ಎಡಿಟೋರಿಯಲ್

ಟಿಕೆಟ್ ಹಂಚಿಕೆಯ ಕಸರತ್ತಿನ ನಡುವೆ ಚುನಾವಣೆಯ ಲೆಕ್ಕಾಚಾರ

 

  ರಾಜ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರತೊಡಗಿದೆವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿವೆಆದರೆಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ರೀತಿ ಇಂತಹ ಲೆಕ್ಕಾಚಾರಗಳನ್ನು ಬದಲಿಸುವುದು ನಿಶ್ಚಿತ.

ಕರ್ನಾಟಕದ ರಾಜಕಾರಣ ದಿನ ದಿನಕ್ಕೂ ರಂಗೇರುತ್ತಿರುವಂತೆ ಕಾಣುತ್ತಿದ್ದರೆಅದಕ್ಕೆ ಇದೇ ಮುಖ್ಯ ಕಾರಣಅಂದ ಹಾಗೆ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಕಸರತ್ತು ನಡೆಸುತ್ತಿರುವ ಮೂರೂ ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲೇ ಪರದಾಡಿವೆಅಷ್ಟೇ ಅಲ್ಲಟಿಕೆಟ್ ಹಂಚಿಕೆಯ ನಂತರ ತಮ್ಮ ಪಕ್ಷದ ಅಂತರಂಗದಲ್ಲಿ ಮೂಡುವ ಬಿಕ್ಕಟ್ಟು ದೊಡ್ಡ ಮಟ್ಟದ ಧ್ರುವೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂಬುದು ಈ ಪಕ್ಷಗಳಿಗೆ ಗೊತ್ತಿದೆ.

ಅಂದ ಹಾಗೆ ಟಿಕೆಟ್ ಪಡೆಯಲು ವಿಫಲರಾದವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಬಹುದುಮೊದಲನೆಯದಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಏಳಬಹುದುಒಂದು ವೇಳೆ ಬಂಡಾಯ ಏಳದಿದ್ದರೆ ಪಕ್ಷ ತೊರೆದು ಬೇರೆ ಪಕ್ಷಕ್ಕೂ ಹೋಗಬಹುದುಇವೆರಡು ಮಾರ್ಗಗಳೂ ಸರಿಯಲ್ಲ ಅನಿಸಿದರೆ ಒಳಗಿಂದೊಳಗೇ ಸಿಟ್ಟು ಕಾರುತ್ತಾ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಗಬಹುದು.

ಅರ್ಥಾತ್ಇವೇ ಅಂಶಗಳು ರಾಜಕೀಯ ಧ್ರುವೀಕರಣಕ್ಕೆ ಮೂಲವಾಗಲಿವೆ ಮತ್ತು ಇಂತಹ ಧ್ರುವೀಕರಣ ಘಟಿಸಿದ ನಂತರವೇ ಎಲ್ಲ ರಾಜಕೀಯ ಪಕ್ಷಗಳ ನೈಜ ಬಲಾಬಲ ಏನು ಅನ್ನುವುದರ ಚಿತ್ರಣ ಸಿಗುತ್ತದೆ.

ಅಂದ ಹಾಗೆ ಇವತ್ತಿನ ಸ್ಥಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಕಲ್ಪನಾ ವಿಹಾರದಲ್ಲಿ ಮುಳುಗಿವೆಈ ಪೈಕಿ ರಾಜ್ಯ ಕಾಂಗ್ರೆಸ್ ಪಾಳೆಯವನ್ನು ಪ್ರವೇಶಿಸಿದರೆ ಅಪಾರ ಆತ್ಮವಿಶ್ವಾಸ ಕಾಣುತ್ತದೆಕಾಂಗ್ರೆಸ್ ನಾಯಕರ ಪ್ರಕಾರಈ ಬಾರಿಯ ಚುನಾವಣೆಯಲ್ಲಿ

ಪಕ್ಷ ನೂರಾ ಇಪ್ಪತ್ತರಿಂದ ನೂರಿಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ.

ಅಂದರೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ತಮ್ಮ ಪಕ್ಷಕ್ಕಿದೆ ಎಂಬುದು ಕಾಂಗ್ರೆಸ್ ನಾಯಕರ ನಂಬಿಕೆಅವರ ಈ ನಂಬಿಕೆಗೆ ಸನ್ನಿವೇಶದ ಸಾಕ್ಷ್ಯಾಧಾರಗಳೇ ಕಾರಣಉದಾಹರಣೆಗೆ ಹೇಳಬೇಕೆಂದರೆ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದು.

ಬೊಮ್ಮಾಯಿ ಸರ್ಕಾರ ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ತನ್ನದೇ ಆರೋಪ ಏನಿದೆ ಇದು ಜನರ ಮನಸ್ಸನ್ನು ನಾಟಿದೆ ಎಂಬುದು ಕಾಂಗ್ರೆಸ್ಸಿನ ನಂಬಿಕೆಇವತ್ತು ಸರ್ಕಾರದ ಯಾವುದೇ ಕಚೇರಿಗಳಿಗೆ ಹೋಗಿ ನೋಡಿದರೂ ಅಲ್ಲಿ ಭ್ರಷ್ಟಾಚಾರದ ಉಪಸ್ಥಿತಿ ಇರುತ್ತದೆಹೀಗೆ ಪ್ರತಿಯೊಂದು ಕೆಲಸಕ್ಕೂ ಜನ ಲಂಚರುಷುವತ್ತು ನೀಡುವುದು ಅನಿವಾರ್ಯವಾದರೆ ಅದರರ್ಥ ಏನುಆಡಳಿತ ಯಂತ್ರದ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ ಅಂತಲ್ಲವೇ

ಅಂದ ಮೇಲೆ ಜನರಾದರೂ ಏಕೆ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುತ್ತಾರೆಹೀಗಾಗಿಯೇ ಬಿಜೆಪಿಗೆ ಪರ್ಯಾಯವಾಗಿ ತಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸಈ ಮಧ್ಯೆ ಆಡಳಿತಾರೂಢ ಬಿಜೆಪಿಗೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಆತ್ಮವಿಶ್ವಾಸವಿಲ್ಲ.

ಕಮಲ ಪಾಳೆಯದ ಮೂಲಗಳ ಪ್ರಕಾರತಕ್ಷಣ ಚುನಾವಣೆ ನಡೆದರೆ ಬಿಜೆಪಿಗೆ ಎಂಬತ್ತರಿಂದ ಎಂಬತ್ತೈದು ಕ್ಷೇತ್ರಗಳಲ್ಲಿ ಗೆಲುವು ಸಿಗಬಹುದು.

ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಈ ಬಾರಿಯ ಚುನಾವಣೆಯಲ್ಲಿ ನಾವು ಕನಿಷ್ಠ ತೊಂಬತ್ತು ಸ್ಥಾನ ಗಳಿಸಬೇಕು ಎಂದು ಹೇಳಿದ್ದಾರಂತೆಅರ್ಥಾತ್ತಮಗೆ ಸ್ವಯಂಬಲದ ಮೇಲೆ ಅಽಕಾರ ದಕ್ಕದಿದ್ದರೂ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವುದು ಗ್ಯಾರಂಟಿ ಎಂಬುದು ಬಿಜೆಪಿ ಲೆಕ್ಕಾಚಾರಹಾಗಾದಾಗ ಜಾತ್ಯತೀತ ಜನತಾದಳ ಜತೆಗೂಡಿ ಮೈತ್ರಿ ಸರ್ಕಾರ ರಚಿಸುವಂತಾಗಬೇಕು ಎಂಬುದು ಅದರ ಯೋಚನೆ.

ಈ ಮಧ್ಯೆ ದೇವೇಗೌಡಕುಮಾರಸ್ವಾಮಿ ನೇತೃತ್ವದ ಜಾ.ದಳ ಕೂಡ ತನ್ನದೇ ಲೆಕ್ಕಾಚಾರಗಳಲ್ಲಿ ಮುಳುಗಿದೆಯಲ್ಲದೆಕನಿಷ್ಠ ಐವತ್ತು ಕ್ಷೇತ್ರಗಳಲ್ಲಿ ತಾನು ಗೆಲುವು ಸಾಧಿಸುವುದು ಖಚಿತ ಎಂಬ ಲೆಕ್ಕಾಚಾರದಲ್ಲಿದೆಅಂದರೆ ಯಾರೇ ಸರ್ಕಾರ ರಚಿಸಲಿತನ್ನ ನೆರವು ಇಲ್ಲದೆ ಸರ್ಕಾರ ರಚನೆಯಾಗುವುದಿಲ್ಲ ಎಂಬುದು ಜಾ.ದಳ ಯೋಚನೆ.

 

ಹೀಗೆ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿರುವುದೇನೋ ನಿಜಆದರೆ ಟಿಕೆಟ್ ಹಂಚಿಕೆಯ ನಂತರ ನಡೆಯುವ ರಾಜಕೀಯ ಧ್ರುವೀಕರಣ ಕರ್ನಾಟಕದ ರಾಜಕೀಯ ಚಿತ್ರವನ್ನು ಸ್ಪಷ್ಟಗೊಳಿಸುತ್ತದೆಇದಕ್ಕೆ ತುಂಬ ದಿನಗಳು ಕಾಯಬೇಕಿಲ್ಲ.

andolanait

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

16 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

16 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

18 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

20 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

23 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

23 hours ago