ಸಂಪಾದಕೀಯ

ಕುತೂಹಲ ಘಟ್ಟದಲ್ಲಿ ಬದಲಾವಣೆ ಚರ್ಚೆ

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಆಡಿದ ಮಾತು ಇಡೀ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಇದರಿಂದ ನವೆಂಬರ್ ಕ್ರಾಂತಿಯ ಮಾತುಗಳನ್ನಾಡುತ್ತಿದ್ದವರಿಗೆ ಹುಮ್ಮಸ್ಸು ಮೂಡಿದೆ. ಯತೀಂದ್ರ ಅವರು, ತಮ್ಮ ತಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಕೊನೆಗಾಲದಲ್ಲಿದ್ದು, ಈಗ ಅವರಂತೆಯೇ ಪ್ರಗತಿಪರವಾಗಿ ಆಲೋಚಿಸುವ ನಾಯಕರ ಅಗತ್ಯವಿದ್ದು, ಅದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿದೆ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ವಿರೋಧ ಪಕ್ಷಗಳ ನಾಯಕರಿಗೆ ಮೃಷ್ಟಾನ್ನ ಭೋಜನದಂತಾಗಿದೆ.

ಯತೀಂದ್ರ ಮಾತಿಗೆ ಪರ- ವಿರುದ್ಧವಾಗಿ ಸಚಿವರ ಹೇಳಿಕೆಗಳು ಹರಿದಾಡ ತೊಡಗಿದವು. ನವೆಂಬರ್ ಕ್ರಾಂತಿಯಾದರೆ ನಾಯಕತ್ವ ಸಿಗುವ ಆಸೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಸೂಕ್ಷ್ಮವಾಗಿ ಪ್ರತಿ ಕ್ರಿಯಿ ಸಿದ್ದು, ನಾನು ಎಲ್ಲಿ ಮಾತಾಡ ಬೇಕೋ ಅಲ್ಲಿ ಮಾತನಾಡುತ್ತೇನೆ ಎಂದಿರುವುದು ಊಹಾಪೋಹಕ್ಕೆ ರೆಕ್ಕೆ ಮೂಡಿಸಿದೆ.

ಇದನ್ನು ಓದಿ:ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಯತೀಂದ್ರ ಮಾತು

ಆದರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ. ಮಹದೇವಪ್ಪ ಅವರು ಯತೀಂದ್ರ ಅವರು ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಅಲ್ಲದೆ ಅದು ಮುಗಿದ ಅಧ್ಯಾಯ ಎಂದು ಸಮರ್ಥಿಸಿಕೊಂಡಿದ್ದಾರೆ.

ನವೆಂಬರ್ ಕ್ರಾಂತಿಯಲ್ಲಿ ನಾಯಕತ್ವ ಬದಲಾವಣೆ ಜೊತೆಗೆ ಸಂಪುಟ ಪುನಾ ರಚನೆಯೂ ನಡೆಯಲಿದೆ ಎಂಬ ಪ್ರತಿ ಪಾದನೆ ಕಾಂಗ್ರೆಸ್‌ವಲಯದಲ್ಲಿ ಕೇಳಿ ಬರು ತ್ತಿದೆ. ಏತನ್ಮಧ್ಯೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ, ಹೊಸಬರಿಗೆ ಅವಕಾಶ ಸಿಗಬೇಕು. ಅಲ್ಲದೆ,ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಎರಡೂವರೆ ವರ್ಷಗಳ ಕಾಲ ನಂತರ ಸಚಿವ ಸಂಪುಟ ಪುನಾರಚನೆ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು ಅಂತ ಖಚಿತಪಡಿಸಿದ್ದಾರೆ.

ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯತೀಂದ್ರ ಅವರು ನಾಯಕತ್ವ (ಮುಖ್ಯಮಂತ್ರಿ ಸ್ಥಾನ)ದ ಬಗ್ಗೆ ಮಾತನಾಡಿಲ್ಲ. ಅಹಿಂದ ವರ್ಗಗಳನ್ನು ಮುನ್ನಡೆಸುವ ನಾಯಕತ್ವ ಕುರಿತು ಹೇಳಿಕೆ ನೀಡಿರುವುದು. ಅದನ್ನು ನನ್ನ ಬಳಿ ಕೂಡ ಹೇಳಿದ್ದಾರೆ. ಆದರೆ, ಮಾಧ್ಯಮಗಳು ಅದನ್ನು ತಿರುಚಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಯತೀಂದ್ರ ಕೂಡ ಸಿದ್ದರಾಮಯ್ಯ ಅವರೇ ಮುಖ್ಯ ಮಂತ್ರಿಯಾಗಿ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಆದರೆ ಅಹಿಂದ ನಾಯಕತ್ವಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಪಕ್ಷದಿಂದ ನೋಟಿಸ್ ಬಂದರೆ, ಉತ್ತರಿಸಲು ಸಿದ್ಧ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಹೊಸದಿಲ್ಲಿಗೆ ತೆರಳಿದ್ದು, ನ.೨೦ಕ್ಕೆ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಪೂರ್ಣಗೊಳ್ಳಲಿವೆ ಎಂಬುದರ ಬಗ್ಗೆ ಹೈಕಮಾಂಡ್‌ನ ಗಮನ ಸೆಳೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರುಗಳಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿರುವ ಗುಟ್ಟನ್ನು ಬಹಿರಂಗಪಡಿಸಿಲ್ಲ. ಸಂಪುಟ ಪುನಾರಚನೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ, ಮುಖ್ಯಮಂತ್ರಿಗಳೇ ಅದಕ್ಕೆ ಉತ್ತರಿಸಬೇಕು ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವ ಕೆ.ಎನ್.ರಾಜಣ್ಣ ನವೆಂಬರ್ ಕ್ರಾಂತಿ ಖಂಡಿತ, ಹೈಕಮಾಂಡ್ ಸಂಪುಟ ಪುನಾರಚನೆಯ ಜವಾಬ್ದಾರಿಯನ್ನು ಯಾರಿಗೆ ವಹಿಸುತ್ತದೋ, ಅವರೇ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಆ ಜವಾಬ್ದಾರಿ ವಹಿಸಿದರೆ, ಅವರೇ ಮುಂದಿನ ಎರಡೂವರೆ ವರ್ಷಗಳೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವ ಮೂಲಕ ವದಂತಿಯನ್ನು ವರ್ಣರಂಜಿತ ಗೊಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧ ಮೊದಲಿಗೆ ಸೆಪ್ಟೆಂಬರ್ ಕ್ರಾಂತಿ, ನಂತರ ಅಕ್ಟೋಬರ್ ಕ್ರಾಂತಿ ಮಾತುಗಳು ಬಿರುಗಾಳಿ ಎಬ್ಬಿಸಿದ್ದು, ಅಷ್ಟೇ ವೇಗವಾಗಿ ಬಿದ್ದು ಹೋದವು. ಇದೀಗ ನವೆಂಬರ್ ಕ್ರಾಂತಿ ಚಾಲ್ತಿಯಲ್ಲಿದೆ. ಸಿದ್ದ ರಾಮಯ್ಯ ಅವರೂ ಹೊಸದಿಲ್ಲಿಗೆ ತೆರಳಲಿದ್ದು, ನಂತರ ನವೆಂಬರ್ ಕ್ರಾಂತಿಯ ನೈಜತೆ ಸ್ಪಷ್ಟವಾಗಲಿದೆ.

” ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಹೊಸದಿಲ್ಲಿಗೆ ತೆರಳಿದ್ದು, ನ.೨೦ಕ್ಕೆ ಪಕ್ಷ ಅಽಕಾರಕ್ಕೆಬಂದು ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ ಎಂಬುದರ ಬಗ್ಗೆ ಹೈಕಮಾಂಡ್‌ನ ಗಮನ ಸೆಳೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರುಗಳಿಗೂ ಪತ್ರ ಬರೆದಿದ್ದಾರೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ

ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…

1 min ago

ಓದುಗರ ಪತ್ರ: ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣವಾಗಲಿ

ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…

16 mins ago

ಓದುಗರ ಪತ್ರ: ಗೀತೆ ರಚನಾಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು…

18 mins ago

ಓದುಗರ ಪತ್ರ: ಪರೀಕ್ಷೆ ವೇಳೆ ವಿದ್ಯುತ್ ಕಡಿತ ಮಾಡದಿರಿ

ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಎಸ್ಕಾಂಗಳು ವಿದ್ಯುತ್ ಕಡಿತ ಮಾಡುತ್ತಿರುವುದು ಸರಿಯಲ್ಲ.…

21 mins ago

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇಲ್ಲ

ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟು ಸಂಗ್ರಹ ವಿದ್ದು, ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ…

25 mins ago

ತುಳುನಾಡಿನ ಯುಗಾದಿ ‘ಬಿಸು’ವಿಗಾಗಿ ಇನ್ನೂ ಇಪ್ಪತ್ತೆಂಟು ದಿನ

ಅಕ್ಷತಾರಾಜ್ ಪೆರ್ಲ, ಕನ್ನಡ, ತುಳು ಉಭಯ ಭಾಷಾ ಲೇಖಕಿ  ಯುಗಾದಿ ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದ್ದು,…

31 mins ago