೨೦೨೪ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಇದೇ ಕಾರಣ ಎಂದು ಅವರು ಒತ್ತಿ ಹೇಳಿದ್ದಾರೆ. ಇದು ಒಂದು ಉದಾಹರಣೆ ಅಷ್ಟೆ. ಬಹುತೇಕ ಕ್ಷೇತ್ರಗಳಲ್ಲಿ ಅಕ್ರಮ ಮತಗಳು ಚಲಾವಣೆಯಾಗಿವೆ. ಒಂದೇ ಕುಟುಂಬದಲ್ಲಿ ೧೦ಕ್ಕೂ ಹೆಚ್ಚು ಮತದಾರರು, ಸುಳ್ಳು ವಿಳಾಸ ಸೃಷ್ಟಿ ಇತ್ಯಾದಿ ನ್ಯಾಯಸಮ್ಮತವಲ್ಲದ ಪ್ರಕ್ರಿಯೆಗಳಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ನಿದರ್ಶನಗಳಿವೆ. ಆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಚುನಾವಣಾ ಆಯೋಗ ಕೂಡ ಕೈಜೋಡಿಸಿತ್ತು ಎಂದು ರಾಹುಲ್ ಆರೋಪ ಮಾಡಿದ್ದಾರೆ.
ಅಲ್ಲದೆ, ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೧೬ ಕ್ಷೇತ್ರಗಳಲ್ಲಿ ಗೆಲ್ಲಬೇಕಿದ್ದ ಕಾಂಗ್ರೆಸ್ ಪಕ್ಷ,ಕೇವಲ ೯ ಸ್ಥಾನಗಳಿಗೆ ಸೀಮಿತವಾಗಿತ್ತು. ಅದಕ್ಕೆ ಕಾರಣ ಮತಗಳ್ಳತನ. ಈ ಅಕ್ರಮ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಹುಲ್ ಅವರ ಹೇಳಿಕೆಯಲ್ಲಿ ವಾಸ್ತವ ಇದೆ. ಹಾಗಾಗಿ ಮತಗಳ್ಳತನದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆಸಿದ್ಧತೆ ನಡೆದಿದೆ ಎಂದಿದ್ದಾರೆ. ಅತ್ತ ಬಿಜೆಪಿಯ ಹಲವು ನಾಯಕರು, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧೩೬ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆಯಲ್ಲ? ಹಾಗಿದ್ದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ್ಳತನ ಮಾಡಿದೆ ಎಂದಾಯಿತು ಎಂದು ಪ್ರತಿಪಾದಿಸುತ್ತಿದ್ದಾರೆ.
ರಾಹುಲ್ ಅವರು ಹೊಸದಿಲ್ಲಿಯಲ್ಲಿ ಮತಗಳ್ಳತನಕ್ಕೆ ಆಧಾರವಾಗಿ ವಿಡಿಯೋ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.
ಏತನ್ಮಧ್ಯೆ, ಚುನಾವಣಾ ಆಯೋಗ ರಾಹುಲ್ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದೆ. ರಾಹುಲ್ ಅವರು ಮತ ಕಳವು ಹಾಗೂ ನಕಲಿ ಮತದಾನ ನಡೆದಿದೆ ಎಂಬಘೋಷಣೆಯನ್ನು ಸಹಿ ಮಾಡಿದ ಪ್ರಮಾಣಪತ್ರದಲ್ಲಿ ಸಲ್ಲಿಸಬೇಕು. ತಪ್ಪಿದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಯೋಗ ಎಚ್ಚರಿಕೆ ನೀಡಿದೆ. ಇದೇ ವೇಳೆ ಕೆಲ ಚುನಾವಣಾ ಕಾನೂನು ತಜ್ಞರು, ಆಯೋಗವು ರಾಹುಲ್ ಅವರಿಗೆ ನೀಡಿರುವ ಎಚ್ಚರಿಕೆಗೆ ನಿಯಮಾವಳಿಯಲ್ಲಿ ಅವಕಾಶವೇ ಇಲ್ಲ ಎಂದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿ ಪ್ರಕಟವಾದ ೩೦ ದಿನಗಳೊಳಗೆ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದರೆ ಮಾತ್ರ, ಪ್ರಮಾಣ ಪತ್ರವನ್ನು ಕೊಡಬೇಕಾಗುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ರಾಹುಲ್ ಅವರ ಆರೋಪವು ಬಹು ಗಂಭೀರ ಸ್ವರೂಪವನ್ನು ಪಡೆಯುವ ಲಕ್ಷಣಗಳು ಇವೆ. ಒಂದು ವೇಳೆ ಅವರ ಸಲಹೆಯಂತೆ ಮತಗಳ್ಳತನ ಕುರಿತು ತನಿಖೆ ನಡೆಸುವುದಾದರೆ, ಅದರ ರೂಪರೇಷೆ ಹೇಗಿರಬೇಕು ಎಂಬುದನ್ನು ಯೋಚಿಸುವುದು ಅತ್ಯಗತ್ಯ. ರಾಜ್ಯ ಅಥವಾ ಕೇಂದ್ರ ಯಾವುದೇ ಸರ್ಕಾರ ನಕಲಿ ಮತದಾನ ಅಥವಾ ಮತ ಕಳವು ಪ್ರಕರಣಗಳ ಬಗ್ಗೆ ತನಿಖೆಯನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗೆ ವಹಿಸುವುದು ಸೂಕ್ತ. ಬೇರೆ ಯಾವುದೇ ಬಗೆಯ ತನಿಖೆಯಿಂದ ಪ್ರಯೋಜನ ಆಗುವುದಿಲ್ಲ.
