ಎಡಿಟೋರಿಯಲ್

‘ಸಲೀಂ ಅಲಿ ಪಕ್ಷಿ ಲೋಕದ ಬೆರಗು’

-ಡಾ.ಸುಂದರ ಕೇನಾಜೆ

ಭಾರತೀಯ ವೈಜ್ಞಾನಿಕ ಕ್ಷೇತ್ರ(ಮನೋಭಾವ)ದ ಬಗ್ಗೆ ಒಂದು ಚೌಕಟ್ಟಿನ ಒಳಗೆ ಮತ್ತು ಸಂಪ್ರದಾಯದ ಹೊರತಾಗಿ ಚಿಂತಿಸಬೇಕು ಎಂದಾದರೆ ಆ ಕ್ಷೇತ್ರವನ್ನು ಸಾಂಸ್ಕ ತಿಕ ಮತ್ತು ಒಂದಷ್ಟು ಸೃಜನಾತ್ಮಕವಾಗಿ ಕಟ್ಟಬೇಕು ಇಲ್ಲಾ ಬಳಸಿಕೊಳ್ಳಬೇಕು. ವಿಜ್ಞಾನ ವಸ್ತುವನ್ನು ಸಾಂಸ್ಕ ತಿಕವಾಗಿ ಬಳಸುವ ಪರಿಕಲ್ಪನೆ ಇತ್ತೀಚೆಗೆ ಅಲ್ಲಿ ಇಲ್ಲಿ ನಡೆಯುತ್ತಿರುವುದನ್ನು ಗಮನಿಸಬಹುದು. ಸಿನಿಮಾ, ನಾಟಕ, ಯಕ್ಷಗಾನ, ನೃತ್ಯ ಹಾಗೂ ಇತರ ಕಲಾ ಪ್ರಕಾರಗಳಲ್ಲಿ ವಿಜ್ಞಾನ ವಸ್ತುಗಳು ಬಳಕೆಯಾದಷ್ಟು ವ್ಯಕ್ತಿಯಲ್ಲಿ ವೈಜ್ಞಾನಿಕ ಮನೋಭಾವಗಳು ಹೆಚ್ಚು ಜಾಗೃತವಾಗಲು ಸುಲಭ ಎನ್ನುವುದು ಈ ಮಾತಿನ ತಾತ್ಪರ್ಯ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಿವು ರಂಗದ ಕಾರ್ಯ ಮಹತ್ತರವಾದುದು. ಕಲೆಯ ಮೂಲಕ ವಿಜ್ಞಾನವನ್ನು ಪ್ರಚಾರ ಪಡಿಸುವ, ವಿಜ್ಞಾನದೊಂದಿಗೆ ಕಲೆಯನ್ನು ಅನುಸಂಧಾನಗೊಳಿಸುವ ಪ್ರಕ್ರಿಯೆಯಲ್ಲಿ ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಮಾದರಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಈ ವರ್ಷದ ಕೊಡುಗೆ ಎಂಬಂತೆ ಪಕ್ಷಿ ತಜ್ಞ ಸಲೀಂ ಅಲಿಯವರ ಕುರಿತಾದ ನಾಟಕ ಹೊರಬಂದಿದೆ.

 ಪರಿಸರ ಪ್ರೇಮಿಗಳ ಜಗತ್ತು ಬೆರಗುಗಣ್ಣಿನಿಂದ ನೋಡಿದ ಸಲೀಂ ಅಲಿಯವರ ವ್ಯಕ್ತಿತ್ವದ ಅಭಿವ್ಯಕ್ತ ಭಾಗವೇ ‘ಪಕ್ಷಿಲೋಕದ ಬೆರಗು‘ ಎನ್ನುವ ಈ ನಾಟಕ. ಮೈಸೂರಿನ ಕಿರುರಂಗ ಮಂದಿರದಲ್ಲಿ ಇದೇ ಡಿ.೪ ರಂದು ಪ್ರದರ್ಶನಗೊಂಡ ಈ ನಾಟಕ ಬೇರೆಬೇರೆ ಕಾರಣಗಳಿಗಾಗಿ ಮೆಚ್ಚುಗೆ ಪಡೆಯಿತು.

