Andolana originals

ಸಿಲಿಂಡರ್‌ ಬುಕ್ಕಿಂಗ್‌ನಲ್ಲಿ ಗೊಂದಲ, ಗ್ರಾಹಕರ ಪರದಾಟ

ಕೆ. ಬಿ. ರಮೇಶ ನಾಯಕ

ಮೈಸೂರು : ಮಧ್ಯಪ್ರಾಚ್ಯದೇಶಗಳಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸುವ ವಿಚಾರದಲ್ಲಿ ತೈಲ ಕಂಪೆನಿಗಳು ಮೂಡಿಸುತ್ತಿರುವ ಗೊಂದಲದಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಅಗತ್ಯವಿರುವಷ್ಟು ಎಲ್ ಪಿಜಿ ಸಿಲಿಂಡರ್ ಲಭ್ಯವಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳುತ್ತಲೇ ಇದ್ದರೂ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ನೋ ರೆಸ್ಪಾನ್ಸ್ ದೊರೆಯುತ್ತಿದೆ.

ಇದರಿಂದಾಗಿ, ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ನಡೆಸುತ್ತಿರುವ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ತಡೆಯಲು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಿತ್ತಾದರೂ ನಂತರ ಶೇ. ೨೦ರಷ್ಟು ಪೂರೈಕೆಗೆ ಸಮ್ಮತಿಸಿತ್ತು. ನಂತರ, ಈ ಪ್ರಮಾಣವನ್ನು ಶೇ. ೭೦ಕ್ಕೆ ಹೆಚ್ಚಿಸುವ ಮಾತನ್ನಾಡಿತ್ತು. ಅದೇ ರೀತಿ ಗೃಹಬಳಕೆಯ ಸಿಲಿಂಡರ್‌ಗಳನ್ನು ನಗರ ಪ್ರದೇಶದಲ್ಲಿ ೨೫ ದಿನಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೩೫ ದಿನಗಳು ಕಳೆದ ನಂತರ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಗೃಹ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದರು. ಆದರೆ,ಇದೀಗ ಗ್ರಾಮಾಂತರ ಪ್ರದೇಶದಲ್ಲಿ ೪೫ ದಿನಗಳಿಗೆ ಒಂದು ಸಿಲಿಂಡರ್ ಎನ್ನುವುದನ್ನು ಘೋಷಣೆ ಮಾಡಲಾಗಿದೆ. ಇದೀಗ ನಗರ ಪ್ರದೇಶದ ಗೃಹ ಬಳಕೆದಾರರು ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಂದಾದರೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಗ್ರಾಹಕರಿಗೆ ಗೊಂದಲ ಉಂಟು ಮಾಡಿದೆ. ಕೇಂದ್ರದ ಮಾರ್ಗಸೂಚಿಯಂತೆ ೨೫ ದಿನಗಳನ್ನು ಕಳೆದಿರುವ ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ಬುಕ್ಕಿಂಗ್ ಮಾಡಲು ಮುಂದಾದರೆ ಸಾಧ್ಯವಾಗುತ್ತಿಲ್ಲ.

