ಕನ್ನಡ ಭಾಷೆಗೆ ಇದೇ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ಸಂದಿದೆ. 2025 ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಮ್ಮ ಕನ್ನಡದ ಲೇಖಕಿ ಹಾಸನದ ಬಾನು ಮುಸ್ತಾಕ್ ಭಾಜನರಾಗಿದ್ದು, ಕನ್ನಡ ಭಾಷೆಗೆ ಮತ್ತು ಕರ್ನಾಟಕ ಗೌರವ ತಂದುಕೊಟ್ಟಿದ್ದಾರೆ, ಬಾನು ಮುಷ್ತಕ್ ಅವರ ಸಣ್ಣ ಕತೆಗಳ ಅನುವಾದ ಸಂಕಲನ ‘ಹಾರ್ಟ್ ಲ್ಯಾಪ್’ಗೆ ಪ್ರಶಸ್ತಿ ಸ೦ದಿದೆ.
ಬಾನು ಮುಷ್ತಾಕ್ ಅವರು ತಮ್ಮ ಬದುಕಿನಲ್ಲಿ, ಅನುಭವಿಸಿರುವ ನೋವುಗಳನ್ನು ಅನಾವರಣಗೊಳಿಸುವ ಈ ‘ಸಣ್ಣ ಕತೆಗಳ ಸಂಕಲನ’ ಇಂದು ಅಂತಾರಾಷ್ಟ್ರೀಯ ಮಟ್ಟದ ಬೂಕ ಪ್ರಶಸ್ತಿಗೆ ಭಾಜನವಾಗಿದೆ.
80 ರ ದಶಕದಲ್ಲಿ, ಪತ್ರಿಕೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನೇ ತಂದ ಪಿ.ಲಂಕೇಶ್ ಅವರ ‘ಲಂಕೇಶ್ ಪತ್ರಿಕೆಯಲ್ಲಿ, ದಿಟ್ಟ ವರದಿಗಾರ್ತಿಯಾಗಿ, ಹಾಗೂ ಲೇಖಕಿಯಾಗಿ ಬಾನು ಮುಷ್ತಕ್ ಪರಿಚಿತಗೊಂಡರು. 80ರ ದಶಕದಲ್ಲೇ ಅವರ ಸಣ್ಣ ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಸಣ್ಣ ಕತಗಳಿಗೂ, ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಲಭಿಸುತ್ತದೆ ಎಂಬುದನ್ನು ಬಾನು ಮುಷ್ತಾಕ್ ಸಾದರಪಡಿಸಿದ್ದಾರೆ. ಇವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು,
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…