ನಾಟಕದ ರಚನೆ: ನಾಟಕದ ಯಶಸ್ಸಿನ ಹಿಂದೆ ಅದರ ರಚನೆಯ ಪಾತ್ರ ಬಹಳ ಮಹತ್ವದ್ದು. ವಸ್ತುವಿನ ಆಯ್ಕೆ, ಸಂಭಾಷಣೆಗಳ ರಚನೆ ಮತ್ತು ಅದರ ಅಳ-ವಿಸ್ತಾರ, ರಂಗಭೂಮಿಯ ಜೊತೆಗಿನ ಅನುಸಂಧಾನ ಮತ್ತು ಅದು ನೀಡಬಹುದಾದ ಆತ್ಯಂತಿಕ ಪರಿಣಾಮ ಇತ್ಯಾದಿಗಳು ಒಂದು ನಾಟಕದ ರಚನೆಯ ಹಿಂದೆ ಕೆಲಸ ಮಾಡುತ್ತದೆ. ‘ಸಲೀಂ ಅಲಿ‘ ನಾಟಕ ಈ ರೀತಿಯ ಸ್ಕ್ರಿಪ್ಟ್ ನಿಂದಾಗಿ ಎರಡು ಗಂಟೆ ಅಲುಗಾಡದೇ ನೋಡುವಂತೆ ಮಾಡಿದೆ. ವೈದ್ಯ, ಹವ್ಯಾಸಿ ನಟ, ನಾಟಕ ಕರ್ತೃ ಹಾಗೂ ಪರಿಸರ ವಿಜ್ಞಾನದ ಕುರಿತ ವಿಶೇಷ ಆಸಕ್ತ ಮತ್ತು ತಜ್ಞತೆ ಹೊಂದಿರುವ ಡಾ.ಎಂ.ಸಿ.ಮನೋಹರರ ಸುದೀರ್ಘ ಅಧ್ಯಯನದ ಒಂದು ಭಾಗ ಈ ನಾಟಕ. ತನ್ನ ಮೊದಲ ವಿಜ್ಞಾನ ನಾಟಕದ ಮೂಲಕ ಡಾ.ಎಂ.ಸಿ.ಮನೋಹರರು ತನ್ನ ಹವ್ಯಾಸಿತನದಿಂದ ವೃತ್ತಿಪರ ರಚನೆಗೆ ಕಾಲಿರಿಸಬಹುದಾದ ಎಲ್ಲ ಖಚಿತ ಹೆಜ್ಜೆಗಳನ್ನೂ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿರ್ದೇಶನ: ರಚನೆಕಾರ ಏನೇ ಎಷ್ಟೇ ಬರೆದರೂ ನಿರ್ದೇಶಕನ ರಂಗತಂತ್ರ, ಜಾಣ್ಮೆ, ಕೈಚಳಕ ಮತ್ತು ಸೂಕ್ಷ್ಮ ಗ್ರಾಹಿತ್ವ ಕೆಲಸ ಮಾಡದೇ ಇದ್ದರೆ ಅದು ಸಪ್ಪೆಯೇ. ಈ ನಾಟಕವನ್ನು ನಿರ್ದೇಶಿಸಿದವರು ಕನ್ನಡ ಹಿರಿಯ ರಂಗಕರ್ಮಿ, ಕಿರುತೆರೆ ನಟ, ನಿರ್ದೇಶಕ ಬರ್ಟಿ ಒಲಿವೆರಾ. ಇಡೀ ನಾಟಕವನ್ನು ರಂಗದ ಮೇಲೆ ಎರಡು ಭಾಗ ಮಾಡಿ ಒಂದು ಭಾಗದಲ್ಲಿ ಅದರ ಬೌದ್ಧಿಕ ಅಭಿವ್ಯಕ್ತಿಯನ್ನು ಇನ್ನೊಂದು ಭಾಗದಲ್ಲಿ ಅದರ ಸಾಂಸ್ಕ ತಿಕ ರೂಪವನ್ನು ತೆರೆದಿಡುವ ರಂಗತಂತ್ರವನ್ನು ಬಳಸಿದ್ದಾರೆ. ಆದರೆ ಎರಡೂ ಭಾಗದಲ್ಲೂ ಪರಸ್ಪರ ಹೊಂದಿಕೆಯಾಗುವಂತಹಾ ಕೈಚಳಕವನ್ನು ತೋರಿಸಿದ್ದಾರೆ. ಇದರಿಂದ ಇಡೀ ನಾಟಕ ಎಲ್ಲೂ ತೂಕಡಿಸದೇ ಇರುವ ಜಾಣ್ಮೆಗೆ ಒಳಪಟ್ಟಿದೆ. ವಿಜ್ಞಾನ ನಾಟಕಗಳಲ್ಲಿ ತಾಂತ್ರಿಕ ಸಂಭಾಷಣೆಗಳು ಯಾಂತ್ರಿಕವಾಗಿ ವರ್ಗಾವಣೆಗೊಳ್ಳುವುದು ಸಾಮಾನ್ಯ. ಈ ಯಾಂತ್ರಿಕತೆಯನ್ನು ಮೀರಿದ ಸಹಜತೆಯನ್ನು ತರುವಲ್ಲಿ ನಿರ್ದೇಶಕನ ಸೂಕ್ಷ್ಮಗ್ರಾಹಿತ್ವ ಕೆಲಸ ಮಾಡಿದೆ. ಆದ್ದರಿಂದ ಈ ನಾಟಕವನ್ನೊಂದು ರಂಗ ಕೃತಿಯಾಗಿಸುವಲ್ಲಿ ನಿರ್ದೇಶಕ ಸಫಲರಾಗಿದ್ದಾರೆ.

