ಓದುಗರ ಪತ್ರ

ಓದುಗರ ಪತ್ರ| ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಿ

ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣದ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಪ್ರತಿಮೆ ನಿರ್ಮಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಶೀಘ್ರ ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಪ್ರತಿಮೆ ನಿರ್ಮಾಣದ ಕಾಮಗಾರಿಯು ಇಷ್ಟು ತಡವಾಗಲು ಕಾರಣವಾದರೂ ಏನು? ಈ ಬಗ್ಗೆ ಗುತ್ತಿಗೆದಾರರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ.

ಇಲ್ಲವಾದರೆ ಕಾಮಗಾರಿಯನ್ನು ಚುರುಕುಗೊಳಿಸಿ ಮುಂದಿನ ಜನವರಿಯಲ್ಲಿ ನಡೆಯುವ ವಿವೇಕಾನಂದರ ಜಯಂತ್ಯುತ್ಸವದ ವೇಳೆಗಾದರೂ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರತಿಮೆಯನ್ನು ಅನಾವರಣ ಮಾಡಬೇಕಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸಿಲಿಂಡರ್‌ ಬುಕ್ಕಿಂಗ್‌ನಲ್ಲಿ ಗೊಂದಲ, ಗ್ರಾಹಕರ ಪರದಾಟ

ಕೆ. ಬಿ. ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯದೇಶಗಳಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೇಂದ್ರ ಸರ್ಕಾರ…

18 seconds ago

ವಾಣಿಜ್ಯ ಸಿಲಿಂಡರ್‌ | ಒಂದೇ ತಿಂಗಳಲ್ಲಿ 3 ಬಾರಿ ದರ ಹೆಚ್ಚಳ

ಚಿರಂಜೀವಿ ಸಿ ಹುಲ್ಲಹಳ್ಳಿ ಮೈಸೂರು: ‘ಎತ್ತಿಗೆ ಜ್ವರ, ಎಮ್ಮೆಗೆ ಬರೆ’ ಎಂಬಂತೆ, ಮಧ್ಯ ಪ್ರಾಚ್ಯದಲ್ಲಿ ಸಮರ ನಡೆಯುತ್ತಿದ್ದರೆ ಭಾರತದಲ್ಲಿ ಜನಸಾಮಾನ್ಯರ…

4 mins ago

ವಿದೇಶದಲ್ಲಿ ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ

ಮೈಸೂರು : ಜಿಐ ಟ್ಯಾಗ್ ಹೊಂದಿರುವ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಪ್ರಸ್ತುತ ಜಪಾನ್, ಮಾಲ್ಡೀವ್ಸ್ ದೇಶಗಳಿಗೆ ರಫ್ತಾಗುತ್ತಿದ್ದು, ಬಾಂಗ್ಲಾದೇಶದಿಂದಲೂ…

8 mins ago

ಮೈಸೂರು ಮಹಾನಗರ ಪಾಲಿಕೆಯಿಂದ ಉಪ ಕರ ಜಾರಿ ; ವಾಹನ ಮಾಲೀಕರಿಗೆ ಹೊರೆ

ಹೆಚ್.ಎಸ್.ದಿನೇಶ್‌ ಕುಮಾರ್ ಮೈಸೂರು : ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಏನೆಲ್ಲ ದಾರಿಗಳನ್ನು ಹುಡುಕಬಹುದು ಎಂಬುದನ್ನು ನಗರಪಾಲಿಕೆ ಅಧಿಕಾರಿಗಳು…

10 mins ago

ಹುಣಸೂರು ಮಾದಕ ವಸ್ತು ಪ್ರಕರಣ ; ಮುಂಬೈಗೆ ತೆರಳಿದ ಪೊಲೀಸರ ತಂಡ

ಹುಣಸೂರು ; ತೋಟದ ಮನೆಯಲ್ಲಿ ಮಾದಕ ವಸ್ತು ವಶ ಪ್ರಕರಣ ಮೈಸೂರು : ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೋಟ್ಯಂತರ…

17 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 3 ಶುಕ್ರವಾರ

20 mins ago