ಓದುಗರ ಪತ್ರ

ಓದುಗರ ಪತ್ರ | ತಿ. ನರಸೀಪುರ ಕುಂಭಮೇಳ ಜನ ಸ್ನೇಹಿಯಾಗಿರಲಿ

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ೩೦ ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ಸರ್ಕಾರ ದುರಂತದ ನಂತರ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿದೆ. ಇದು ‘ಕೊಳ್ಳೆ ಹೊಡೆದು ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು’ ಎಂಬ ಮಾತಿನಂತಿದೆ. ಇದೇ -ಬ್ರವರಿ ೧೦ರಿಂದ ೧೨ರ ವರೆಗೆ ಮೈಸೂರು ಜಿಲ್ಲೆ ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕೂಡ ಕುಂಭಮೇಳ ನಡೆಯಲಿದ್ದು, ಕುಂಭಮೇಳದಲ್ಲಿ ಪಾಲ್ಗೊಳ್ಳುವ ಜನರ ಸುರಕ್ಷತೆಗೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಒಟ್ಟಾರೆ ಈ ಮೇಳ ಜನಸ್ನೇಹಿಯಾಗಿರಬೇಕು.

ಧಾರ್ಮಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಇರುತ್ತಾರೆ. ಆದರೆ, ಮಕ್ಕಳು, ಸೀಯರು ಮತ್ತು ವಯೋವೃದ್ಧರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಕುಂಭಮೇಳ ನಡೆಯಲಿರುವ ಮೂರು ದಿನಗಳೂ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಇವರಲ್ಲದೆ, ಹಲವು ವ್ಯಾಪಾರಿಗಳು, ಆಟಿಕೆಗಳನ್ನು ಮಾರುವವರು ದೊಡ್ಡ ಸಂಖ್ಯೆಯಲ್ಲೇ ಪಾಲ್ಗೊಳ್ಳುತ್ತಾರೆ. ಅವರಿಗೆ ಇಂತಹ ಮೇಳಗಳು ಹೊಟ್ಟೆಪಾಡಿನ ಮಾರ್ಗಗಳಾಗಿರುತ್ತವೆ. ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಏಕೆಂದರೆ ಅವರೆಲ್ಲ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಮುಖ್ಯವಾಗಿ ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಕುಂಭಮೇಳ ಮುಗಿಸಿ ಎಲ್ಲರೂ ಸಂಭ್ರಮ, ನೆನಪುಗಳೊಂದಿಗೆ ಸ್ವಸ್ಥಾನಗಳಿಗೆ ಹಿಂದಿರುಗುವಂತಾಗಬೇಕು. ಈ ಸಂಬಂಧ ಜಿಲ್ಲಾಡಳಿತ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು.

-ಜಿ. ಎಸ್. ಪವನ್, ಗಾಂಧಿನಗರ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮ.ಬೆಟ್ಟ | ಅಪರಿಚಿತ ವಾಹನ ಡಿಕ್ಕಿ : ಜಿಂಕೆ ಸಾವು

ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…

15 mins ago

ಹನೂರು | ಚಿನ್ನ ನಿಕ್ಷೇಪದ ಶಂಕೆ ; ಗುಡ್ಡವನ್ನೇ ಅಗೆದ ಕಿಡಿಗೇಡಿಗಳು

ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್‌ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ…

28 mins ago

ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ಆರಂಭ : ವರ್ಣರಂಜಿತ ಚಾಲನೆ

ಮೈಸೂರು : ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಮುನ್ನುಡಿಯಾಗಿ ಅರಮನೆ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ವರ್ಣರಂಜಿತವಾಗಿ ಆರಂಭಗೊಂಡಿದೆ. ಮೈಸೂರು…

31 mins ago

ಜೋಹಾನ್ಸ್‌ಬರ್ಗ್‌ನಲ್ಲಿ ಗುಂಡಿನ ದಾಳಿ : 10 ಮಂದಿ ಸಾವು, 10 ಜನರಿಗೆ ಗಾಯ

ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಸಾಮೂಹಿಕ ಗುಂಡಿನ…

36 mins ago

ಎಚ್.ಡಿ.ಕೋಟೆ | ಪಟ್ಟಣಕ್ಕೆ ಬಂದ ಚಿರತೆ : ಮೇಕೆ ಬಲಿ ; ಜನರಲ್ಲಿ ಆತಂಕ

ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್‌ ನಂಬರ್‌ 21ರ…

49 mins ago

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…

2 hours ago