ನಟನೆ: ಈ ನಾಟಕ ಕೇವಲ ಒಂದು ಪ್ರಯೋಗ ಮಾತ್ರವಾಗಿ ಉಳಿಯದೇ ಅದೊಂದು ನಟನಾ ಕೌಶಲದ ಭಾಗವಾಗಿಯೂ ಮೂಡಿ ಬಂದಿದೆ. ಹಿರಿಯ ಸಲೀಂ ಅಲಿ (ಡಾ.ಆರ್.ಚಲಪತಿ)ಯ ಪಾತ್ರದ ನಟನೆಯಂತೂ ೨೫ವರ್ಷಗಳ ಹಿಂದೆ ತೀರಿಕೊಂಡ ಸಲೀಂ ಅಲಿಯೇ ಎದ್ದು ಬಂದಂತೆ ಭಾಸವಾಯಿತು. ಓರ್ವ ಪ್ರಜ್ಞಾವಂತ ನಟ ಮಾತ್ರ ಪಾತ್ರದೊಳಗೆ ಸೇರಿ ನಟಿಸಬಲ್ಲ. ಅದನ್ನು ಈ ಪಾತ್ರದಲ್ಲಿ ಕಾಣಬಹುದು.

ಈ ಪಾತ್ರಕ್ಕೆ ಸಾಥ್ ನೀಡಿದವರು ಡೇನಿಯಲ್ (ಬರ್ಟಿ ಒಲೆವಿರಾ). ನೀರಸವಾಗಬಹುದಾದ ಸಂಭಾಷಣೆಗೆ ಜೀವ ತುಂಬಿ ನಾಟಕದುದ್ದಕ್ಕೂ ಉತ್ಸಾಹವನ್ನು ಜೀವಂತವಾಗಿಸಿಟ್ಟ ಪಾತ್ರವಿದು. ಎರಡು ಕಾರ್ಯಗಳನ್ನು(ನಿರ್ದೇಶನ ಮತ್ತು ನಟನೆ) ಮಾಡಿದ ಡೇನಿಯಲ್ ಪಾತ್ರವನ್ನು ಇಲ್ಲಿ ಅಭಿನಂದಿಸಲೇಬೇಕು.

