ಎಡಿಟೋರಿಯಲ್

ಮಾರುವೇಷದಲ್ಲಿ ಮರಳುತಿದೆ ‘ಪೆಗಸಸ್’ ಬೇಹುಗಾರಿಕೆ ಸೈಬರಾಸ್ತ್ರ

 

   ಪೆಗಸಸ್’ ಎಂಬ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ಮಾರುವೇಷ ಧರಿಸಿ ಮರಳಿ ಬರತೊಡಗಿದೆಮೈಕ್ರೋಸಾಫ್ಟ್ ಮತ್ತು ಡಿಜಿಟಲ್ ಹಕ್ಕು ವೇದಿಕೆಯಾದ ಸಿಟಿಜನ್ ಲ್ಯಾಬ್ ಪ್ರಕಾರ ಉತ್ತರ ಅಮೆರಿಕಾಮಧ್ಯ ಏಷ್ಯಾಯೂರೋಪ್ ಹಾಗೂ ಮಧ್ಯಪ್ರಾಚ್ಯದಲ್ಲಿ ಕಳೆದ ವಾರ ಇಸ್ರೇಲಿ ಬೇಹುಗಾರಿಕೆ ಸಾಧನದ ಬಲಿಪಶುಗಳನ್ನು ಗುರುತಿಸಿದೆ.

ಹೀನಸುಳಿ ಬೋಳಿಸಿದರೆ ಹೋದೀತೇ ಎಂಬ ಗಾದೆ ಮಾತಿದೆಪೆಗಸಸ್ ಎಬ್ಬಿಸಿದ್ದ ಬಿರುಗಾಳಿ ಅಡಗುವ ತನಕ ಕಾದಿತ್ತು ಮೋದಿ ಸರ್ಕಾರಪೆಗಸಸ್ ನಂತಹುದೇ ಮತ್ತೊಂದು ಬೇಹುಗಾರಿಕೆ ಸೈಬರಾಸ್ತ್ರದ ಖರೀದಿಗೆ ಇದೀಗ ಪುನಃ ಮುಂದಾಗಿದೆಬ್ರಿಟನ್ನಿನ ಪ್ರಸಿದ್ಧ ದಿನಪತ್ರಿಕೆ ‘ಫೈನಾನ್ಶಿಯಲ್ ಟೈಮ್ಸ್’ ಈ ಸುದ್ದಿಯನ್ನು ಬಯಲಿಗೆಳೆದಿದೆ’ಪೆಗಸಸ್‌ನ ಪರ್ಯಾಯ ಬೇಹುಗಾರಿಕೆ ಸಾಧನಗಳ ಪೂರೈಕೆಗಾಗಿ ಭಾರತ ಸರ್ಕಾರ ವಿದೇಶೀ ಸಂಸ್ಥೆಗಳಿಂದ ‘ಬಿಡ್’ ಕರೆದಿದೆಈ ಹೊಸ ಬೇಹುಗಾರಿಕೆ ಸಾಧನಗಳನ್ನು ‘ಪ್ರಿಡೇಟರ್’, ‘ಕಾಗ್ನೆ ಟ್’, ‘ಕ್ವಾಡ್ರೀಮ್’ ಎಂದು ಗುರುತಿಸಿದೆ.

ವಿದೇಶಗಳಿಗೆ ಬಂದದ್ದು ಭಾರತಕ್ಕೆ ಬರದೆ ಇದ್ದೀತೇಈ ಸಾಧನಗಳಿಗೆ ನಮ್ಮ ಸರ್ಕಾರ ಶಾಪಿಂಗ್ ಮಾಡುತ್ತಿದೆ ಎಂಬ ವರದಿಗಳು ಹದಿನೈದು ದಿನಗಳ ಹಿಂದೆಯೇ ಪ್ರಕಟವಾಗಿದ್ದವು.

ದೇಶದ ಎಲ್ಲ ಜನತಾಂತ್ರಿಕ ಸ್ತಂಭಗಳ ಮೇಲೆ ‘ಪೆಗಸಸ್’ ಎಂಬ ಕುಖ್ಯಾತ ಇಸ್ರೇಲಿ ಬೇಹುಗಾರಿಕೆ ಸೈಬರ್ ಅಸ್ತ್ರದ ಅನಾಗರಿಕ ದಾಳಿಯನ್ನು ‘ಮೋಶಾ’ ಸರ್ಕಾರ ವರ್ಷಗಳ ಹಿಂದಷ್ಟೇ ನಡೆಸಿತ್ತುಶಾಸಕಾಂಗಕಾರ್ಯಾಂಗನ್ಯಾಯಾಂಗದ ಜೊತೆಗೆ ನಾಲ್ಕನೆಯ ಅಂಗವೆಂದು ಕರೆಯಲಾಗುವ ಪತ್ರಿಕಾಂಗಗಳು ಈ ಅಕ್ರಮ ಅನೈತಿಕಜನತಂತ್ರ ವಿರೋಧಿ ದಾಳಿಗೆ ತುತ್ತಾಗಿದ್ದವುಸಾಮಾಜಿಕ ರಾಜಕೀಯ ಹೋರಾಟಗಾರರನ್ನೂ ಬಿಟ್ಟಿರಲಿಲ್ಲ.

ಅತ್ಯಾಧುನಿಕ ಬೇಹುಗಾರಿಕೆಯ ಈ ತಂತ್ರಾಂಶವನ್ನು ಭಯೋತ್ಪಾದಕರು ಮತ್ತು ಪಾತಕಿಗಳ ವಿರುದ್ಧ ಬಳಸಲಾಗುವ ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆಭಾರತವನ್ನು ಜನತಂತ್ರದ ಜನನಿ ಎಂದು ಸಾರುತ್ತಿರುವವರು ಪತ್ರಕರ್ತರುನ್ಯಾಯಮೂರ್ತಿಗಳುಮಾನವ ಹಕ್ಕುಗಳ ಹೋರಾಟಗಾರರನ್ನು ಭಯೋತ್ಪಾದಕರೆಂದು ಪರಿಗಣಿಸಿದ್ದಾರೆ.

ಪೆಗಸಸ್’ ಎಂಬ ಈ ಅಸ್ತ್ರದ ಖರೀದಿಗೆ ಅಧಿಕಾರ ನೀಡಿದವರು ಯಾರು ಎಂಬ ಅಂಶವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲಈ ಸೈಬರಾಸ್ತ್ರವನ್ನು ಖರೀದಿಬಳಕೆ ಕುರಿತು ಸುಪ್ರೀಂ ಕೋರ್ಟು ತನಿಖೆಗೆ ಆದೇಶ ನೀಡಿತ್ತುತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲಆದರೂ ತನಿಖೆ ಪೂರ್ಣಗೊಂಡಿದ್ದುವರದಿ ಈಗಲೂ ಮೊಹರು ಮಾಡಿದ ಲಕೋಟೆಯಲ್ಲಿ ‘ಬಂದಿ’ಯಾಗಿದೆ.

ಪ್ರತಿಪಕ್ಷಗಳ ನಾಯಕರುನ್ಯಾಯಮೂರ್ತಿಗಳುಪತ್ರಕರ್ತರುಮಾನವ ಹಕ್ಕುಗಳ ಹೋರಾಟಗಾರರುರಾಜಕೀಯ ಎದುರಾಳಿಗಳನ್ನು ಜನತಂತ್ರ ವಿರೋಧಿ ದಾರಿಗಳಿಂದ ಬಗ್ಗು ಬಡಿಯುವ ಚಾಳಿಯನ್ನು ಮೋಶಾ ಸರ್ಕಾರ ಸುಲಭಕ್ಕೆ ಕೈಬಿಡುವುದಿಲ್ಲ ಎಂಬುದಕ್ಕೆ ಇದೊಂದು ಜೀವಂತ ನಿದರ್ಶನ.

ಭೀಮಾ ಕೋರೆಗಾಂವ್ ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ‘ನೆಟ್ಟಿದ್ದ’ ನೆಂದು ‘ವಾಷಿಂಗ್ಟನ್ ಪೋಸ್ಟ್’ 2021ರಲ್ಲಿ ವರದಿ ಮಾಡಿತ್ತುಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತುಇದೇ ವಿಧಿವಿಜ್ಞಾನ ಸಂಸ್ಥೆಯು ಮತ್ತೊಬ್ಬ ಆಪಾದಿತ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್‌ನ್ನು ವಿಶ್ಲೇಷಿಸಿತ್ತುಹ್ಯಾಕಿಂಗ್ ಮಾಡಿ ಅವರ ಕಂಪ್ಯೂಟರಿಗೆ ಸುಳ್ಳು ಸಾಕ್ಷ್ಯಗಳನ್ನು ಹೊಗಿಸಿದ ಕುರಿತು ಆರ್ಸೆನಾಲ್ ಕನ್ಸಲ್ಟಿಂಗ್ ಸಂಸ್ಥೆಗೆ ಇನ್ನಷ್ಟು ಆಳವಾದ ಪುರಾವೆ ದೊರೆತಿತ್ತು. 2016ರ ಫೆಬ್ರವರಿಯಿಂದ 2017ರ ನವೆಂಬರ್ ತನಕ 20 ತಿಂಗಳ ಕಾಲ ಗಾಡ್ಲಿಂಗ್ ಅವರ ಕಂಪ್ಯೂಟರನ್ನು ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಡಲು ಗುರಿಯಾಗಿಸಲಾಗಿತ್ತುರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ೩೦ ದಸ್ತಾವೇಜುಗಳನ್ನು ನೆಟ್ಟಿದ್ದ ಅದೇ ಹ್ಯಾಕರ್ಗಾಡ್ಲಿಂಗ್ ಅವರ ಕಂಪ್ಯೂಟರಿನಲ್ಲಿ 14 ಸುಳ್ಳು ಸಾಕ್ಷ್ಯದ ದಸ್ತಾವೇಜುಗಳನ್ನು ನೆಟ್ಟಿದ್ದಾನೆ ಎಂದು ಆರ್ಸನಾಲ್ ಹೇಳಿತ್ತು.

ಸುರೇಂದ್ರ ಗಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಅವರಂತೆ ಸ್ಟ್ಯಾನ್ ಸ್ವಾಮಿ ಮತ್ತು ಎಲ್ಗರ್ ಪರಿಷತ್ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದೂ ಆರ್ಸೆನಾಲ್– ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

ನಿರ್ದಿಷ್ಟ ಮೊಬೈಲ್ ಪೋನ್ ಅಥವಾ ಕಂಪ್ಯೂಟರಿಗೆ ಸುಳಿವೇ ಇಲ್ಲದಂತೆ ನುಗ್ಗಿಸಲಾಗುವ ಈ ಅಸ್ತ್ರ ಸಂಬಂಧಪಟ್ಟ ಫೋನ್ ಅಥವಾ ಕಂಪ್ಯೂಟರನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆಅರ್ಥಾತ್ ಆ ಪೋನ್ಕಂಪ್ಯೂಟರನ್ನು ಬೇಹುಗಾರಿಕೆ ನಡೆಸುವವರ ನಿಯಂತ್ರಣಕ್ಕೆ ಒಪ್ಪಿಸಿಕೊಡುತ್ತದೆಆ ಫೋನಿನ ಮಾಲೀಕ ನಿರ್ದಿಷ್ಟ ಫೋನಿನಲ್ಲಿ ಮಾಡಬಹುದಾದ ಎಲ್ಲ ಕ್ರಿಯೆಗಳನ್ನು ಬೇಹುಗಾರಿಕೆ ನಡೆಸುವವರೂ ಮಾಡಬಹುದುಅಷ್ಟೇ ಅಲ್ಲಶಿಕಾರಿಯಾದ ಫೋನಿನ ಆಸುಪಾಸು ನಡೆಯುವ ಮಾತುಕತೆಗಳುಚಟುವಟಿಕೆಗಳ ಧ್ವನಿಮುದ್ರಣ ಮಾಡಿಕೊಳ್ಳಬಹುದುಫೋನಿನ ಕ್ಯಾಮೆರಾ ತಂತಾನೇ ಚಾಲನೆಯಾಗಿ ಫೋನಿನ ಆಸುಪಾಸು ನಡೆಯುವ ಎಲ್ಲ ದೃಶ್ಯಗಳನ್ನೂ ಚಿತ್ರೀಕರಿಸಿಕೊಂಡು ಬೇಹುಗಾರರಿಗೆ ರವಾನಿಸುತ್ತದೆಬೇಹುಗಾರಿಕೆಗೆ ಶಿಕಾರಿಯಾದ ಫೋನನ್ನು ಸೈಬರಾಸ್ತ್ರ ಪ್ರವೇಶ ಮಾಡುವುದರಿಂದ ಹಿಡಿದುಅದು ನಡೆಸುವ ಈ ಯಾವುದೇ ಕ್ರಿಯೆಯು ಫೋನಿನ ಒಡತಿಒಡೆಯನ ಅರಿವಿಗೆ ಬರುವುದೇ ಇಲ್ಲನಾಲ್ಕು ಗೋಡೆಯ ನಡುವೆ ನಡೆಯುವ ತಮ್ಮ ಎಲ್ಲ ಚಟುವಟಿಕೆಗಳನ್ನು ಬಟಾಬಯಲಿನಲ್ಲಿ ನಡೆಸಿದಂತೆಊಹೆಗೂ ನಿಲುಕದ ಭಯಾನಕ ಸ್ಥಿತಿಹೀಗಾಗಿ ಈ ಬೇಹುಗಾರಿಕೆ ಇಲ್ಲಿಯ ತನಕ ನಾವು ಕಂಡು ಕೇಳಿರುವ ಕೇವಲ ಫೋನುಗಳ ಕದ್ದಾಲಿಕೆಯ ಸಾಧಾರಣ ಬೇಹುಗಾರಿಕೆ ಅಲ್ಲ.

ಭಯೋತ್ಪಾದನೆ ಮತ್ತಿತರೆ ಘೋರ ಪಾತಕಗಳನ್ನು ಮುಂಚಿತವಾಗಿಯೇ ತಿಳಿದು ತಡೆಯಲು ಮತ್ತು ಅಪರಾಧಗಳ ತನಿಖೆಯ ಕಾನೂನಾತ್ಮಕ ಬಳಕೆಗೆ ಈ ತಂತ್ರಾಂಶ ಮೀಸಲುಕೇವಲ ಸರ್ಕಾರಗಳಿಗೆ ಮಾತ್ರವೇ ಈ ಸೈಬರ್ ಅಸ್ತ್ರವನ್ನು ಮಾರಾಟ ಮಾಡಲಾಗುವುದು ಎಂದು ಇಸ್ರೇಲ್ ಸರ್ಕಾರ ಮತ್ತು ಪೆಗಸಸ್ ತಯಾರಿಸುವ ಎನ್.ಎಸ್.ಸ್ಪಷ್ಟಪಡಿಸಿದ್ದವುಆದರೆ ಈ ಅಸ್ತ್ರವನ್ನು ಭಾರತವೂ ಸೇರಿದ 50 ದೇಶಗಳ ಪತ್ರಕರ್ತರುಹೋರಾಟಗಾರರುಪ್ರತಿಪಕ್ಷಗಳ ರಾಜಕಾರಣಿಗಳು ಹಾಗೂ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಲು ದುರುಪಯೋಗ ಮಾಡಲಾಗಿತ್ತುಜಗತ್ತಿನ ಬಹುತೇಕ ದೇಶಗಳು ‘ಪೆಗಸಸ್’ನ್ನು ಕಪ್ಪು ಪಟ್ಟಿಗೆ ಸೇರಿಸಿವೆ.