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭೆ ಚುನಾವಣೆವರೆಗೆ ಸಣ್ಣಪುಟ್ಟ ನಕಲಿ ಮತದಾನದ ಆರೋಪಗಳು ಕೇಳಿಬರುವುದು ಸಹಜ. ಆದರೆ, ಒಂದು ಮತದ ವ್ಯತ್ಯಯದಿಂದಲೂ ಫಲಿತಾಂಶ ಏರುಪೇರು ಆಗುತ್ತದೆ ಎಂಬ ನಿದರ್ಶನಗಳು ಇವೆ. ಅದರಲ್ಲಿಯೂ ಗ್ರಾಮ ಪಂಚಾಯಿತಿ ಚುನಾಣೆಗಳಲ್ಲಿ ಒಂದೊಂದು ಮತವೂ ಬಹಳ ಮುಖ್ಯವಾಗಿರುತ್ತವೆ. ಅಂತಹ ಸಂದರ್ಭದಲ್ಲಿ ನಕಲಿ ಮತದಾನ ಬಹಳ ಆಘಾತಕಾರಿಯಾಗಿರುತ್ತದೆ. ಇದನ್ನು ಬುಡಮಟ್ಟದಿಂದಲೇ ನಿರ್ಮೂಲನ ಮಾಡುವುದು ಅಗತ್ಯ.
ಈಗಾಗಲೇ ನಡೆದಿದೆ ಎನ್ನಲಾಗಿರುವ ಮತ ಕಳವು ಪ್ರಕರಣ ಕುರಿತು ತನಿಖೆ ನಡೆಸಬಹುದು. ಅದಕ್ಕಿಂತ ಮುಖ್ಯವಾಗಿಮುಂದಿನ ಚುನಾವಣೆಗಳಲ್ಲಿ ನಕಲಿ ಮತದಾನ, ಮತಗಳ್ಳತನ ಅಂತಹನಿಯಮಬಾಹಿರ ಕೃತ್ಯಗಳನ್ನು ತಡೆಗಟ್ಟುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಚುನಾವಣಾ ಆಯೋಗ ಒಟ್ಟಾಗಿ ಕಟ್ಟುನಿಟ್ಟಿನ ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯಂತ ಸೂಕ್ತ. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಸರ್ಕಾರಗಳು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಹೆಜ್ಜೆ ಇಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡವನ್ನು ಗಟ್ಟಿಗೊಳಿಸುತ್ತದೆ, ಸಂವಿಧಾನದ ಆಶಯವನ್ನು ಎತ್ತಿಹಿಡಿದಂತಾಗುತ್ತದೆ.
” ಏತನ್ಮಧ್ಯೆ, ಚುನಾವಣಾ ಆಯೋಗ ರಾಹುಲ್ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದೆ.ರಾಹುಲ್ ಅವರು ಮತ ಕಳವು ಹಾಗೂ ನಕಲಿ ಮತದಾನ ನಡೆದಿದೆ ಎಂಬ ಘೋಷಣೆಯನ್ನು ಸಹಿ ಮಾಡಿದ ಪ್ರಮಾಣಪತ್ರದಲ್ಲಿ ಸಲ್ಲಿಸಬೇಕು. ತಪ್ಪಿದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಇದೇ ವೇಳೆ ಕೆಲ ಚುನಾವಣಾ ಕಾನೂನು ತಜ್ಞರು, ಆಯೋಗವು ರಾಹುಲ್ ಅವರಿಗೆ ನೀಡಿರುವ ಎಚ್ಚರಿಕೆಗೆ ನಿಯಮಾವಳಿಯಲ್ಲಿ ಅವಕಾಶವೇ ಇಲ್ಲ ಎಂದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿ ಪ್ರಕಟವಾದ ೩೦ ದಿನಗಳೊಳಗೆ ಅಕ್ರಮ ನಡೆದಿದೆ ಎಂದು ಆರೋಪಮಾಡಿದರೆ ಮಾತ್ರ, ಪ್ರಮಾಣ ಪತ್ರವನ್ನು ಕೊಡಬೇಕಾಗುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.”
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…