ಓದುಗರ ಪತ್ರ
ರಾಜ್ಯದ ಜಲಮೂಲಗಳ ಸ್ಥಿತಿ ಇಂದು ಶೋಚನೀಯವಾಗಿದೆ. ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಅತಿಕ್ರಮಣದಿಂದಾಗಿ ನಗರ ಪ್ರದೇಶದ ಕೆರೆಗಳ ವಿಸ್ತೀರ್ಣ ಶೇ.60ರಷ್ಟು ಕುಗ್ಗಿದೆ. ಈ ಹಿನ್ನೆಲೆಯಲ್ಲಿ ಜಿಯೋ ಫೆನ್ಸಿಂಗ್ ಮತ್ತು ಮಾಹಿತಿ ಫಲಕಗಳ ಅಳವಡಿಕೆ ಕೇವಲ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ಕೆರೆಗಳ ಉಳಿವಿಗಾಗಿ ಇರುವ ಡಿಜಿಟಲ್ ಕವಚ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಅಡಿಯಲ್ಲಿ ಕೆರೆಗಳಿಗೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ ಅನುಷ್ಠಾನದಲ್ಲಿ ಹಿನ್ನಡೆಯಾಗುತ್ತಿದೆ. ರಾಜ್ಯ ಸರ್ಕಾರವು ಕೂಡಲೇ ಎಲ್ಲಾ ಕೆರೆಗಳ ನಕ್ಷೆಯನ್ನು ‘ದಿಶಾಂಕ್’ ಅಪ್ಲಿಕೇಶನ್‌ನಲ್ಲಿ ಕಡ್ಡಾಯವಾಗಿ ಅಪ್ಲೇಟ್ ಮಾಡಬೇಕು. ಹೀಗಾಗಿ ಪ್ರತಿ ಕೆರೆಯ ಬದಿಯಲ್ಲಿ ಸರ್ವೆ ನಂಬ ವಿಸ್ತೀರ್ಣ ಮತ್ತು ಅತಿಕ್ರಮಣ ಮಾಡಿದರೆ ಆಗುವ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ಫಲಕ ಹಾಕುವುದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಕೆರೆ ಸಂರಕ್ಷಣೆ ಎಂಬುದು ಕೇವಲ ಒಂದು ಇಲಾಖೆಯ ಕೆಲಸವಾಗದೆ ಜನ ಚಳವಳಿಯಾಗಬೇಕಿದೆ.
ಡಾ. ಎಚ್.ಕೆ. ವಿಜಯಕುಮಾರ, ಬೆಂಗಳೂರು
ಜೆರುಸೇಲಂ: ಬಂದರ್ ಅಬ್ಬಾಸ್‌ನಲ್ಲಿ ಅಮೇರಿಕಾ-ಇಸ್ರೇಲಿ ದಾಳಿಯಲ್ಲಿ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್ ಕಾಪ್ಸ್ ನೌಕಾ ಕಮಾಂಡರ್ ಅಲಿರೆಜಾ ತಂಗ್ ಸಿರಿ ಮೃತಪಟ್ಟಿದ್ದಾರೆ.…
ಬೆಂಗಳೂರು: ಮೈಸೂರು ಮುಡಾ ಅಕ್ರಮ ಸೈಟ್ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ…
ಉಡುಪಿ : ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು…
ಮೈಸೂರು : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಮಳೆ ಏ.1ರವರೆಗೆ ಮುಂದುವರಿಯಲಿದೆ ಎಂದು…
ಹೊಸದಿಲ್ಲಿ : ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ…
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ 16,700 ಕೋಟಿಗೆ ಖರೀದಿಸಿದ ಬಳಿಕ…