ಸಂಪಾದಕೀಯ

ಬೃಹತ್‌ ಮೈಸೂರು ಮಹಾನಗರ ಪಾಲಿಕೆಯ ಮುಂಗಾಣ್ಕೆ ಜನರಿಗೆ ಗೊತ್ತಾಗಬೇಕು

ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ವಿಭಜಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಅದೇ ಸಮಯದಲ್ಲಿ ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆ ಗೇರಿಸುವ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರಿಗೆ ಬೃಹತ್ ಮೈಸೂರು ನಗರಪಾಲಿಕೆ ಯಿಂದ ಆಗುವ ಪ್ರಯೋಜನ ಗಳೇನು ಎಂಬುದನ್ನು ಮನ ದಟ್ಟು ಮಾಡುವ ಹೊಣೆ ಸರ್ಕಾರದ್ದಾಗಿದೆ.

ರಾಜಧಾನಿಯಲ್ಲಿ ಒಂದು ವಿಧದ ಆಡಳಿತ, ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ರೀತಿಯ ಆಡಳಿತ ಎಂಬುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲಿಸುವಂತೆ ಅಽಕಾರಿಗಳಿಗೆ ಸೂಚಿಸಿದ್ದಾರೆ. ಪ್ರಸ್ತುತ ಮೈಸೂರು ನಗರಪಾಲಿಕೆ ಸರಹದ್ದಿನಲ್ಲಿರುವ ನಗರ, ಪಟ್ಟಣ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ವಿಲೀನಗೊಳಿಸಿ ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ವಿಸ್ತೃತ ವರದಿ ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ತಯಾರಾಗಬೇಕು ಎಂಬುದು ಸಚಿವರ ಆದೇಶ.

ಪ್ರಸ್ತುತ ಮೈಸೂರು ನಗರದಲ್ಲಿ ೧೩. ೩೦ ಲಕ್ಷ ಜನಸಂಖ್ಯೆ ಇದ್ದು, ಬೃಹತ್ ಮೈಸೂರು ಪರಿಕಲ್ಪನೆಗೆ ಪೂರಕವಾಗಿ ಆಸುಪಾಸಿನ ಹಳ್ಳಿಗಳನ್ನು ಸೇರ್ಪಡೆ ಮಾಡಿದರೆ, ಜನಸಂಖ್ಯೆ ೧೬. ೦೮ ಲಕ್ಷಕ್ಕೆ ಹೆಚ್ಚಳವಾಗುತ್ತದೆ. ಮೈಸೂರು ನಗರಪಾಲಿಕೆ, ಹೂಟ ಗಳ್ಳಿ ನಗರಸಭೆ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಮತ್ತು ಬೋಗಾದಿ ಪಟ್ಟಣ ಪಂಚಾಯಿತಿಗಳು, ಇಲವಾಲ ಗ್ರಾಮ ಪಂಚಾಯಿತಿಯ ಇಲವಾಲ, ನಾಗನಹಳ್ಳಿ ಗ್ರಾಮ ಪಂಚಾಯಿತಿಯ ಶ್ಯಾದನಹಳ್ಳಿ , ಸಿದ್ದಲಿಂಗಪುರ, ಚಾಮುಂಡಿಬೆಟ್ಟ, ಆಲನಹಳ್ಳಿ ಗ್ರಾಪಂಗಳು ಬೃಹತ್ ಮೈಸೂರು ಮಹಾನಗರ ಪಾಲಿಕೆಯ ತೆಕ್ಕೆಗೆ ಸೇರುತ್ತವೆ. ಈ ಪೈಕಿ ಕೆಲ ಗ್ರಾಪಂ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಈಗಾಗಲೇ ನಗರಪಾಲಿಕೆ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಉದ್ದೇಶಿತ ಬೃಹತ್ ಮೈಸೂರು ಮಹಾ ನಗರಪಾಲಿಕೆಗೆ ಸೇರಲಿರುವ ಹಲವು ಸ್ಥಳೀಯ ಸಂಸ್ಥೆಗಳು ಇತ್ತೀಚೆಗಷ್ಟೆ ಮೇಲ್ದರ್ಜೆಗೇರಿದ್ದು, ಇವುಗಳಿಗೆ ಒಂದು ಬಾರಿಯೂ ಚುನಾ ವಣೆ ನಡೆದಿಲ್ಲ. ಅಷ್ಟರಲ್ಲಿಯೇ ಬೃಹತ್ ಮೈಸೂರು ನಗರ ಪಾಲಿಕೆಗೆ ಸೇರಿದರೆ ಎರಡು ಮೆಟ್ಟಿಲು ಮೇಲುಗಡೆಗೆ ಒಮ್ಮೆಲೆ ಜಿಗಿದಂತಾಗುತ್ತದೆ. ಆದರೆ, ಬೃಹತ್ ಮೈಸೂರು ಮಹಾನಗರಪಾಲಿಕೆ ನಿರ್ಮಾಣದ ಉಪಯುಕ್ತತೆ, ಯೋಜನೆಗಳೇನು ಎಂಬುದರ ಬಗ್ಗೆ ನಾಗರಿಕರಿಗೆ ಮಾಹಿತಿ ಒದಗಿಸಬೇಕಿದೆ.

ಎಚ್. ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ಅನುಷ್ಠಾನಗೊಳಿಸಿದ್ದರು. ಬೆಂಗಳೂರು ನಗರಪಾಲಿಕೆಯ ಆಸುಪಾಸಿನಲ್ಲಿದ್ದ ಸಣ್ಣಪುಟ್ಟ ಸ್ಥಳೀಯ ಸಂಸ್ಥೆಗಳನ್ನು ಸೇರಿಸಿಕೊಳ್ಳುವ ಮೂಲಕ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸಿಕೊಂಡಿತ್ತು. ಅದರಿಂದ ಕೇಂದ್ರ ಸರ್ಕಾರದಿಂದ ಅನುದಾನ ಯಥೇಚ್ಛವಾಗಿ ದೊರೆಯತ್ತದೆ ಎಂಬ ಲೆಕ್ಕಾಚಾರ ಇತ್ತು. ಅಲ್ಲದೆ, ಆಡಳಿತಾತ್ಮಕವಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ, ಅದು ಅಭಿವೃದ್ಧಿಯ ಆಯಾಮವನ್ನು ಪೂರಕವಾಗಿ ಬದಲಾಯಿಸಲು ಅನುಕೂಲವಾಗುತ್ತದೆ ಎನ್ನಲಾಗಿತ್ತು.

ಆದರೆ, ಬೆಂಗಳೂರು ಮಳೆ ಬಂದಾಗ ಹೊಳೆಯಂತಾಗುವುದನ್ನು ತಪ್ಪಿಸುವುದು ಸಾಧ್ಯವಾಗಲಿಲ್ಲ. ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವೂ ಸಂಪೂರ್ಣ ವಾಗಿ ಆಗಿಲ್ಲ. ಅಲ್ಲದೆ, ಕೇಂದ್ರದಿಂದ ಕೂಡ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ನೆರವು ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯ ಸರ್ಕಾರ ಬೆಂಗಳೂರನ್ನು ೭ ಭಾಗಗಳಾಗಿ ವಿಂಗ ಡಿಸಿ, ಅಧಿಕಾರ ವಿಕೇಂದ್ರೀಕರಣಕ್ಕೆ ಪುನಃ ತೆರೆದುಕೊಳ್ಳುವ ನಿರ್ಧಾರ ಮಾಡಿದಂತಿದೆ.

ಇಂತಹ ಪರಿಸ್ಥಿತಿಯಲ್ಲಿ ಮೈಸೂರನ್ನು ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ ಉನ್ನತೀಕರಿಸಲು ಹೊರಟಿರುವುದು ಸಹಜವಾಗಿ ಮೈಸೂರಿನ ನಾಗರಿಕರಲ್ಲಿ ಗೊಂದಲ ಮೂಡಿಸಿದೆ. ಇದನ್ನು ನಿವಾರಿಸಿ ಬೃಹತ್ ಮೈಸೂರು ಯೋಜನೆ ಅನುಷ್ಠಾನಗೊಂಡರೆ ಯಾವ ಬಗೆಯ ಪ್ರಯೋಜನಗಳು ಇವೆ, ಯೋಜನೆಗಳು ಎಷ್ಟರ ಮಟ್ಟಿಗೆ ಜನರನ್ನು ನೇರವಾಗಿ ತಲುಪಲು ಸಾಧ್ಯ ಎಂಬ ವಿಷಯಗಳನ್ನು ಕುರಿತು ಜಾಗೃತಿ ಮೂಡಿಸುವ ಅಗತ್ಯ ಇದೆ. ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ ಅಭಿವೃದ್ಧಿಗೊಳಿಸುವಷ್ಟೇ ಮುಖ್ಯವಾಗಿ ಅದರ ಮುಂಗಾಣ್ಕೆಯ ಬಗ್ಗೆ ಜನರಿಗೆ ಸ್ಪಷ್ಟ ತಿಳಿವಳಿಕೆ ನೀಡುವ ಹೊಣೆ ರಾಜ್ಯ ಸರ್ಕಾರದ್ದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕು. ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುವ ಭಾಗವಾಗಿ ಗ್ರೇಟರ್ ಮೈಸೂರು ರಚನೆ ಪ್ರಸ್ತಾಪ ಮಾಡದೆ ಭವಿಷ್ಯದ ದಿನಗಳನ್ನು ಇಟ್ಟುಕೊಂಡು ರೂಪಿಸಲು ಹೊರಟಿರುವ ಬೃಹತ್ ಮಹಾನಗರಪಾಲಿಕೆ ರಚನೆಯ ನಂತರ ಅಭಿವೃದ್ಧಿಯ ಬೆಳವಣಿಗೆ ಕುರಿತು ವಾಸ್ತವತೆಯನ್ನು ತೆರೆದಿಡುವ ಕೆಲಸ ಮಾಡಬೇಕಿದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಗೋಣಿಕೊಪ್ಪದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಗೋಣಿಕೊಪ್ಪ: ಪಟ್ಟಣದಲ್ಲಿ ಇಂದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಧಾರಾಕಾರ ಮಳೆಗೆ ಶಾಲಾ-ಕಾಲೇಜುಗಳ ಮೈದಾನಗಳು ಕೆರೆಯಂತಾಗಿದ್ದು, ಮಕ್ಕಳು…

6 hours ago

ಸಿಇಟಿ: ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್.‌15ಕ್ಕೆ ಹಿಂದೂಡಿಕೆ

ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್.‌18ಕ್ಕೆ ಬದಲಾಗಿ ಏಪ್ರಿಲ್.‌15ರಂದೇ…

7 hours ago

ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ

ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ ವಿಧಿಸಲಾಗಿದೆ. ಅಂತರಗಂಗೆಯ 500…

7 hours ago

ಮಡಿಕೇರಿ| ಮಾರ್ಚ್.21ರಿಂದ ಹುಲಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್

ಮಡಿಕೇರಿ: ಫ್ರೆಂಡ್ಸ್ ಹುಲಿತಾಳ ಇವರ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಮಾರ್ಚ್ 21,22,23ರಂದು ಮಡಿಕೇರಿಯ…

7 hours ago

ಆರ್‌ಎಸ್‌ಎಸ್‌ನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 1942ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು. ನೀವು ಬ್ರಿಟಿಷರ ಏಜೆಂಟರು ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ. ಈ…

8 hours ago

ಪಿರಿಯಾಪಟ್ಟಣ: ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದ ಮಹಿಳೆಯರು

ಪಿರಿಯಾಪಟ್ಟಣ: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.…

8 hours ago