ಶೀಘ್ರವೇ ಕಸ ವಿಲೇವಾರಿಗೆ ಕ್ರಮ
ಮೈಸೂರಿನ ಜೆ.ಪಿ.ನಗರದ ಹೊರ ವರ್ತುಲ ರಸ್ತೆಯಲ್ಲಿ ತ್ಯಾಜ್ಯ ಬೀಸಾಡುವವರಿಗೆ ದಂಡ ವಿಧಿಸಲಾಗಿದೆ. ಆದರೂ ಕೂಡ ಜನರು ನಾಗರಿಕರಂತೆ ವರ್ತಿಸುತ್ತಿಲ್ಲ ಎಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದ್ದಾರೆ. ‘ಆಂದೋಲನ’ ದಿನ ಪತ್ರಿಕೆಯ ಓದುಗರ ಪತ್ರ ವಿಭಾಗದಲ್ಲಿ ಡಿ.22ರಂದು ‘ರಸ್ತೆ ಬದಿಯಲ್ಲಿ ಅನೈರ್ಮಲ್ಯ’ ಶೀರ್ಷಿಕೆಯಡಿ ಪ್ರಕಟವಾಗಿರುವ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹೊರ ವರ್ತುಲ ರಸ್ತೆಯಲ್ಲಿ ಕಸ ಹಾಕುತ್ತಿರುವವರ ವಿರುದ್ಧ ಹಲವು ಬಾರಿ ದಂಡ ವಿಧಿಸಿ ಕ್ರಮಕೈಗೊಂಡು ಕಸ ವಿಲೇವಾರಿ ಮಾಡಿ ಸಲಾಗಿದೆ. ಜೊತೆಗೆ ಕಸ ಹಾಕದಂತೆ ಸಾರ್ವಜನಿಕರಿಗೆ ಮನವಿ ಮಾಡಿ ನೈರ್ಮಲ್ಯದ ಅರಿವು ಮೂಡಿಸಲಾಗಿದೆ. ಇಷ್ಟಾದರೂ ಕೆಲವರು ಮುಂಜಾನೆ ಮತ್ತು ರಾತ್ರಿ ಸಮಯದಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಜನರು ನಾಗರಿಕರಂತೆ ವರ್ತಿಸಿದರೆ ಈ ಸಮಸ್ಯೆ ಉದ್ಭವಿಸದು. ಶೀಘ್ರವೇ ರಾಶಿಬಿದ್ದಿರುವ ಕಸವನ್ನು ವಿಲೇವಾರಿ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಸ್ ತಂಗುದಾಣದಲ್ಲಿ ಆಸನ ವ್ಯವಸ್ಥೆಗೆ ಕ್ರಮ
ಮೈಸೂರಿನ ಆರ್‌ಟಿಒ ವೃತ್ತದ ಬಳಿಯಿರುವ ಬಸ್ ತಂಗುದಾಣದಲ್ಲಿ ಆಸನಗಳಿಲ್ಲದ ಬಗ್ಗೆ ನಗರಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದ್ದು, ಸಮಸ್ಯೆ ಬಗೆಹರಿಸಲಾಗುವುದು ಎಂದು ಪಾಲಿಕೆ ಸದಸ್ಯ ಲೋಕೇಶ್ (ಪಿಯಾ) ಹೇಳಿದ್ದಾರೆ. ‘ಆಂದೋಲನ’ ದಿನ ಪತ್ರಿಕೆಯಲ್ಲಿ ಡಿ.೨೨ರಂದು ಓದುಗರ ಪತ್ರಗಳು ವಿಭಾಗದಲ್ಲಿ ‘ಕುಳಿತುಕೊಳ್ಳಲು ಆಸನವೇ ಇಲ್ಲದ ಬಸ್ ನಿಲ್ದಾಣ’ ಶೀರ್ಷಿಕೆಯಡಿ ಪ್ರಕಟವಾಗಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅವರು, ಬಸ್ ತಂಗುದಾಣದಲ್ಲಿ ಹಲವು ತಿಂಗಳಿಂದ ಆಸನ ವ್ಯವಸ್ಥೆಯಿಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ನಗರಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಆಸನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ ಮಡಿಕೇರಿ: ಡಿ.೨೦…
ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…
ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…
ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…