ಓದುಗರ ಪತ್ರ

ಓದುಗರ ಪತ್ರ | ಸ್ಪೇನ್ ದೇಶದ ನಿಲುವು ಅನುಕರಣೀಯ

ಇಸ್ರೇಲ್-ಅಮೆರಿಕ ಜತೆಗೂಡಿ ಇರಾನ್ ವಿರುದ್ಧ ಸಮರ ಸಾರಿ 12ದಿನಗಳು ಕಳೆದಿದ್ದು, ಈ ಯುದ್ಧದಿಂದಾಗಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚುತ್ತಿದೆ. ಜಾಗತಿಕ ಶಾಂತಿದೂತನಾದ ವಿಶ್ವ ಸಂಸ್ಥೆಯ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಈ ಬೇಡದ ಯುದ್ಧದಿಂದಾಗಿ ಇಡೀ ವಿಶ್ವವೇ ಪರಿತಪಿಸುವಂತಾಗಿದೆ. ಮತ್ತೊಂದು ಕಡೆ, ತೈಲ ಬೆಲೆಗಳು ಕ್ರಮೇಣ ಏರಲು ಪ್ರಾರಂಭವಾಗಿದೆ. ಈ ಎಲ್ಲದರ ಮಧ್ಯೆ ಸ್ಪೇನ್ ದೇಶ ಯುದ್ಧದ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವು ಐತಿಹಾಸಿಕವಾಗಿದೆ.

ಯಾವುದೇ ಕಾರಣಕ್ಕೂ ತನ್ನ ದೇಶದ ವಾಯು ನೆಲೆಗಳನ್ನು ಯುದ್ಧದ ಉದೇಶಕಾಗಿ ಬಳಸಲು ಅನುಮತಿ 9 ನೀಡುವುದಿಲ್ಲ ಹಾಗೂ ಅಂತಹ ಯುದ್ಧಕ್ಕೆ ಸಹಕಾರ ನೀಡುವುದಿಲ್ಲ ಎಂಬ ಆ ದೇಶದ ನಿರ್ಣಯ ಸ್ವಾಗತಾರ್ಹವಾಗಿದೆ. ಇದು ಕೇವಲ ರಾಜತಾಂತ್ರಿಕ ನಿಲುವಲ್ಲ, ಬದಲಿಗೆ ಮಾನವತೆಯ ದನಿ ಎಂದು ಹೇಳಿರುವ ಆ ದೇಶದ ಪ್ರಧಾನ ಮಂತ್ರಿ ಪೆಡೋ ಸ್ಟಾಂಚೆಟ್ ಭೂಮಿಗೆ ಮತ್ತು ಮನುಕುಲಕ್ಕೆ ಅಪಾಯ ತಂದೊಡ್ಡುವ ಯಾವುದೇ ರೀತಿಯ ಯುದ್ಧೋನ್ಮಾನದ ಕಾರ್ಯಗಳನ್ನು ತಾನು ಬೆಂಬಲಿಸುವುದಿಲ್ಲ ಎಂಬ ಅವರ ಹೇಳಿಕೆ ಮಾನವತೆಯ ಪ್ರತಿಬಿಂಬವಾಗಿದೆ. ಯುದ್ಧ ಎಂದಿದ್ದರೂ ವಿನಾಶಕಾರಿ, ಅದರಿಂದ ದೊರೆಯುವ ಲಾಭ ದೀರ್ಘ ಕಾಲ ಉಳಿಯಲಾರದು. ಇದನ್ನು ಅರ್ಥ ಮಾಡಿಕೊಂಡಿರುವ ಸ್ಪೇನ್ ದೇಶದ ಪ್ರಧಾನ ಮಂತ್ರಿ ನಿಲುವು ಅನುಕರಣೀಯ.

-ಕೆ. ವಿ. ವಾಸು, ವಿವೇಕಾನಂದ ನಗರ, ಮೈಸೂರು

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಂಡ್ಯ ಕೋರ್ಟ್‌ಗೆ ಮತ್ತೆ ಬಾಂಬ್ ಬೆದರಿಕೆ : ಸ್ಥಳಕ್ಕೆ ಪೊಲೀಸ್-ಬಾಂಬ್ ಸ್ಕ್ವಾಡ್ ದೌಡು

ಮಂಡ್ಯ : ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದ್ದು, ಇ-ಮೇಲ್ ಮೂಲಕ “ಕೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಎಂದು…

37 mins ago

ಯುದ್ಧ ನಿಲ್ಲಿಸಲು 3 ಷರತ್ತು ಮುಂದಿಟ್ಟ ಇರಾನ್‌!

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕಾ ಹಾಗೂ ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು…

48 mins ago

ಅಮೆರಿಕ ತೈಲ ಟ್ಯಾಂಕರ್ ಮೇಲೆ ಇರಾನ್ ಡ್ರೋನ್ ದಾಳಿ, ಭಾರತೀಯ ನಾವಿಕ ಸಾವು

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಉದ್ವಿಗ್ನವಾಗುತ್ತಿದೆ. ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ…

1 hour ago

ವಿಶ್ವಕಪ್‌ ಗೆದ್ದ ಬಳಿಕ ರೈಲು ಹತ್ತಿ ಬಂದ ಶಿವಂ ದುಬೆ!

ಮುಂಬೈ : ಭಾರತ ತಂಡ ಟಿ20 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್‌ನ್ನು 96 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ…

1 hour ago

ಫಾರುಕ್ ಹತ್ಯೆ ಯತ್ನ : ಆರೋಪಿ ಕಮಲ್‌ ಸಿಂಗ್‌ ಹೇಳಿದ್ದೇನು?

ಜಮ್ಮು : ರಾಷ್ಟ್ರೀಯ ಸಮ್ಮೇಳನ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಫಾರುಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಸಂಜೆ…

2 hours ago

ಅಡುಗೆ ಅನಿಲ ಕೊರತೆ ; ಸಂಸದರು ಬಾಯಿ ಬಿಡಬೇಕು ; ಡಿ.ಕೆ.ಶಿವಕುಮಾರ್‌

ಬೆಂಗಳೂರು : ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು…

2 hours ago