ಮೈಸೂರಿನ ಕೆಆರ್‌ಎಸ್ ರಸ್ತೆ ಅಥವಾ ಪ್ರಿನ್ಸೆಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ರಸ್ತೆ‘ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸೂಕ್ತವಲ್ಲ ಅನಿಸುತ್ತದೆ.
ಮೊದಲನೆಯದಾಗಿ ಜೀವಂತವಿರುವ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಸ್ವಲ್ಪವೂ ಸರಿ ಇಲ್ಲ. ಈ ಬಲವಂತದ ನಾಮಕರಣದ ಬಗ್ಗೆ ಜನ ಏನೇ ಹೇಳಿದರೂ ಇದು ಅರಸೊತ್ತಿಗೆಯ ಬಗ್ಗೆ ಅದಮ್ಯ ಪ್ರೀತಿ, ಗೌರವವಿರುವ ಮೈಸೂರಿಗರಿಗೆ ಬಗೆಯುವ ದ್ರೋಹ ಎಂದೇ ಹೇಳಬೇಕಾಗುತ್ತದೆ. ಡಿವಿಜಿಯವರ ಕುರಿತಾದ ಪ್ರಸಂಗವೊಂದು ನೆನಪಿಗೆ ಬರುತ್ತದೆ. ಒಮ್ಮೆ ಡಿವಿಜಿಯವರಿಗೆ ಸರ್ಕಾರ ದೊಡ್ಡ ಪ್ರಶಸ್ತಿಯೊಂದನ್ನು ನೀಡಿರುತ್ತದೆ. ಈ ಸಮಯದಲ್ಲಿ ಡಿವಿಜಿಯವರ ಅಭಿಮಾನಿಗಳು, ಅವರ ಮನೆಗೆ ತೆರಳಿ ‘ನಿಮ್ಮ ಮನೆಯ ಮುಂದಿನ ರಸ್ತೆಗೆ ನಿಮ್ಮ ಹೆಸರಿಡಬೇಕೆಂದಿದ್ದೇವೆ‘ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆಗ ಬಹಳ ಸಂಕೋಚದಿಂದ ಡಿವಿಜಿಯವರು, ‘ಅಯ್ಯಾ. . . ನನ್ನ ಪಾಡಿಗೆ ನಾನು ಹೇಗೋ ಮರ್ಯಾದೆಯಿಂದ ಮನೆಯೊಳಗೆ ಜೀವಿಸುತ್ತಿದ್ದೇನೆ. ದಯಮಾಡಿ ಬೀದಿಗೆ ನನ್ನ ಹೆಸರಿಟ್ಟು, ನನ್ನನ್ನು ಎಲ್ಲರೂ ತುಳಿಯುವಂತೆ ಮತ್ತು ಎಳೆದಾಡುವಂತೆ ಮಾಡಬೇಡಿರಿ’ ಎಂದು ವಿನಂತಿಸಿದರಂತೆ. ಆ ಮೂಲಕ ಅವರ ಅಭಿಮಾನಿಗಳ ಪ್ರೀತಿಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರಂತೆ. ಈ ಬಗೆಯ ನಿರ್ಲಿಪ್ತ ಮನಃಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪ್ರದರ್ಶಿಸಬಲ್ಲರೆ? ಕಾದು ನೋಡೋಣ.
-ನಾಗಮಂಗಲ ನರಸಿಂಹ ಮೂರ್ತಿ, ಮೈಸೂರು.
ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…
ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…
ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…
ಮೈಸೂರಿನ ವಿವಿಧ ವೃತ್ತಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದಾರೆ. ಆದರೆ ಚಾಮರಾಜಪುರಂನ ನ್ಯಾಯಾಲಯದ ಬಳಿ ವಾಹನ ಸಂಚಾರ ಹೆಚ್ಚಾಗಿದ್ದು, ನ್ಯಾಯಾಲಯದ…
ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು…
ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ…