ವಿತ್ತ
ಹಸಿವು ಮತ್ತು ಸಂಪತು!
ಹಸಿವಿಗೂ ಸಂಪತ್ತಿಗೂ ಸಂಬಂಧವಿದೆ. ಸಂಪತ್ತು ವಿಕೇಂದ್ರೀಕರಣಗೊಂಡರೆ ಹಸಿವಿನಿಂದ ಬಳಲುವವರ ಪ್ರಮಾಣ ತಗ್ಗುತ್ತದೆ. ಸಂಪತ್ತು ಕೇಂದ್ರೀಕರಣಗೊಂಡರೆ ಹಸಿವಿನಿಂದ ಬಳಲುವವರ ಪ್ರಮಾಣ ಹಿಗ್ಗುತ್ತದೆ. ಜಾಗತಿಕ ಹಸಿವಿನ ಸೂಚ್ಯಂಕ ೨೦೨೧ರ ಪ್ರಕಾರ ಭಾರತ ೧೧೬ ದೇಶಗಳ ಪೈಕಿ ೧೦೧ನೇ ಸ್ಥಾನಕ್ಕೆ ಕುಸಿದಿದೆ. ೨೭.೫ ಅಂಕಗಳೊಂದಿಗೆ ದೇಶದ ಹಸಿವಿನ ಪ್ರಮಾಣ ಗಂಭೀರ ಸ್ವರೂಪದ್ದಾಗಿದೆ ಎಂದು ಜಾಗತಿಕ ಹಸಿವಿನ ಸೂಚ್ಯಂಕ ಹೇಳಿದೆ. ಅಸಮರ್ಪಕ ಆಹಾರ ಸರಬರಾಜು, ಶಿಶುಮರಣ ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆ ಮಾನದಂಡಗಳನ್ನಾಧರಿಸಿ ಆಯಾ ದೇಶಗಳ ಹಸಿವಿನ ಪ್ರಮಾಣ ಅಳೆಯಲಾಗುತ್ತದೆ. ಈ ನಡುವೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ ಗೌತಮ್ ಅದಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ೪ನೇ ಸ್ಥಾನಕ್ಕೆ ಜಿಗಿದಿದ್ದಾರೆ. ೨೦೧೪ರಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಹೆಸರೇ ಇಲ್ಲದಿದ್ದ ಗೌತಮ್ ಅದಾನಿ ಅತಿ ತ್ವರಿತಗತಿಯಲ್ಲಿ ಸಂಪತ್ತುಗಳಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ ಕಳೆದ ೮ ವರ್ಷಗಳ ಅವಧಿಯಲ್ಲಿ ಸಂಪತ್ತಿನ ಕೇಂದ್ರೀಕರಣವಾಗಿದೆ ಮತ್ತು ಹಸಿವು ಬಡತನಗಳು ಹೆಚ್ಚಾಗಿವೆ.
ವಿಜ್ಞಾನ
ಸೂರ್ಯನ ಗಾತ್ರಕ್ಕೆ ಸವಾಲು!
ಹೊಸ ಅಧ್ಯಯನಗಳ ಪ್ರಕಾರ, ಲಿಯೋ ನಕ್ಷತ್ರಪುಂಜದ ದಕ್ಷಿಣಕ್ಕೆ ವೇಗವಾಗಿ ತಿರುಗುವ ನ್ಯೂಟ್ರಾನ್ ನಕ್ಷತ್ರವು ಇಲ್ಲಿಯವರೆಗೆ ಕಂಡುಬಂದಿರುವ ಅತ್ಯಂತ ಬೃಹತ್ತಾಕಾರವಾಗಿದೆ. ಖ್ಕ ಒ೦೯೫೨-೦೬೦೭ ಎಂಬ ಹೆಸರಿನ ದಾಖಲೆ ಗಾತ್ರ ನಕ್ಷತ್ರವು ಸೂರ್ಯನಿಗಿಂತ ಸುಮಾರು ೨.೩೫ ಪಟ್ಟು ಹೆಚ್ಚು ತೂಗುತ್ತದೆ ಎಂದು ಸಂಶೋಧಕರು ಜುಲೈ ೧೧ ರಂದು ಚ್ಟಗಿಜಿ.ಟ್ಟಜ ನಲ್ಲಿ ವರದಿ ಮಾಡಿದ್ದಾರೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಖಗೋಳ ಭೌತಶಾಸ್ತ್ರಜ್ಞ, ಅಧ್ಯಯನದ ಸಹ ಲೇಖಕ ರೋಜರ್ ರೊಮಾನಿ ಹೇಳುವ ಪ್ರಕಾರ, ಇದು ಇಲ್ಲಿಯವರೆಗೆ ಕಂಡುಬಂದಿರುವ ಅತ್ಯಂತ ಭಾರವಾದ ನಿಖರವಾಗಿ ಅಳತೆ ಮಾಡಲಾದ ನ್ಯೂಟ್ರಾನ್ ನಕ್ಷತ್ರವಾಗಿದೆ’. ಹಿಂದಿನ ದಾಖಲೆಯು ೦೭೪೦+೬೬೨೦ ಎಂಬ ಉತ್ತರದ ನಕ್ಷತ್ರಪುಂಜದ ಕ್ಯಾಮೆಲೋಪಾರ್ಡಾಲಿಸ್‌ನಲ್ಲಿ ನ್ಯೂಟ್ರಾನ್ ನಕ್ಷತ್ರವಾಗಿದ್ದು, ಇದು ಸೂರ್ಯನಿಗಿಂತ ಸುಮಾರು ೨.೦೮ ಪಟ್ಟು ದೊಡ್ಡದಾಗಿದೆ. ನ್ಯೂಟ್ರಾನ್ ನಕ್ಷತ್ರವು ಬೃಹತ್ತಾಗಿ ಬೆಳೆದರೆ, ತನ್ನದೇ ತೂಕದಿದ ಕುಸಿದು ಕಪ್ಪು ಕುಳಿಯಾಗುತ್ತದೆ. ನ್ಯೂಟ್ರಾನ್ ನಕ್ಷತ್ರಗಳ ಅಳತೆ ಆಸಕ್ತಿದಾಯ ಏಕೆಂದರೆ ಈ ನಕ್ಷತ್ರಗಳು ಮತ್ತು ಕಪ್ಪು ಕುಳಿಗಳ ನಡುವಿನ ನಿಖರವಾದ ದ್ರವ್ಯರಾಶಿಯ ಗಡಿ ಯಾರಿಗೂ ತಿಳಿದಿಲ್ಲ.
ವಿಶೇಷ
ಬಸಿತಾಪದಿಂದ ಬಸವಳಿದವರಿಗೆ ಉಚಿತ ಟಿಕೆಟ್
ಜಾಗತಿಕ ತಾಪಮಾನದ ವಾಸ್ತವಿಕ ಸಮಸ್ಯೆ ಏನು ಎಂಬುದು ಇದೀಗ ಯೂರೋಪಿನ ರಾಷ್ಟ್ರಗಳ ಜನರು ಅನುಭವಿಸುತ್ತಿದ್ದಾರೆ. ಅಲ್ಲಿನ ತಾಪಮಾನ ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ಏರಿದೆ. ೪೦ ಡಿಗ್ರಿ ಸೆಲ್ಸಿಯಸ್ (೧೦೪.೫ ಫ್ಯಾರನ್ಹೀಟ್) ಮಟ್ಟಕ್ಕೆ ಏರಿ ಅಚ್ಚರಿ ಮೂಡಿಸಿದೆ. ಫ್ರಾನ್ಸ್, ಸ್ಪೇನ್, ಬ್ರಿಟನ್ ಮತ್ತು ಪೋರ್ಚುಗಲ್‌ನಲ್ಲಿ ಈಗಾಗಲೇ ನೂರಾರು ಜನರು ಬಿಸಿತಾಪಮಾನ -ಸಂಬಂಧಿತ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮತ್ತಷ್ಟು ಸಾವು ನೋವುಗಳಾಗುವ ಸಂಭವ ಇದೆಯಂತೆ. ಹಿಂದೆದೂ ಕಂಡು ಕೇಳರಿಯದಷ್ಟು ತಾಪಮಾನ ಏರಿ ಜನರು ತತ್ತರಿಸುತ್ತಿದ್ದಾರೆ. ಈ ತಾಪಮಾನ ಬಿಳಿ ಚರ್ಮ ಮತ್ತು ಕೆಂಪು ಕೂದಲಿನವರ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಸಿನಿಮಾ ಪ್ರದರ್ಶನ ಕಂಪನಿಯೊಂದು ಇಂತಹ ಬಿಳಿ ಚರ್ಮ ಮತ್ತು ಕೆಂಪು ಕೂದಲಿನ ವ್ಯಕ್ತಿಗಳಿಗೆ ಉಚಿತವಾಗಿ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಇದು ಪ್ರಚಾರದ ಗಿಮಿಕ್ಕೂ ಹೌದು. ಯುಕೆಯಲ್ಲಿ ಹಣದುಬ್ಬರ ಶೇ.೯ರಷ್ಟು ದಾಟಿದೆ. ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ದಾಟಿದೆ. ಇಂತಹ ಸಂದರ್ಭದಲ್ಲಿ ದುಡ್ಡುಕೊಟ್ಟುಜನ ಸಿನಿಮಾ ನೋಡಲಾದೀತೆ?
ವಿಹಾರ
ಹಾರಂಗಿ ಜಲಾಶಯ
ಕುಶಾಲನಗರದಿಂದ ೯ ಕಿ.ಮೀ. ದೂರದಲ್ಲಿರುವ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೮.೬೫ ಅಡಿ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯ, ೧೭೪ ಅಡಿ ಎತ್ತರ, ೨೭೭೫ ಅಡಿ ಉದ್ದವಿದೆ. ೧೯೬೨ ಅಣೆಕಟ್ಟೆಯ ಕೆಲಸ ಪ್ರಾರಂಭವಾಗಿ ೧೯೮೨ರಲ್ಲಿ ಮುಗಿದಿತ್ತು. ೨೫೯ ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿರುವ ಜಲಾಶಯ, ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಸುಮಾರು ೧,೬೦,೦೦೦ ಎಕರೆಗಳಿಗೆ ನೀರುಣಿಸುತ್ತದೆ. ಈ ಜಲಾಶಯವನ್ನು ಅವಲಂಬಿಸಿ ಖಾಸಗಿ ವಿದ್ಯುತ್ ಸ್ಥಾವರ ಘಟಕ (ಇ.ಡಿ.ಸಿ.ಎಲ್.) ಸ್ಥಾಪಿಸಲಾಗಿದ್ದು, ಸುಮಾರು ೧೫ ವ್ಯಾಟ್ ವಿದ್ಯುಚ್ಛಕ್ತಿಯನ್ನು ಉತ್ಪತ್ತಿ ಮಾಡಿ ಕುಶಾಲನಗರದ ವಿದ್ಯುತ್ ಕೋಶಕ್ಕೆ ಒದಗಿಸುತ್ತಿದೆ. ಮಡಿಕೇರಿ ರಸ್ತೆಯ ಗುಡ್ಡೆಹೊಸೂರಿನಿಂದ ೮.ಕಿ.ಮೀ. ದೂರದಲ್ಲಿ ಈ ಜಲಾಶಯವಿದೆ. ಈ ಜಲಾಶಯದ ಮುಂಭಾಗ ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿ ೪ ಕ್ರಸ್ಟ್ ಗೇಟ್‌ಗಳ ಮುಖಾಂತರ ಹೊಲ್ನೊರೆ ಸೂಸುತ್ತ ಭೋರ್ಗರೆಯುವ ಜಲಾಶಯದ ಸುಂದರ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…