿದೆ ಎಂದು ಸೈನ್ಸ್ ಅಡ್ವಾನ್ಸ್ ಜುಲೈ ೧೩ರ ಸಂಚಿಕೆ ವರದಿ ಮಾಡಿದೆ. ಬ್ಲ್ಯಾಕ್ಸ್‌ಬರ್ಗ್‌ನ ವರ್ಜೀನಿಯಾ ಟೆಕ್‌ನ ಮೆಕ್ಯಾನಿಕಲ್ ಇಂಜಿನಿಯರ್ ಮೈಕೆಲ್ ಬಾರ್ಟ್ಲೆಟ್ ಪ್ರಕಾರ, ನೀರಿನೊಳಗಿನ ವಸ್ತುಗಳನ್ನು ಗ್ರಹಿಸಲು, ಹುಡುಕಾಟ ಮತ್ತು ಪಾರುಗಾಣಿಕೆ ಮಾಡಲು ಇದು ಅತ್ಯುಪಯುಕ್ತ. ಪುರಾತತ್ತ್ವ ಶಾಸ್ತ್ರಜ್ಞರಿಗೆ ಮತ್ತು ಸಮುದ್ರ ಜೀವಶಾಸ್ತ್ರಜ್ಞರಿಗೆ ಇದರಿಂದ ಹೆಚ್ಚಿನ ನೆರವಾಗಲಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಕೈಗವಸಿಗಷ್ಟೇ ಅಲ್ಲದೇ ಇತರೆ ಪರಿಕರಗಳಿಗೂ ಅಳವಡಿಸುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮುಂದುವರೆಸಿದ್ದಾರೆ.
ವಿಶೇಷ –
ಅಕ್ಟೋಪಸ್ ಜತೆಗೆ ಚಿನ್ನಾಟ
ಸಾಕುಪ್ರಾಣಿಗಳೊಂದಿಗೆ ಚಿನ್ನಾಟವಾಡುವುದರಿಂದ ಮನುಷ್ಯನ ಆರೋಗ್ಯ ಸುಧಾರಿಸುತ್ತದೆ ಅಂತ ಸಂಶೋಧನೆ ಹೇಳಿದೆ. ಚಿನ್ನಾಟವಾಡುವ ಹೊತ್ತಿನಲ್ಲಿ ರಕ್ತದೊತ್ತಡ ಸಾಮಾನ್ಯಸ್ಥಿತಿಗೆ ಬಂದು ಉಸಿರಾಟ ಸಲೀಸಾಗಿರುತ್ತದೆ. ಅದೇ ಆರೋಗ್ಯದ ಗುಟ್ಟು. ಚಿನ್ನಾಟ ಬರೀ ಭೂಮಿ ಮೇಲೆ ಮಾತ್ರ ಏಕೆ? ಆಳ ಸಮುದ್ರದಲ್ಲೂ ಆಡಬಹುದಲ್ಲಾ? ಹೌದು. ಸ್ಕೂಬಾ ಡೈವರ್ ಒಬ್ಬ ಆಳ ಸಮುದ್ರದಲ್ಲಿ ಚಿನ್ನಾಟವಾಡಿದ್ದಾನೆ. ಅದು ಪುಟ್ಟ ಆಕ್ಟೋಪಸ್ ಜತೆಗೆ! ಆತನ ಚಿನ್ನಾದ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಪುಟ್ಟ ಅಕ್ಟೋಪಸ್ ಆತನೆಡೆಗೆ ಬರುತ್ತದೆ. ಆತ ಅಂಗೈನಿಂದ ಅದರ ತಲೆಗೆ ಮೃದುವಾಗಿ ಡಿಕ್ಕಿ ಹೊಡೆಯುತ್ತಾನೆ. ಅಕ್ಟೋಪಸ್ ನಂತರ ತಾನೇ ಬಂದು ಹಲವುಬಾರಿ ಡಿಕ್ಕಿ ಹೊಡೆಯುತ್ತದೆ. ಮತ್ತೆ ತನ್ನ ಅಷ್ಟಪಾದಗಳನ್ನು ರೆಕ್ಕೆಯಂತೆ ಬಿಚ್ಚಿ ನರ್ತಿಸುತ್ತದೆ. ಸ್ಕೂಬಾ ಡೈವರ್ ಜತೆ ಹಲವು ಕ್ಷಣ ಕಳೆಯುತ್ತದೆ. ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ‘ತಮಾಷೆಯ ಪುಟ್ಟ ಆಕ್ಟೋಪಸ್ ಕೊನೆಯವರೆಗೂ ವೀಕ್ಷಿಸಿ’ ಎಂಬ ಶೀಕ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ೨ ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ೧ ಲಕ್ಷ ಲೈಕ್‌ಗಳು ಸಿಕ್ಕಿದ್ದು ೧೫೦೦೦ ರಿಟ್ವೀಟ್ ಆಗಿದೆ.
ವಿಹಾರ –
ಸನ್ನಿಸೈಡ್ ಜನರಲ್ ತಿಮ್ಮಯ್ಯ ಮ್ಯೂಸಿಯಂ
ಕೊಡಗಿನ ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿಸೈಡ್ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಪ್ರವಾಸಿಗರಿಗೆ ಆಕರ್ಷನೀಯ ತಾಣವಾಗಿ ಮಾರ್ಪಟ್ಟಿದೆ. ಮಡಿಕೇರಿ ಜಿಲ್ಲಾಸ್ಪತ್ರೆ ಸಮೀಪವಿರುವ ಸನ್ನಿಸೈಡ್ ಕಟ್ಟಡದನ ಒಳಗೆ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ವ್ಯಕ್ತಿ ಚರಿತ್ರೆ, ಅವರು ಬಳಸುತ್ತಿದ್ದ ವಸ್ತುಗಳು, ಯೂನಿಫಾರ್ಮ್ ಕೂಡ ಇಲ್ಲಿದೆ. ವಿಶೇಷವಾಗಿ ಮಿಗ್ ೨೦ ವಿಮಾನ, ಯುದ್ಧ ಟ್ಯಾಂಕರ್, ಶಿವಾಲಿಕ್ ನೌಕೆಯ ಮಾದರಿ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ. ಸೈನಿಕರು ಬಳಸುವ ೨೪ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, ೫೦ರಿಂದ ೬೦ ವರ್ಷಗಳ ಇತಿಹಾಸ ಇರುವ ಲೈಟ್ ಮೆಷಿನ್ ಗನ್, ಮಧ್ಯಮ ಮೆಷಿನ್ ಗನ್ ಮತ್ತು ಸೆಲ್ಫ್ ಲೋಡಿಂಗ್ ರೈಫಲ್ಸ್, ೭.೬೨, .೩೮ ರೈಫಲ್ ಮತ್ತು ೩೦೩ ಬೋರ್ಡ್ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, ೩೨ ಎಂಎಂ ರೈಫಲ್ ಮತ್ತು ೩೮ ಎಂಎಂ ರೈಫಲ್‌ಗಳು ಸಹಿತ ಹತ್ತು ಹಲವು ವಸ್ತುಗಳು ಸಂಗ್ರಹಾಲಯದಲ್ಲಿ ಸ್ಥಾನ ಪಡೆದಿವೆ.
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…