ಓದುಗರ ಪತ್ರ

ಓದುಗರ ಪತ್ರ | ನಕ್ಸಲಿಸಂ ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಲಿ

ಸಮಾಜದಲ್ಲಿ ಎಲ್ಲ ಜನರೂ ಬಡವ, ಬಲ್ಲಿದ ವ್ಯತ್ಯಾಸ ಇಲ್ಲದೆ ಬದುಕುವಂತಾಗಬೇಕು. ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನತೆ ಇರಬೇಕು ಎಂದು ಪರಿಭಾವಿಸಿದ ಯುವಜನರು ಜನಪ್ರತಿನಿಧಿಗಳಲ್ಲಿ ನಂಬಿಕೆ ಕಳೆದುಕೊಂಡು, ಹೋರಾಟದ ದಾರಿಯನ್ನು ಆಯ್ದುಕೊಳ್ಳುವ ಮೂಲಕ ನಕ್ಸಲೈಟ್‌ಗಳಾಗಿದ್ದಾರೆ. ಇದೀಗ ಆರು ಮಂದಿ ನಕ್ಸಲರು ಶರಣಾಗತಿಯಾಗುವ ಮೂಲಕ ಮುಖ್ಯವಾಹಿನಿಗೆ ಸೇರಿದ್ದಾರೆ. ಸರ್ಕಾರ ಇವರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು.

ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಆರೂ ಜನರು, ಶಿಕ್ಷೆ ಅನುಭವಿಸಿ ಹಿಂದಿರುಗಿದ ನಂತರ ಭ್ರಮನಿರಸನಕ್ಕೊಳಗಾಗದಂತೆ ಎಚ್ಚರವಹಿಸಬೇಕು. ಅವರಿಗೆ ಪುನರ್ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಇಲ್ಲದಿದ್ದರೆ, ಅವರಿಂದ ಸ್ಛೂರ್ತಿಗೊಂಡಿರಬಹುದಾದ ಯುವಜನರು ನಕ್ಸಲಿಸಂ ಹಾದಿ ತುಳಿಯಬಹುದು. ಹಾಗಾಗಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅತ್ಯಂತ ಸೂಕ್ಷ ವಾಗಿ ಹೆಜ್ಜೆ ಇಡಬೇಕು.
-ಎಸ್.ಚಂದ್ರಚೂಡ, ಸರಸ್ವತಿಪುರಂ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

1.65 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಬೆಳಕು

ಆಂದೋಲನ ವಿಶೇಷ ಸಂದರ್ಶನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೆಮ್ಮೆಯ ನುಡಿ ಆಂದೋಲನ: ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದು,…

17 seconds ago

‘ನಾನು ಬೆಳೆಸಿದ ಕಾಡಿನಲ್ಲಿ ನನಗೆ ವಾಸಕ್ಕೆ ಜಾಗ ಇಲ್ವಾ?’

ಮಂಜು ಕೋಟೆ ೪೦ ವರ್ಷಗಳ ಕಾಲ ಆದಿವಾಸಿಗಳ ಪರ ಹೋರಾಟ ನಡೆಸಿದ ದಿಟ್ಟ ಮಹಿಳೆ ಸೋಮಮ್ಮ ಇನ್ನು ನೆನಪು ಮಾತ್ರ…

7 mins ago

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಬಿಗ್‌ ಶಾಕ್‌

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…

10 hours ago

ಟಿ.ನರಸೀಪುರ| ಆನೆ ದಾಳಿಗೆ ರೈತ ಬಲಿ

ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್‌ ಠಾಣೆ ವ್ಯಾಪ್ತಿಯ…

13 hours ago

ಮೈಸೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

14 hours ago