ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬುದನ್ನು ಪರಿಸರ ಸಂಬಂಧಿತ ಬಹುತೇಕ ಎಲ್ಲ ಸಂಶೋಧನೆಗಳು ಹೇಳುತ್ತಲೇ ಇವೆ. ಇದರಿಂದ ನಾಡು, ಜನತೆ ಪಾರಾಗಲು ಮರಗಳನ್ನು ಬೆಳೆಸುವುದು, ಆ ಮೂಲಕ ಹಸಿರನ್ನು ಉಳಿಸುವುದು ಅನಿವಾರ್ಯ.
ಇದಕ್ಕಾಗಿ ಸರ್ಕಾರ, ಅನೇಕ ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಲೇ ಇವೆ. ಪ್ರತಿ ವರ್ಷ ಜೂ. ೫ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಮರಗಳನ್ನು ಸಂರಕ್ಷಿಸಿ, ಪಾಲನೆ ಮಾಡಬೇಕು ಎಂಬುದು. ಅದರಲ್ಲಿಯೂ ಹಳೆಯ ಬೃಹತ್ ಮರಗಳು ಅಂದರೆ, ಆಲ, ಅರಳಿ, ಹೊಂಗೆ ಇತ್ಯಾದಿ ಮರಗಳನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮೈಸೂರು ಮಹಾನಗರಪಾಲಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯವರ ಕಚೇರಿ ಸಮೀಪದಲ್ಲಿನ ಹೈದರ್ ಅಲಿ ರಸ್ತೆಯ ಇಕ್ಕೆಲದಲ್ಲಿದ್ದ ೪೦ ಬೃಹತ್ ಮರಗಳನ್ನು ಕಡಿದುರುಳಿಸಿದೆ.
ಅಭಿವೃದ್ಧಿ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ನಿಜ. ಆದರೆ, ಈ ವೃಕ್ಷಗಳನ್ನು ಕತ್ತರಿಸಿ ಹಾಕಿರುವುದನ್ನು ಒಪ್ಪಿಕೊಳ್ಳುವುದು ಸಮಂಜಸವಲ್ಲ. ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗಗಳನ್ನು ಪರಿಶೋಽಸದೆ, ದಿಢೀರ್ ಮರಗಳ ಬುಡಕ್ಕೆ ಕೊಡಲಿ ಹಾಕಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿ ಅನಿಸುತ್ತಿಲ್ಲ. ಇದರಲ್ಲಿ ಅರಣ್ಯ ಇಲಾಖೆಯ ಹೊಣೆಗಾರಿಕೆಯೂ ಇದೆ. ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವ ಮುಂಚೆಯೇ ಮರಗಳ ಹನನ ಅನಿವಾರ್ಯವೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ೫೦ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಬೇಕಾದರೆ ಸಾರ್ವ ಜನಿಕರ ಅಭಿಪ್ರಾಯ ಸಂಗ್ರಹ ಮಾಡುವುದು ಕಡ್ಡಾಯ ಎಂಬ ಕಾರಣಕ್ಕೆ ‘ಮರಮೇಧ’ ವನ್ನು ೪೦ ಮರಗಳಿಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಹತ್ತನ್ನೆರಡು ವರ್ಷಗಳ ಹಿಂದೆ ಮೈಸೂ ರಿನ ಮಹಾತ್ಮ ಗಾಂಽ (ಎಂ. ಜಿ. ) ರಸ್ತೆಯಲ್ಲಿ ರುವ ಸುಮಾರು ೫೦ ಬೃಹತ್ ಮರಗಳನ್ನು ಅಭಿವೃದ್ಧಿ ಕಾರಣಕ್ಕಾಗಿ ತೆರವುಗೊಳಿಸುವು ದಕ್ಕೆ ನಗರಪಾಲಿಕೆ ಮತ್ತು ಅರಣ್ಯ ಇಲಾಖೆ ಮುಂದಾಗಿದ್ದವು. ಆಗ ಪರಿಸರವಾದಿಗಳು, ಹೋರಾಟಗಾರರು ದೊಡ್ಡ ಮಟ್ಟ ದಲ್ಲಿ ನಡೆಸಿದ ಪ್ರತಿಭಟನೆಗೆ ಮಣಿದು ಆ ನಿರ್ಧಾರದಿಂದ ಹಿಂದೆ ಸರಿಯಲಾಯಿತು. ಅಂದರೆ ಆ ಮರಗಳನ್ನು ಉಳಿಸಿಕೊಂಡೇ ರಸ್ತೆಯನ್ನು ಅಗಲೀಕರಣ ಮಾಡಲಾಯಿತು.
ಹಸಿರಾಗಿರುವ ಮರಗಳ ಉಸಿರು ಉಳಿಸಿದಂತಹ ಪ್ರಕರಣ ನಮ್ಮ ಮುಂದೆ ಇದ್ದರೂ, ೪೦ ಮರಗಳನ್ನು ಕಡಿದುರುಳಿ ಸಿದ ಪ್ರಕರಣ ಸಾರ್ವಜನಿಕರಲ್ಲಿ ಅನುಮಾನ ಗಳಿಗೆ ಕಾರಣವಾಗಿದೆ. ಮರಗಳನ್ನು ಅಭಿ ವೃದ್ಧಿಯ ಹೆಸರಿನಲ್ಲಿ ಕಡಿದು ಹಾಕುತ್ತಾ ಸಾಗಿದರೆ ಮುಂದೊಮ್ಮೆ ಹಸಿರು ಇಲ್ಲದೆ, ಉಸಿರಾಟಕ್ಕಾಗಿ ಆಮ್ಲಜನಕದ ಸಿಲಿಂಡರ್ ಗಳನ್ನು ಬಳಸಬೇಕಾಗುತ್ತದೆ. ಇಂತಹ ಆತಂಕ ಜಾಗತಿಕ ಮಟ್ಟದಲ್ಲೇ ಪರಿಸರ ವಿಜ್ಞಾನಿಗಳು, ಹೋರಾಟಗಾರರನ್ನು ಕಾಡುತ್ತಿದೆ. ಮರಗಳ ಹನನದ ವಿರುದ್ಧ ಪರಿಸರಪ್ರಿಯರು ಹಲವು ಬಗೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೂ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಸುಮಾರು ೧೨೫ ವೃಕ್ಷಗಳ ‘ಹತ್ಯಾಕಾಂಡ’ಕ್ಕೆ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಇದೆ. ಅಲ್ಲದೆ, ದಟ್ಟಗಳ್ಳಿಯಲ್ಲಿ ಕೂಡ ಸುಮಾರು ೧೧೯ ಮರಗಳಿಗೆ ಸಂಖ್ಯೆಯನ್ನು ನಮೂದಿಸಿದ್ದು, ಅವುಗಳನ್ನು ತೆರವುಗೊಳಿಸುವುದಕ್ಕೂ ತಯಾರಿ ನಡೆದಿದೆ ಎನ್ನಲಾಗಿದೆ.
ಮೈಸೂರು ತಾಲ್ಲೂಕಿನ ಉತ್ತನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯು ತ್ತಿದ್ದು, ಅಲ್ಲಿಯೂ ರಸ್ತೆಬದಿಯಲ್ಲಿರುವ ೯ ಮರಗಳಿಗೆ ಯಾವ ಕ್ಷಣದಲ್ಲಿ ಬೇಕಾದರೂ ಕೊಡಲಿ ಪೆಟ್ಟು ಬೀಳಬಹುದು. ಮರಗಳನ್ನು ಕಡಿಯಲು ಕಾನೂನುಬದ್ಧವಾಗಿಯೇ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಸಂಬಂಧಪಟ್ಟ ಅಽಕಾರಿಗಳು ವಾದ ಮಾಡುತ್ತಿದ್ದಾರೆ. ಆದರೆ, ಮುಂದಿನ ಪೀಳಿಗೆಗೆ ಹಸಿರು ಮರಗಳನ್ನು ಉಳಿಸದೆ ಹೋದರೆ, ಸಂಭವಿಸ ಬಹುದಾದ ಜಾಗತಿಕ ತಾಪಮಾನ ಸ್ಛೋಟದ ಅಪಾಯವನ್ನು ಊಹಿಸುವುದು ಅಸಾಧ್ಯ.
ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ೪೦ ಮರಗಳ ಹನನ ಪ್ರಕರಣ ಕುರಿತು ತನಿಖೆಗೆ ಆದೇಶಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದು ಸ್ವಾಗತಾರ್ಹ. ತಪ್ಪಿತಸ್ಥರಿಗೆ ಶಿಕ್ಷೆಯಾದರೆ, ಮುಂದೆ ಯಾವುದೇ ಅಧಿಕಾರಿ ಹಸಿರಾಗಿರುವ ಬೃಹತ್ ಮರಗಳ ತಂಟೆಗೆ ಹೋಗುವುದಕ್ಕೆ ಹತ್ತಾರು ಬಾರಿ ಚಿಂತಿಸುವುದು ಖಚಿತ.
೫೦- ೬೦ ವರ್ಷಗಳಿಗೂ ಅಧಿಕ ವಯಸ್ಸಿನ ವೃಕ್ಷಗಳನ್ನು ಉಳಿಸಿಕೊಡುವ ಮೂಲಕ ಮುಂದಿನ ತಲೆಮಾರುಗಳಿಗೂ ಉಸಿರಾಡಲು ಉಚಿತವಾಗಿ ಆಮ್ಲಜನಕ ಲಭಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಆಮ್ಲಜನಕವನ್ನು ಖರೀದಿಸುವಂತಹ ಸ್ಥಿತಿ ಮೈಸೂರು ಸೇರಿದಂತೆ ಇಡೀ ರಾಜ್ಯದ ಜನರಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು.
ಬೆಳಗಾವಿ: 2023ರಂತೆ 2028ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ…
ಹಾಸನ: ಕಂಬ ಏರಿ ವಿದ್ಯುತ್ ತಂತಿ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹಾಸನದ ಕಾಟೀಹಳ್ಳಿಯ ಟೀಚರ್ಸ್…
ಬೆಂಗಳೂರು: ನಟ ಶಿವರಾಜ್ ಕುಮಾರ್-ಉಪೇಂದ್ರ ಅಭಿನಯದ ಬಹು ನಿರೀಕ್ಷಿತ 45 ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಖ್ಯಾತ ಸಂಗೀತ ನಿರ್ದೇಶಕ…
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಡಿ ಚಾರ್ಜ್‌ಶೀಟ್ ಪರಿಗಣಿಸಲು ಕೋರ್ಟ್…
ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಭೇಟಿ ನೀಡಿ ತಾಯಿಯ ದರ್ಶನ…
ಕೊಡಗು: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಕೆಚ್ಚೆಟ್ಟರ ಎಸ್ಟೇಟ್ ಕಾಫಿ ತೋಟದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಕಳೆದ ಕೆಲ ದಿನಗಳ ಹಿಂದೆ…