ಮಧ್ಯ ವಯಸ್ಕ ಸಲೀಂ ಅಲಿ (ಡಾ.ಎಂ.ಸಿ.ಮನೋಹರ) ಪಾತ್ರದಲ್ಲೇ ಒಂದಷ್ಟು ರೊಮ್ಯಾಂಟಿಕ್ ಇದ್ದರೂ ಗಂಭೀರತೆಯ ಎಲ್ಲೆಯನ್ನು ಮೀರದ ಸೂಕ್ಷ್ಮತೆಯನ್ನು ಪ್ರದರ್ಶಿಸಿದ್ದಾರೆ. ನಾಟಕದ ರಚನೆ ಇವರದೇ ಆಗಿರುವುದರಿಂದ ಅರ್ಥೈಸಿಕೊಂಡೇ ನಟಿಸಿದ್ದಾರೆ.

ಸಲೀಂ ಪತ್ನಿ ತೆಹಮಿನಾ(ಸರಳ ನಟರಾಜ್)ರ ನಟನೆಯಲ್ಲಿ ಸಹಜತೆ ಮತ್ತು ಆಪ್ತತೆ ಇತ್ತು. ಇದು ರಂಗಕ್ಕೊಂದು ಲವಲವಿಕೆಯನ್ನೂ ತಂದಿತ್ತು. ಉಳಿದಂತೆ ರಂಗ ವೈವಿಧ್ಯತೆಗೆ ಪೂರಕವೆಂಬಂತೆ ಹವ್ಯಾಸಿ ಗುಣವನ್ನೂ ಮೀರಿದ ಮಿಸ್.ಕೆ ಮತ್ತು ಪತ್ರಕರ್ತೆ(ಸೀಮಂತಿನಿ ಬಿ) ಮಿಲ್ಲಾರ್ಡ್ ಮತ್ತು ಪತ್ರಕರ್ತ(ನಾಗರಾಜ್) ಅಬ್ಬಾಸ್ ತ್ಯಾಬ್ ಜೀ(ಪ್ರಸಾದ್ ಬಾಬು) ಹಾಗೂ  ಬಾಲಕ ಸಲೀ ಅಲಿ ಮತ್ತು ಪಿಎಚ್.ಡಿ ವಿದ್ಯಾರ್ಥಿ (ತೇಜಸ್.ಎಸ್) ಇಷ್ಟಪಡುವಂತೆ ನಟಿಸಿದ್ದಾರೆ.

ಒಟ್ಟಿನಲ್ಲಿ ವರ್ಷಕ್ಕೆ ಒಂದೆರಡು ಪಾತ್ರಗಳನ್ನು ನಟಿಸುವ ಈ ಕಲಾವಿದರು ಈ ನಾಟಕದ ಮೂಲಕ ತಮ್ಮ ಪರಿಪೂರ್ಣ ಶ್ರಮ ಮತ್ತು ಪ್ರತಿಭೆಯನ್ನು ಮತ್ತೆ ಒರೆಗೆ ಹಚ್ಚಿ ಉತ್ತಮ ಪ್ರತಿಫಲವನ್ನೇ ಪಡೆದಿದ್ದಾರೆ.

ರಂಗ ಸಜ್ಜಿಕೆ ನಾಟಕದ ಅಭಿವ್ಯಕ್ತಿಗೆ ಅನುರೂಪವಾದ ಸಂಗೀತ(ಸಾಯಿಶಿವ), ರಂಗ ಮತ್ತು ಬೆಳಕಿನ ವಿನ್ಯಾಸ (ಯತೀಶ್ ಎನ್. ಕೊಳ್ಳೇಗಾಲ), ರಂಗ ಪರಿಕರ(ಕಾಜು), ವಸ್ತ್ರ ವಿನ್ಯಾಸ(ಜೆ.ರಜನಿ), ಸಂಗೀತ ನಿರ್ವಹಣೆ(ಎಂ.ಸಿ.ಗಿರಿಧರ), ಪ್ರಸಾಧನ(ರಂಗನಾಥ್) ಕಂಡು ಬಂದಿದೆ.

ಈ ಮಧ್ಯೆ ಪರಿಸರವನ್ನು ಪ್ರೀತಿಸುವ, ಆ ಮೂಲಕ ಸಲೀಂ ಅಲಿಯವರನ್ನು ಗೌರವಿಸುವ, ಜೊತೆಗೆ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ನಾಟಕ ‘ಸಲೀಂ ಅಲಿ ಪಕ್ಷಿ ಲೋಕದ ಬೆ

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago