ಎಡಿಟೋರಿಯಲ್

ಅಮೆಜಾನ್ ಕಾಡಿನ ನಿಗೂಢ ಮನುಷ್ಯನ ದಾರುಣ ಅಂತ್ಯ

ಕೃಷಿಯನ್ನು ವಿಸ್ತರಿಸಲು ಕಾಡನ್ನು ಆಕ್ರಮಿಸಿದ ನಾಗರಿಕರು ನಿಧಾನವಾಗಿ ಆ ಪಂಗಡದ ಜನರ ನೆಲೆಯನ್ನೇ ಸರ್ವನಾಶ ಮಾಡಿದರು.

-ಕಾರ್ತಿಕ್ ಕೃಷ್ಣ

ಚಾರ್ಲ್ಸ್ ಡಾರ್ವಿನಿನ ವಿಕಾಸವಾದದ ಒಂದು ಸಿದ್ಧಾಂತದ ಪ್ರಕಾರ, ಯಾವ ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ ಒಗ್ಗಿಕೊಂಡು, ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವವೋ, ಅವುಗಳು ಮಾತ್ರ ತಮ್ಮ ಗುಣ ಸ್ವಭಾವಗಳನ್ನು ಮುಂದಿನ ಪೀಳಿಗೆಗೆ ರವಾನಿಸಿ, ವಿಕಾಸ ಹೊಂದುತ್ತಿರುತ್ತವೆ. ಉಳಿದದ್ದು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ತೀರಾ ಇತ್ತೀಚೆಗೆ ಮರಣ ಹೊಂದಿದ ಬಿಳಿ- ಖಡ್ಗ ಮೃಗದ ಬಗ್ಗೆ ನೀವು ಓದಿರಬಹುದು. ಬೇಸರದ ಸಂಗತಿಯೆಂದರೆ, ಆ ಜಾತಿಯ ಕೊನೆಯ ಜೀವಿಯದು. ಅದರ ಸಾವಿನೊಂದಿಗೆ, ಬಿಳಿ ಖಡ್ಗಮೃಗ ಭೂಮಿಯ ಮೇಲೆ ಇನ್ನೆಂದೂ ಕಾಣಿಸದ ಹಾಗೆ ನಶಿಸಿ ಹೋಯಿತು. ಅದರಲ್ಲಿ ಮನುಷ್ಯನ ಕೈವಾಡವೂ ಇತ್ತೆಂದು ಬೇರೆ ಹೇಳಬೇಕಿಲ್ಲ ಅಲ್ಲವೇ?

ವಿನಾಶದ ಕಾರ್ಮೋಡ ಕೇವಲ ಪ್ರಾಣಿ ಪಕ್ಷಿಗಳಿಗನ್ನಷ್ಟೇ ಆವರಿಸದೆ, ಮನುಷ್ಯನ ಕೆಲ ಪಂಗಡಗಳನ್ನೂ ಇನ್ನಿಲ್ಲದಂತೆ ಮಾಡಿದೆ. ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗಷ್ಟೇ ಮರಣ ಹೊಂದಿದ ಬ್ರೆಜಿಲ್ ದೇಶದ ಸ್ಥಳೀಯ ಪಂಗಡದ ವ್ಯಕ್ತಿ. ೨೬ ವರ್ಷ ಏಕಾಂತ ವಾಸ ನಡೆಸಿದ ಆತನ ಸಾವಿನ ಜೊತೆ ಆ ಪಂಗಡವೇ ಇತಿಹಾಸದ ಪುಟ ಸೇರಿತು.

ಸ್ಥಳೀಯ ಅಥವಾ ಐ್ಞಜಿಜಛ್ಞಿಟ್ಠ ಪಂಗಡಗಳ ವಿನಾಶ ಆಹಾರದ ಅಭಾವ ಅಥವಾ ಬದಲಾಗುತ್ತಿರುವ ವಾತಾವರಣಕ್ಕೆ ಹೊಂದಿಕೊಳ್ಳದೇ ಸಂಭವಿಸಿದರೆ, ಅದು ಬೇರೆಯ ಸಂಗತಿ. ಆದರೆ ಪೂರ್ಣ ಅಭಿವೃದ್ಧಿ ಹೊಂದಿದ ನಾಗರಿಕ ಪ್ರಾಣಿಗಳಿಂದ ಘಟಿಸಿದರೆ ಅದಕ್ಕಿಂತ ದೊಡ್ಡ ವಿಪರ್ಯಾಸವಿದೆಯೇ?

ಆತ ಯಾರೊಡನೆಯೂ ಮಾತನಾಡದೆ ಮೌನವಾಗಿ ಏಕಾಂತದಲ್ಲಿ ಜೀವಿಸಿದ. ತಾನು ಬಾಳುತ್ತಿದ್ದ ಪರಿಸರದಲ್ಲಿ ಸುಮಾರು ೧೦ ಮೀಟರ್ ಆಳದ ಗುಂಡಿಗಳನ್ನು ತೋಡಿದ್ದು ಕಂಡು ಬಂದದ್ದರಿಂದ ಚ್ಞ ಟ್ಛ ಏಟ್ಝಛಿ ಎಂದೇ ಕರೆಯಲ್ಪಟ್ಟ. ಯಾಕೆ ಗುಂಡಿಗಳನ್ನು ತೊಡುತ್ತಿದ್ದ ಎಂದು ಯಾರೂ ಸರಿಯಾಗಿ ಹೇಳಲಾರರು. ಒಂದಕ್ಷರವೂ ಮಾತಾಡದೆ ಇದ್ದಿದ್ದುದರಿಂದ ಆತ ನಿಗೂಢವಾಗಿಯೇ ಉಳಿದುಬಿಟ್ಟ. ಕೆಲವೊಂದು ಗುಂಡಿಗಳಲ್ಲಿ ಆತ ಈಟಿಯನ್ನು ಶೇಖರಿಸಿಟ್ಟರೆ, ತಾನು ವಾಸಿಸುತ್ತಿದ್ದ ಗುಡಿಸಲಿನಲ್ಲಿ ತೋಡಿದ್ದ ಗುಂಡಿಯ ಗೋಡೆಗಳಲ್ಲಿ ಕೆಲ ಪ್ರಾಚೀನ ಚಿಹ್ನೆಗಳನ್ನು ಬಿಡಿಸಿದ್ದನಂತೆ.

ಆತನ ಪಂಗಡದ ನರಮೇಧ ಶುರುವಾಗಿದ್ದು ೧೯೭೦ರ ಆದಿಯಲ್ಲಿ. ಕೃಷಿಯನ್ನು ವಿಸ್ತರಿಸಲು ಕಾಡನ್ನು ಆಕ್ರಮಿಸಿದ ಜನರು, ನಿಧಾನವಾಗಿ ಆ ಪಂಗಡದವರ ನೆಲೆಯನ್ನು ಕಬಳಿಸಲು ಆರಂಭಿಸಿದರು. ಇದು ತಾರಕಕ್ಕೆ ಏರಿದ್ದು ೧೯೮೦ರಲ್ಲಿ ಕೆಲ ಸಾಕಣೆದಾರರು ಸಕ್ಕರೆಗೆ ಇಲಿ ಪಾಷಾಣವನ್ನು ಬೆರೆಸಿ ಈ ಪಂಗಡದ ಬಹುತೇಕ ಸದಸ್ಯರನ್ನು ಕೊಂದಾಗ. ಈ ಘೋರ ಕೃತ್ಯದಲ್ಲಿ ಉಸಿರು ಉಳಿಸಿಕೊಂಡದ್ದು ಕೇವಲ ಏಳು ಜನರಷ್ಟೇ. ಆದರೆ ಅವರ ಭೂಕಬಳಿಕೆಯ ಪೈಶಾಚಿಕ ಪ್ರವೃತ್ತಿ ಅಲ್ಲಿಗೆ ನಿಲ್ಲುತ್ತದೆಯೇ? ಮತ್ತೆ ದಾಳಿ ನಡೆಸಿ ಆರು ಜನರನ್ನು ಗುಂಡಿಕ್ಕಿ ಕೊಂದರು. ಒಬ್ಬಾತ ಹೇಗೋ ಉಳಿದುಕೊಂಡ.

ಅಲ್ಲಿಂದ ಆತ ಸವೆಸಿದ್ದು ಒಂಟಿ ಜೀವನವನ್ನು! ತನ್ನ ಸಕಲ ಪರಿವಾರವನ್ನು ಕಳೆದುಕೊಂಡು, ಘೋರ ಆಘಾತವನ್ನು ಎದೆಯಲ್ಲಿ ಹುದುಗಿಸಿಕೊಂಡು ಜೀವಿಸಿದ ಈ ಚ್ಞ ಟ್ಛ ಠಿಛಿ ಏಟ್ಝಛಿ ನದ್ದು ಅದೆಂತಹ ದುರಂತ ಕಥೆ!

೧೯೯೦ರಲ್ಲಿ ಬ್ರೆಜಿಲ್‌ನ ಬುಡಕಟ್ಟು ಜನಾಂಗಗಳ ಹಿತರಕ್ಷಣೆಗಾಗಿ ಸ್ಥಾಪಿತವಾದ ಊಖಿಘೆಅಐ ಸಂಸ್ಥೆಗೆ ಬದುಕುಳಿದ ಆತನ ಸ್ಥಿತಿಗತಿಗಳ ಅರಿವಾಗಿ ಭೂಕಬಳಿಕೆದಾರರು ಒತ್ತುವರಿ ಮಾಡಿಕೊಂಡಿದ್ದ ಆತನ ಪಂಗಡದ ನೆಲವನ್ನು ಕೂಲಂಕಷವಾಗಿ ಅಭ್ಯಸಿಸಿ, ಹಿಂದೆ ನೆಲಸಮಗೊಂಡಿದ್ದ ಅವರ ಗುಡಿಸಲಿನ ಕುರುಹುಗಳನ್ನು ಶೋಧಿಸಿದರು. ಆ ಸಮಯದಲ್ಲಿ ಆತನಿಗೆಂದು ಅವರು ಬಿಟ್ಟುಹೋಗಿದ್ದ ಆಹಾರಪೊಟ್ಟಣಗಳನ್ನು ಆತ ಮುಟ್ಟಿಯೂ ನೋಡಲಿಲ್ಲವಂತೆ. ಹಾಗೆಯೆ ಆತನ ಗಮನ ಸೆಳೆಯಲು ತೀರಾ ಹತ್ತಿರಹೋದವರ ಮೇಲೆ ದಾಳಿಯನ್ನೂ ನಡೆಸಿದ್ದನಂತೆ! ಆತನಿಗೆ ಅದೆಷ್ಟು ರೋಷವಿದ್ದೀತು ನಾಗರಿಕ ಕುಲದ ಬಗ್ಗೆ!

೧೯೯೭ರಲ್ಲಿ ಬ್ರೆಜಿಲ್ ಅಧಿಕಾರಿಗಳು ತಾನ್ಯಾರು ಪ್ರಾಂತ್ಯದಲ್ಲಿ ೧೯,೭೭೦ ಎಕರೆ (೮,೦೦೦ ಹೆಕ್ಟೇರ್) ಭೂಮಿಯನ್ನು ಮೀಸಲು ಪ್ರದೇಶವೆಂದು ಗೊತ್ತುಪಡಿಸಿ, ಆ ಮನುಷ್ಯನು ತೊಂದರೆಯಿಲ್ಲದೆ ವಾಸಿಸುವ ಸಲುವಾಗಿ, ಆ ಪ್ರದೇಶಕ್ಕೆ ಬೇಲಿ ಹಾಕಿ ಸಂರಕ್ಷಿಸಿದರು. ಆ ಪ್ರದೇಶವು ಲ್ಯಾಂಡ್ ಪ್ರೊಟೆಕ್ಷನ್ ಆರ್ಡರ್ಸ್ (ಔ) ಮೂಲಕ ಸಂರಕ್ಷಿಸಲ್ಪಟ್ಟ ಬ್ರೆಜಿಲ್‌ನ ಏಳು ಪ್ರಾಂತ್ಯಗಳಲ್ಲಿ ಒಂದಾಯಿತು. ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ನಿಯಂತ್ರಿಸುವ ಕೆಲವು ತಾತ್ಕಾಲಿಕ ಕಾನೂನು ಕ್ರಮಗಳನ್ನು ಜಾರಿಗೆ ತಂದರು. ಆದರೂ ಅಕ್ರಮ ಅರಣ್ಯನಾಶ ಮತ್ತು ದಾಳಿಗಳು ಮುಂದುವರಿದವು.

ನಾವು ನಡೆಸಿದ ಎಲ್ಲ ರೀತಿಯ ಮಾತುಕತೆಯ ಪ್ರಯತ್ನಗಳನ್ನು ಆತ ಸಾರಾ ಸಗಟಾಗಿ ನಿರಾಕರಿಸುತ್ತಿದ್ದರಿಂದ, ಆತ ನಿರ್ದಿಷ್ಟವಾಗಿ ಯಾವ ಪಂಗಡಕ್ಕೆ ಸೇರಿದ್ದ ಅಥವಾ ಆತ ರಂಧ್ರಗಳನ್ನು ಕೊರೆಯುತ್ತಿದ್ದ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಗಳು ಆತನೊಂದಿಗೇ ಉಳಿದವು ಎಂದು ದೇಶೀಯ ಜನರ ಮಾನವ ಹಕ್ಕುಗಳ ವೀಕ್ಷಣಾಲಯದ ಪ್ರತಿನಿಧಿಗಳು ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ತಾನು ಒಂದು ಶಬ್ದ ಉಸುರಿದರೆ ಎಲ್ಲಿ ತನ್ನ ಬುಡಕಟ್ಟಿನ ಮಾಹಿತಿ ಸೋರಿ ಹೋಗುವುದೋ ಅಥವಾ ತನ್ನ ಭಾಷೆಯ ಮೂಲ ತಿಳಿದು ಬಿಡುವುದೋ ಎಂಬ ಮುನ್ನೆಚ್ಚರಿಕೆಯಿಂದ ಆತ ಜೀವಿಸಿದ ಎಂದೂ ಅವರು ಉಲ್ಲೇಖಿಸುತ್ತಾರೆ.

ಈಗ ಅದೆಷ್ಟೋ ಬ್ರೆಜಿಲ್‌ನ ದೇಶಿಯ ಬುಡಕಟ್ಟು ಪಂಗಡಗಳು ನಾಗರಿಕತೆಯ ಅಲೆಗೆ ಸಿಕ್ಕಿ ಪಟ್ಟಣಗಳಿಗೆ ವಲಸೆ ಬಂದಾಗಿದೆ. ಆದರೂ ೩೦೫ ಪಂಗಡದ ೯ ಲಕ್ಷ ಜನ ಇನ್ನೂ ಬ್ರೆಜಿಲ್‌ನಲ್ಲಿದ್ದಾರಂತೆ. ಇದರಲ್ಲಿ ಉಳಿದವರೊಂದಿಗೆ ಬೆರೆಯುವುದನ್ನು ಇಷ್ಟ ಪಡದೆ ತಮ್ಮದೇ ಲೋಕದ ಕಾಯಕದಲ್ಲಿ ಮುಳುಗಿರುವ ಪಂಗಡಗಳು ಸುಮಾರು ನೂರಿರಬಹುದು. ಅವುಗಳಲ್ಲಿ ಒಂದು ಪಂಗಡ ‘ಮ್ಯಾನ್ ಆಫ್ ದಿ ಹೋಲ್’ ನ ಸಾವಿನಿಂದ ಕೊನೆಗೊಂಡಿದೆ.

೨೦೧೯ರಲ್ಲಿ ಬ್ರೆಜಿಲ್‌ನಲ್ಲಿ ಅಧ್ಯಕ್ಷರಾಗಿ ಜೈರ್ ಬೋಲ್ಸನಾರೊ ಅಧಿಕಾರಕ್ಕೆ ಬಂದಾಗಿನಿಂದ, ಸ್ಥಳೀಯ ಪ್ರದೇಶಗಳಲ್ಲಿ ಭೂ ಆಕ್ರಮಣಗಳು ಸುಮಾರು ಮೂರು ಪಟ್ಟು ಹೆಚ್ಚಾಗಿದೆಯಂತೆ. ೨೦೧೯ರಲ್ಲಿ ೧೦೯ ರಷ್ಟಿದ್ದ ಪ್ರಕರಣಗಳು ೨೦೨೧ರಲ್ಲಿ ೩೦೫ಕ್ಕೆ ಏರಿಕೆಯಾಗಿದೆಂದರೆ ಅದೇನು ತಮಾಷೆಯ ವಿಚಾರವಲ್ಲ! ಇದೇ ಅಕ್ಟೋಬರ್‌ನಲ್ಲಿ ಬ್ರೆಜಿಲ್‌ನ ಹೊಸ ಸರ್ಕಾರದ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಅನೇಕ ಸ್ಥಳೀಯ ಸಮುದಾಯಗಳ ಭವಿಷ್ಯ ನಿರ್ಧಾರ ಮಾಡುವ ನಿರ್ಣಾಯಕ ಘಟ್ಟ ಎನ್ನಬಹುದು. ಈ ಚುನಾವಣೆಯಲ್ಲಿ ದಾಖಲೆಯ ೧೮೧ ಸ್ಥಳೀಯ ಪಂಗಡಗಳ ಅಭ್ಯರ್ಥಿಗಳು ಅಧಿಕಾರಕ್ಕೆ ಸ್ಪರ್ಧಿಸುತ್ತಿದ್ದಾರಂತೆ. ಅವರಲ್ಲಿ ಹಲವರು ಮೊದಲ ಬಾರಿಗೆ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ.

ಬೋಲ್ಸನಾರೊ ಅವರ ಎದುರಾಳಿ, ಮಾಜಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಅಧ್ಯಕ್ಷರಾಗಿ ಚುನಾಯಿತರಾದರೆ ಸ್ಥಳೀಯ ಭೂಮಿಯಲ್ಲಿ ಅಕ್ರಮ ಚಟುವಟಿಕೆಗಳನ್ನು, ಹಾಗೆಯೇ ದೇಶಿಯ ಪಂಗಡಗಳ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆಯನ್ನು ಕೊನೆಗೊಳಿಸುವ ವಾಗ್ದಾನವನ್ನೂ ಮಾಡಿದ್ದಾರೆ.

ತಾನ್ಯಾರು ಎಂಬ ಸಣ್ಣ ಮಾಹಿತಿಯನ್ನೂ ನೀಡದೆ, ತನ್ನ ಪಂಗಡದ ಕೊನೆಯ ಸದಸ್ಯನಾಗಿ ದಶಕಗಳ ಕಾಲ ಒಬ್ಬಂಟಿಯಾಗಿ ಬದುಕಿದ ಆತನ ಸಾವು ಬ್ರೆಜಿಲ್ ಸರ್ಕಾರವನ್ನು ಕಣ್ತೆರಿಸಿ ಎಲ್ಲಾ ದೇಶಿಯ ಬುಡಕಟ್ಟು ಪಂಗಡಗಳು ನಿರಾತಂಕವಾಗಿ ಬದುಕುವಂತಾಗಲಿ.

(ಚಿತ್ರಕೃಪೆ- ನ್ಯೂಯಾರ್ಕ್ ಪೋಸ್ಟ್)

andolana

Recent Posts

ಚೀನಾ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 21 ಜನರು ಸಾವು

ಬೀಜಿಂಗ್:‌ ಮಧ್ಯ ಚೀನಾದ ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು…

60 mins ago

ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್‌ನಲ್ಲಿ ನಡೆದಿದೆ. ಮೈಸೂರು ಮೂಲದ…

2 hours ago

ನೀರಿಗಿಳಿಯುವ ಮುನ್ನ ಇರಲಿ ಎಚ್ಚರ !

ಜಿಲ್ಲೆಯಲ್ಲಿ ೧೧ ಮಂದಿ ಸಾವು ಮುಂಜಾಗ್ರತೆ ಪಾಲಿಸುವುದು ಅಗತ್ಯ ಮೈಸೂರು: ಬಿರು ಬೇಸಿಗೆ ಸಂದರ್ಭದಲ್ಲಿ ನದಿ, ಕೆರೆ ಹಾಗೂ ಕಾಲುವೆಗಳಲ್ಲಿ…

5 hours ago

ಸರಳ, ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ

ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮೈಸೂರು  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎಸ್.ಎಂ.ಕೃಷ್ಣ ಪ್ರಶಸ್ತಿ ಪುರಸ್ಕಾರ ಮಂಡ್ಯ ಜಿಲ್ಲೆಯ…

6 hours ago

ಬಿಸಿಲಿಗೆ ಪರ್ಯಾಯ ಈಜುಕೊಳಗಳು

ಚಿರಂಜೀವಿ ಸಿ.ಹುಲ್ಲಹಳ್ಳಿ ೩,೭೫೦ ರೂ., ಶೇ.೧೮ರಷ್ಟು ಜಿಎಸ್‌ಟಿ ಸೇರಿ ಒಟ್ಟು ೪,೭೫೦ ರೂ.ಶುಲ್ಕ ಪ್ರತಿ ಶಿಬಿರಾರ್ಥಿಗೆ ನಿಗದಿ ಮೈಸೂರು: ಮಲ್ಲಿಗೆ…

6 hours ago

ಗ್ರಾಪಂ ಅಧಿಕಾರಿಗಳ ನಿಗಾಕ್ಕೆ ಜಿಪಿಎಸ್ ಸಿಸ್ಟಂ

ಕೆ.ಬಿ.ರಮೇಶನಾಯಕ ಬಯೋಮೆಟ್ರಿಕ್ ಹಾಜರಾತಿ ಜತೆಗೆ ಜಿಪಿಎಸ್ ವ್ಯವಸ್ಥೆ ಜಾರಿಗೆ ಚಿಂತನೆ ಹಾಜರಾತಿ ಹಾಕಿ ಬೇಕಾಬಿಟ್ಟಿ ಓಡಾಡುವ ಸಿಬ್ಬಂದಿಗಳಿಗೆ ಬ್ರೇಕ್ ಮೈಸೂರು:…

6 hours ago