ನಾ ದಿವಾಕರ
ಇನ್ನು ಎರಡು ದಶಕಗಳಲ್ಲಿ ವಿಕಸಿತ ಆಗುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿರುವ ವರ್ತಮಾನದ ಭಾರತ, ಈ ಹಾವಿಗೆ ಅಗತ್ಯವಾದ ಬೌದ್ಧಿಕ ಅಡಿಪಾಯವನ್ನು, ಭೌತಿಕ ಪರಿಕರಗಳನ್ನು ಸಿದ್ಧಪಡಿಸುತ್ತಿದೆಯೇ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಇತ್ತೀಚಿನ ಕಲವು ಪ್ರಸಂಗಗಳು, ಘಟನೆಗಳು ನಮ್ಮೊಳಗಿನ ಸೂಕ್ಷ್ಮತೆಯನ್ನಷ್ಟೇ ಅಲ್ಲದೆ ಮನುಜ ಪ್ರಜ್ಞೆಯನ್ನೇ ಬಡಿದೆಚ್ಚಿಸಬೇಕಿದೆ. ಹುಬ್ಬಳ್ಳಿಯ ಮೂರುಸಾವಿರ ಮತದ ಬಳಿ ಇರುವ ಗುರುಸಿದ್ದೇಶ್ವರ ನಗರದ ಶಾಲೆಯೊಂದರಲ್ಲಿ, 15 ವರ್ಷದ ಬಾಲಕನೊಬ್ಬ ತನ್ನ ಸಹಪಾಠಿಯೊಡನೆ ಜಗಳ ಆಡಿಕೊಂಡು, 16 ವರ್ಷದ ಆ ಗೆಳೆಯನಿಗೆ ಚೂರಿಯಿಂದ ಇಂದು ಕೊಲೆ ಮಾಡಿರುವುದು ವರದಿಯಾಗಿದೆ. ಹರೆಯದ ಬಾಲಕನೊಬ್ಬನಿಗೆ ಈ ರೀತಿಯ
ಹಂತಕ ಮನಸ್ಸು ಸೃಷ್ಟಿಯಾಗುವುದಾದರೂ ಹೇಗೆ ಎಂದು ಯೋಚಿಸಬೇಕಿದೆ.
ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ ನಮ್ಮ ಸಮಾಜವೇ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ವಿಶಾಲ ಸಮಾಜದ ನಡುವೆ ನಿಂತು ನೋಡುವಾಗ ನಮಗೆ ಬೇರೆಯೇ ಚಿತ್ರಣ ಕಾಣಬೇಕಲ್ಲವೇ ? ಅಷ್ಟು ಎಳೆ ವಯಸ್ಸಿನ ಮಕ್ಕಳಲ್ಲಿ ಇಂತಹ ಹಿಂಸಾತ್ಮಕ ಪ್ರವೃತ್ತಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಯೋಚಿಸಿದಾಗ ಸುತ್ತಲಿನ ಸಮಾಜದಲ್ಲಿ ಸಂಭವಿಸುತ್ತಿರುವ ಇನ್ನಿತರ ಘಟನೆಗಳತ್ತಲೂ ನಮ್ಮ ಗಮನ ಹರಿಯುತ್ತದೆ. ಇದನ್ನು ವಿಸ್ತರಿಸಿ ನೋಡಿದಾಗ ಸುಹಾಸ್ ಶೆಟ್ಟಿ, ಪ್ರವೀಣ್ ನೆಟ್ಟಾರು, ಫಾಲ್ ಅವರ ಪ್ರಕರಣಗಳವರೆಗೂ ನದ್ದು ಆಲೋಚನೆ ಹರಿಯಬೇಕಿದೆ.
