ಎಸ್.ಎಸ್.ಭಟ್
ನಂಜನಗೂಡು ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಫಲಕ
ನಂಜನಗೂಡು: ೧೯೭೦- ೮೦ರ ದಶಕಗಳಲ್ಲಿ ಮಿನಿ ವಿಧಾನಸೌಧವಿದ್ದ ಜಾಗ ಇಂದು ಪ್ರಮೋದಾದೇವ ಒಡೆಯರ್ ಅವರ ಆಸ್ತಿ! ಸರ್ಕಾರಿ ಜಾಗ ಎಂದು ಸರ್ಕಾರವೇ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಆಡಳಿತ ಸೌಧವಿದ್ದ ಜಾಗಕ್ಕೆ ಮೂರು ದಿನಗಳ ಹಿಂದೆ ಅಳವಡಿಸಿರುವ ಒಂದು ಫಲಕ ಈಗ ನಂಜನಗೂಡು ನಾಗರಿಕರು ಹುಬ್ಬೇರಿಸುವಂತೆ ಮಾಡಿದೆ.
ನೂತನ ಫಲಕ ಅಳವಡಿಸಿರುವ ಈ ಜಾಗದಲ್ಲಿ ಹಿಂದೆ ಮಿನಿ ವಿಧಾನಸೌಧ ನಿರ್ಮಿಸಲಾಗಿತ್ತು. ೧೯೭೦ ರ ದಶಕದಲ್ಲಿ ತಾಲ್ಲೂಕನ್ನು ಪ್ರತಿನಿಧಿಸಿದ್ದ ಕೆ.ಬಿ. ಶಿವಯ್ಯ ಹಾಗೂ ವಿಧಾನಸಭಾ ಸ್ಪೀಕರ್ ಆಗಿದ್ದ ಪಿ.ವೆಂಕಟರಮಣ ಅವರ ಶ್ರಮದಿಂದಾಗಿ ಭವ್ಯವಾದ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಆರಂಭವಾಯಿತು.
ನಂತರ ೧೯೮೫ರಲ್ಲಿ ಈ ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿ ನಂಜನಗೂಡಿನ ಉಪ ವಿಭಾಗಾಧಿಕಾರಿಗಳ ಕಚೇರಿಯೂ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಈ ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ನಂತರ ೧೯೯೫ರಲ್ಲೇ ಆ ಕಟ್ಟಡ ಶಿಥಿಲವಾಗಿ ಕೆಳ ಅಂತಸ್ತಿಗೆ ಬಂದು ನಂತರ ೧೯೯೭ರಲ್ಲಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯವೇ ನಂಜನಗೂಡಿನಿಂದ ಸ್ಥಳಾಂತರಗೊಂಡು ತಾಲ್ಲೂಕು ಕಚೇರಿಯನ್ನು ಹಳೇ ಆಸ್ಪತ್ರೆ ಕಟ್ಟಡಕ್ಕೂ, ಉಳಿದ ಕಚೇರಿಗಳನ್ನು ಬೇರೆ ಬೇರೆ ಕಡೆಗೂ ಸ್ಥಳಾಂತರ ಮಾಡಲಾಯಿತು.
ಇಂದಿಗೂ ಮಿನಿ ವಿಧಾನಸೌಧದ ಅವಶೇಷವಾಗಿ ಹಿಂದಿನ ಕ್ಯಾಂಟೀನ್ ಕಟ್ಟಡ ಉಳಿದುಕೊಂಡಿದೆ. ಇದೀಗ ಈ ಜಾಗದಲ್ಲಿ ‘ಈ ಜಾಗ ಸರ್ವೆ ನಂ.೯ರ ೧೮ ಎಕರೆ ೨೩ ಗುಂಟೆ ಪ್ರದೇಶ ಪ್ರಮೋದಾದೇವಿ ಒಡೆಯರ ಸ್ವತ್ತಾಗಿದ್ದು ಅತಿಕ್ರಮ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಫಲಕವನ್ನು ಹಳೇ ಮಿನಿ ವಿಧಾನಸೌಧದ ಕಾಂಪೌಂಡ್ ಸೇರಿದಂತೆ ಚಾಮರಾಜ ಜೋಡಿ ರಸ್ತೆಗೆ ಕಾಣುವಂತೆ ಅಳವಡಿಸಲಾಗಿದೆ.
ಇದು ರಾಜವಂಶಸ್ಥರ ಆಸ್ತಿಯಾಗಿದ್ದಲ್ಲಿ ಇಲ್ಲಿ ಸರ್ಕಾರದ ಮಿನಿ ವಿಧಾನಸೌಧ ಅಂದು ಹೇಗೆ ನಿರ್ಮಾಣವಾಯಿತು? ಮಿನಿ ವಿಧಾನಸೌಧ ಕಟ್ಟುವಾಗ ರಾಜವಂಶಸ್ಥರು ಏಕೆ ಮೌನವಾಗಿದ್ದರು? ರಾಜವಂಶಸ್ಥರ ಆಸ್ತಿಯಲ್ಲಿ ಸರ್ಕಾರ ಹೇಗೆ ಸರ್ಕಾರಿ ಕಟ್ಟಡವನ್ನು ನಿರ್ಮಿಸಿತು ಎಂಬ ಹತ್ತು ಹಲವಾರು ಪ್ರಶ್ನೆಗಳು ಈಗ ನಂಜನಗೂಡು ಜನತೆಯನ್ನು ಕಾಡತೊಡಗಿದ್ದು, ಇದಕ್ಕೆ ಉತ್ತರ ನೀಡುವವರಾರು ಎಂಬುದನ್ನು ಕಾದು ನೋಡಬೇಕಿದೆ.
” ಫಲಕ ಅಳವಡಿಸಿದ ವಿಷಯ ತಿಳಿದ ತಕ್ಷಣ ತಹಸಿಲ್ದಾರರಿಗೆ ಆ ಸರ್ವೆ ನಂಬರ್‌ನ ಮೂಲ ದಾಖಲಾತಿಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.”
ದರ್ಶನ್ ಧ್ರುವನಾರಾಯಣ, ಶಾಸಕ
ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…
ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…
ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…
ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…
ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…