ಬೇಹುಗಾರಿಕೆ ಎಂಬುದು ರಾಜ್ಯಾಡಳಿತದ ಅವಿಭಾಜ್ಯ ಅಂಗವೇ ಆಗಿ ಹೋಗಿದೆಈ ಕ್ರಿಯೆಗೆ ಧರ್ಮ– ಕರ್ಮದ ನೈತಿಕ ತಳಹದಿ ಇರಬೇಕುನೀತಿ ಸಂಹಿತೆ ಹೊಂದಿರಬೇಕು.ಎಂದು ಮೋಶಾ ಮೆಚ್ಚುವ ಕೌಟಿಲ್ಯನ ಅರ್ಥ ಶಾಸ್ತ್ರವೇ ವಿಧಿಸಿದೆ.

ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲುಸಾರ್ವಜನಿಕ ಒಳಿತು ಸಾಧಿಸಲು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಗೌಪ್ಯ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಽಕಾರ ಸರ್ಕಾರಗಳಿಗೆ ಇದೆಭಾರತೀಯ ಟೆಲಿಗ್ರಾಫ್ ಕಾಯಿದೆಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆಆದರೆ ಹಾಗೆ ಮಾಡಲು ಕಾನೂನು ವಿಧಿ ವಿಧಾನಗಳಿವೆಬೇಕಾಬಿಟ್ಟಿ ನಡೆಸಲಾಗುವುದಿಲ್ಲ..

 

ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ

andolanait

Recent Posts

ಬಸ್-ಲಾರಿ ಡಿಕ್ಕಿ: ಚಾಲಕ ಸಾವು, ಹಲವು ಪ್ರಯಾಣಿಕರಿಗೆ ಗಾಯ

ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…

43 mins ago

ಓದುಗರ ಪತ್ರ: ಕುಂಭೇಶ್ವರ ಕಾಲೋನಿ ರೈತರ ಜಮೀನು ವಿವಾದ ಪರಿಹರಿಸಿ

ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ…

51 mins ago

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಅರ್ಧ ಲೀಟರ್ ನೀರಿನ ಬಾಟಲಿ ಕೊರತೆ

ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್…

54 mins ago

ಓದುಗರ ಪತ್ರ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಯಾವಾಗ?

ಮೈಸೂರು ಮಹಾ ನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ ಸರ್ಕಾರ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ.…

57 mins ago

ಓದುಗರ ಪತ್ರ: ಅಡ್ಡಾದಿಡ್ಡಿ ವಾಹನ ಚಾಲನೆಗೆ ಕಡಿವಾಣ ಹಾಕಿ

ಮೈಸೂರಿನ ಶಿವರಾಮ್ ಪೇಟೆ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರ ಹಾಗೂ ರಾಜ್ ಕಮಲ್ ಥಿಯೇಟರ್ ನಡುವೆ ಬರುವ ವೃತ್ತದಲ್ಲಿ ದಿನನಿತ್ಯ…

60 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ವಿಶಾಲ್ ಸಿಂಗ್ ಎಂಬ ಬಡರೋಗಿಗಳ ಅನ್ನದಾತ

ಪಂಜುಗಂಗೊಳ್ಳಿ  ಊಟವಿಲ್ಲದೆ ಪರದಾಡಿದ ಘಟನೆಯೇ ನಿರಂತರ ದಾಸೋಹಕ್ಕೆ ಪ್ರೇರಣೆ ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ…

1 hour ago