ಮತ್ತೊಂದು ಭಯಾನಕ ಘಟನೆಯಲ್ಲಿ ಬೆಂಗಳೂರು ಸಮೀಪದ ಬಿಡದಿ ಬಳಿ, 14 ವರ್ಷದ ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯನ್ನು ಹತ್ಯೆ ಮಾಡಿರುವುದು ವರದಿಯಾಗಿದೆ. ಹಕ್ಕಿ ಒಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಬಾಲಕಿಯ ಮೇಲೆ ನಡೆದ ಅಮಾನುಷ ದೌರ್ಜನ್ಯ ಮತ್ತೊಮ್ಮೆ ನಮ್ಮ ನಡುವಿನ ಸಾಮಾಜಿಕ ವ್ಯಾಧಿ, ಮಹಿಳಾ ದೌರ್ಜನ್ಯವನ್ನು ಹೊರಗೆಡಹಿಂದೆ. ಆದರೆ ಪೊಲೀಸರ ತನಿಖೆಯಲ್ಲಿ ಇದು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಈ ನಡುವ ಮಂಡ್ಯದ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ತನ್ನ ಮಗಳ ಹತ್ಯೆಗೆ ಕಾರಣನಾದ ವ್ಯಕ್ತಿಯ ವಯಸ್ಸಾದ ತಂದೆಯನ್ನು ಹತ್ಯೆ ಮಾಡಿರುವುದು ವರದಿಯಾಗಿದೆ. ಇತ್ತೀಚೆಗೆ ಕೆ. ಆರ್. ಪೇಟೆ ಬಳಿಯ ಕತ್ತರಘಟ್ಟ ಗ್ರಾಮದಲ್ಲಿ ಜಯಕುಮಾರ್ ಎಂಬ ದಲಿತ ಯುವಕನೊಬ್ಬನನ್ನು ಮೇಲ್ಲಾತಿಗೆ ಸೇರಿದ ವ್ಯಕ್ತಿ ಹುಲ್ಲಿನ ಬದಣೆಯಲ್ಲಿ ಸಜೀವ ದಹನ ಮಾಡಿರುವ ಘಟನೆ ವರದಿಯಾಗಿದೆ.
ಹಿಂಸೆ- ಕ್ರೌರ್ಯದ ಬೌದ್ಧಿಕ ಆಯಾಮ : ಹುಬ್ಬಳ್ಳಿ ಮತ್ತು ಕೆ.ಆರ್. ಪೇಟೆಯ ಘಟನೆಗಳನ್ನೇ ಕೇಂದ್ರೀಕರಿಸಿ ಹೇಳುವುದಾದರೆ, ಯುವ ತಲೆಮಾರಿನಲ್ಲಾಗಲೀ, ವಯಸ್ಕರಲ್ಲಾಗಲೀ ಈ ಹಂತಕ ಮನಸ್ಥಿತಿಗೆ ಕಾರಣಗಳೇನು ಎಂಬ ಗಂಭೀರ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಮತ್ತೊಂದಡೆ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಭಾರತ ಪಾಕ್ ಸಂಘರ್ಷಕ್ಕೆ ಸಂಬಂಧಿಸಿದಂತೆ, ‘ಭಯೋತ್ಪಾದ ಕರಿಗೆ ಸೂಕ್ತ ಉತ್ತರ ನೀಡಲು ಅವರ ಸ್ವಂತ ಸೋದರಿಯನ್ನೇ ಕಳಿಸಿದ್ದೇವೆ ಎಂದು ಹೇಳುವ ಮೂಲಕ, ಇಡೀ ದೇಶದ ಪ್ರಶಂಸೆಗೊಳಗಾದ ಕರ್ನಲ್ ಸೋಫಿಯಾ ಖುರೇಷಿಯವರನ್ನು ಕೂಡ ಧರ್ಮದ ಚೌಕಟ್ಟಿನೊಳಗಿಟ್ಟು ನೋಡಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಪ್ರೇರಣೆಯಿಂದ ವಿಚಾರಣೆ ನಡೆಸುತ್ತಿದ್ದು, ಎಸ್‌ಐಟಿ ರಚಿಸಲು ಕೋರಿದೆ. ಸಮಾಜದಲ್ಲಿ ಸಮುದಾಯಗಳ ನಡುವೆ ಆಸ್ಮಿತೆಯ ಗೋಡೆಗಳನ್ನು ನಿರ್ಮಿಸುವುದರಲ್ಲಿ ಇಂತಹ ದ್ವೇಷ-ಸೇಡು ಮತ್ತು ಅಸೂಯೆಯ ದುರ್ಭಾವನೆಗಳು ಅಡಿಗಲ್ಲುಗಳಾಗುತ್ತವೆ.
ಜೋಡಿಸಬೇಕಾದ ಸಮಾನ ಎಳೆಗಳು : ಈ ಘಟನೆಗಳಲ್ಲಿ ಗುರುತಿಸಬಹುದಾದ ಸಮಾನ ಎಳೆಯನ್ನು ಜೋಡಿಸಿದಾಗ, ಸಮಾಜ ತನ್ನ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಸುಸ್ಪಷ್ಟವಾಗಿ ಕಾಣುತ್ತದೆ.
ಮಾನವೀಯ ಸ್ಪರ್ಶ ಮತ್ತು ಸ್ಪಂದನೆಯ ಕಂತುಗಳನ್ನು ಕಡಿದುಕೊಳ್ಳುತ್ತಿದೆ. ಎನ್ನುವುದು ಸಾಮಾನ್ವಿಕರಿಸಬಹುದಾದ ಕಾರಣಗಳಾಗುತ್ತವೆ. ಇದನ್ನೂ ಮೀರಿ ನೋಡಿದಾಗ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನೈತಿಕ ಜವಾಬ್ದಾರಿ ಇರುವ ಅಧಿಕಾರ ರಾಜಕಾರಣದ ಪ್ರತಿನಿಧಿಗಳು ಮತ್ತು ನಮ್ಮ ವಿದ್ಯುನ್ಮಾನ ಸಾಮಾಜಿಕ ಮಾಧ್ಯಮಗಳು ವ್ಯಕ್ತಪಡಿಸುವ ಅಭಿಪ್ರಾಯಗಳೇ ಸಮಾಜದಲ್ಲಿ ದ್ವೇಷಾಸೂಯೆಗಳನ್ನು ಬಿತ್ತುವುದನ್ನು ಗುರುತಿಸಬಹುದು.
ಹರೆಯದ ಯುವ ಸಮೂಹವನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ, ಕಾರ್ಯಪಡೆಗಳನ್ನಾಗಿ ರೂಪಿಸಿಕೊಳ್ಳುದ ಅಧಿಕಾರ ರಾಜಕಾರಣದ ಕೇಂದ್ರಗಳು ಒಂದೆಡೆ, ಧರ್ಮ ರಕ್ಷಣೆಯ ನೆಪದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುವ ತುಡುಗುಬಿಡೆಗಳನ್ನು (Fringe elements) ಸೃಷ್ಟಿಸುವ ಸಾಂಸ್ಥಿಕ ಮತೀಯ ಮತಾಂಧ ಶಕ್ತಿಗಳು ಒಂದೆಡೆ, ಯುವ ಸಮೂಹದ ಕೈಗೆ ಶ್ರಿಶೂಲ, ತಲವಾರು, ಎಡ್ಗವನ್ನು ನೀಡುವ ಪರಂಪರೆಯನ್ನು ವಿದ್ಯಾವಂತ ಶಿಲಾಯ ಇನ್ನಾದರೂ ಗಟ್ಟಿಯಾಗಿ ಪ್ರತಿಸಬೇತಿಗೆ ದಕ್ಕೆಯವರೆಗೂ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಏಸ್ತರಿಸುವ ಹಿಂಸಾತ್ಮಕ ಸೇಡಿನ ಪ್ರಕ್ರಿಯೆಗೂ ನೇರವಾಗಿ ಸಂಬಂಧ ಇರುವುದನ್ನು ಹುಬ್ಬಳ್ಳಿ, ಬಿಡದಿ, ಕೆ.ಆರ್. ಪೇಟೆಯ ಘಟನೆಗಳು ನಿರೂಪಿಸಿವೆ.
ಸಾಮಾಜಿಕ ಅಸೂಕ್ಷ್ಮತೆಯ ನಡುವೆ : ಅಪ್ರಾಪ್ತ ಬಾಲಕಿಯರ ಮೇಲೆ ಹೆಚ್ಚಾಗುತ್ತಿರುವ ಅತ್ಯಾಚಾರಗಳು ಮತ್ತು ದ್ವೇಷ ರಾಜಕಾರಣದ ಸರಕುಗಳಾಗಿ ಪರಸ್ಪರ ಜೀವಹಂತಕರಾಗುತ್ತಿರುವ ಒಂದು ಯುವ ಸಮೂಹ ನಮ್ಮ ನಡುವೆ ಎದ್ದುಕಾಣುವಂತಿದ್ದರೂ, ಈ ಸಾಮಾಜಿಕ ವ್ಯಾಧಿಯನ್ನು ಸರಿಪಡಿಸುವ ಯಾವುದೇ ಪ್ರಯತ್ನಗಳು ನಡೆಯದಿರುವುದು, ಭಾರತದ ರಾಜಕೀಯ ವೈಫಲ್ಯದ ಎನ್ನಬಹುದು. ಅಪರಾಧಗಳನ್ನು ಜಾತಿ-ಮತ ಸಮುದಾಯದ ಅಸ್ಥಿತೆಗಳಿಂದಾಚೆಗೆ ನೋಡುವ ಒಂದು ಏಶಾಲ ಮನೋಭಾವದ ಸಮಾಜವನ್ನೇ ನಾವು ಕಳೆದುಕೊಂಡಂತೆ ಕಾಣುತ್ತಿದೆ. ಈ ಸಮಾಜಕ್ಕೆ ಮಾನವೀಯ ಪುನಶ್ಚೇತನ ನೀಡಬೇಕಾದ ಆಳುವ ವರ್ಗಗಳು ತಮ್ಮ ಲಿಂಗ ಸೂಕ್ಷ್ಮತೆ ಮತ್ತು ಮಾನವೀಯ ಸಂವೇದನೆಯನ್ನು, ಅಧಿಕಾರ ಪೀಠಗಳಲ್ಲಿ ಒತ್ತೆ ಇಟ್ಟಿರುವುದರಿಂದ, ಈ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬ ಜಟಿಲ ಪ್ರಶ್ನೆ ಉದ್ಭವಿಸುತ್ತದೆ.
ನಿರಂತರ ಜನಪರ ಹೋರಾಟಗಳಲ್ಲಿ ತೊಡಗಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪ್ರೀತಿಸುವ ಸಂಘಟನೆಗಳು ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳೂ ಕೂಡ ಎಲ್ಲೋ ಒಂದು ಕಡೆ ತಾರ್ಕಿಕ ಅಂತ್ಯ ತಲುಪಲು ವಿಫಲವಾಗುತ್ತಿವೆ. ಇದಕ್ಕೆ ಅತ ಆಧಾರಿತ ಅಥವಾ ಅಸ್ತಿತ್ವವಾದಿ ಸಾಂಕ ನೆಲೆಗಳೂ ಕಾರಣ ಎಂದರೆ ತಪ್ಪಾಗಲಾರದು. ಹುಬ್ಬಳ್ಳಿ ಮತ್ತು ಕೆ.ಆರ್. ಪೇಟೆ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಹಾಗೆಯೇ ಸೌಜನ್ಯ ಮತ್ತು ನೇಹಾ ಹಿರೇಮಶ್ ಅಥವಾ ಅ೦ಜಲಿಯನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಮಾಜ ಸಿದ್ಧವಾಗಿಲ್ಲ.
ಏಕೆಂದರೆ ಮೌಖಿಕವಾಗಿ, ಭೌತಿಕವಾಗಿ ಹಾಗೂ ಬೌದ್ಧಿಕವಾಗಿಯೂ ಕೂಡ ಈ ಯುವ ಸಮೂಹದ ಮಿದುಳಿನಲ್ಲಿ? ಹಿಂದುತ್ತು ಕ್ರೌರ್ಯ ಸ್ವೀಕಾರಾರ್ಹ’ ಎಂಬ ಭಾವನೆ ಆಳವಾಗಿ ಬೇರೂರಿ ಬಿಟ್ಟಿರುತ್ತದೆ. ಮಿಲೆನಿಯಂ ಸಮಾಜಕ್ಕೆ ನಾವು ನೀಡಬೇಕಿರುವದು ಮಾನವತೆಯ ರಕ್ಷಾ ಕವಚವನ್ನು, ದೌರ್ಜನ್ಯ-ತಾರತಮ್ಯ ಮತ್ತು ಹಿಂಸೆಯನ್ನು ಹೋಗಲಾಡಿಸಲು ಬೇಕಾದ ಬೌದ್ಧಿಕ ಶಕ್ತಿಯನ್ನು, ಆರೋಗ್ಯಕರ ಸಮಾಜ ಕಟ್ಟಲು ಬೇಕಾದ ಭೌತಿಕ, ಬೌದ್ಧಿಕ ಪರಿಕರಗಳನ್ನು ಹಾಗೂ ಈ ಹಾದಿಯಲ್ಲಿ ಸಾಗಲು ಅವಶ್ಯವಾದ ಸಮಕಾಲೀನ ಭಾರತದ, ಚರಿತ್ರೆಯ ದಾರ್ಶನಿಕರ ಚಿಂತನೆಗಳನ್ನು, ಆದರೆ ನಾವು ಏನು ಮಾಡುತ್ತಿದ್ದೇವೆ ಇದು ನಮ್ಮನ್ನು ಗಹನವಾಗಿ ಕಾಡಬೇಕಾದ ಪ್ರಶ್ನೆಯಾಗಿದೆ.
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…
ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…
ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…
ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…
ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…