ಗ್ರಾಹಕರೊಬ್ಬರಿಗೆ ಫೆ.೨೬ರಂದು ಸಿಲಿಂಡರ್ ವಿತರಣೆ ಮಾಡಲಾಗಿದ್ದು, ಮಾ. ೨೪ರ ಬಳಿಕ ಬುಕ್ಕಿಂಗ್ ಮಾಡುವಂತೆ ಸಂದೇಶ ಬಂದಿತ್ತು. ಅದರಂತೆ, ಮಾ. ೨೫ರಂದು ಬುಕ್ಕಿಂಗ್ ಮಾಡಲು ಯತ್ನಿಸಿದಾಗ ನೀವು ಏಪ್ರಿಲ್ ೩ರಂದು ನಿಮ್ಮ ಬುಕ್ಕಿಂಗ್ ಲಭ್ಯವಿದೆ ಎನ್ನುವ ಸಂದೇಶ ಬರುತ್ತಿದೆ. ಇದನ್ನು ಗಮನಿಸಿದಾಗ ಬುಕ್ಕಿಂಗ್ ಅವಧಿಯನ್ನು ೩೫ ದಿನಗಳಿಗೆ ವಿಸ್ತರಿಸಿರುವುದು ಕಂಡು ಬರುತ್ತಿದೆ. ಇದೇ ರೀತಿ ೨೫ ದಿನಗಳ ಅವಧಿ ಕಳೆದಿರುವ ಹಲವಾರು ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಯತ್ನಿಸಿದಾಗ ನಿಮ್ಮ ಅವಧಿಯ ಸಮಯವನ್ನು ಕಾಯಬೇಕು. ಮುಂದಿನ ದಿನದಂದು ಬುಕ್ಕಿಂಗ್ ಮಾಡುವಂತೆ ಸಂದೇಶ ಬರುತ್ತಿದೆ. ಇದರಿಂದಾಗಿ, ಅನೇಕ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದಾರೆ. ಹಲವರು ಸರ್ವರ್ ಸಮಸ್ಯೆ ಇರಬಹುದೆಂದು ಹೇಳಿ ರಾತ್ರಿ ೧೦ ಗಂಟೆಯ ಮೇಲೆ ಬುಕ್ಕಿಂಗ್ ಗೆ ಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಬಹುಬೇಗನೆ ಗ್ಯಾಸ್ ಖಾಲಿ ಆದ ಗ್ರಾಹಕರು ಸಿಲಿಂಡರ್‌ಗಾಗಿ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತಿರುವುದು ಅಲ್ಲಲ್ಲಿ ನಡೆದಿದೆ.

ಕೇಂದ್ರಸರ್ಕಾರ ೨೫ದಿನಗಳ ಅವಧಿ ಮುಗಿದ ಬಳಿಕ ಬುಕ್ಕಿಂಗ್ ಮಾಡಲು ಅವಕಾಶ ಇದೆ ಎನ್ನುವುದನ್ನು ಹೇಳಿದ್ದರೂ ತೈಲ ಕಂಪೆನಿಗಳು ಒಪ್ಪಿಲ್ಲ. ಒಂದು ವೇಳೆ ಒಪ್ಪಿಕೊಂಡಿದ್ದರೂ ತನ್ನ ಸರ್ವರ್‌ನಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ, ತೈಲ ಕಂಪೆನಿಗಳು ಇವತ್ತಿಗೂ ೩೫ ದಿನಗಳ ತನಕ ಸಿಲಿಂಡರ್ ಪೂರೈಸಲು ಸಮಯಪಡೆಯುತ್ತಿದೆ. ಅದೇ ರೀತಿ ವರ್ಷಕ್ಕೆ ೧೨ ಸಿಲಿಂಡರ್ ದಾಟಿ,ಹೆಚ್ಚುವರಿಯಾಗಿ ಮೂರನ್ನು ಸೇರಿ ೧೫ ಸಿಲಿಂಡರ್‌ಗಳನ್ನು ಪಡೆದಿರುವ ಗ್ರಾಹಕರಿಗೆ ಬುಕ್ಕಿಂಗ್ ಆಗುತ್ತಿಲ್ಲ. ಆರು ತಿಂಗಳಿಂದ ಗ್ಯಾಸ್ ಬುಕ್ಕಿಂಗ್ ಮಾಡದೆ ಇದ್ದವರೂ ಏಕಾಏಕೀ ಬುಕ್ಕಿಂಗ್ ಮಾಡುತ್ತಿರುವುದರಿಂದ ತೆಗೆದುಕೊಳ್ಳುತ್ತಿಲ್ಲ.

ಕೆಲವರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸಂದೇಶ ರವಾನೆಯಾಗುತ್ತಿದೆ. ಕೇಂದ್ರ ಸರ್ಕಾರ ಹೇಳುವಂತೆ ನಗರ ಪ್ರದೇಶದವರಿಗೆ ೨೫ ದಿನಗಳು ಕಳೆದ ಮೇಲೆ ಬುಕ್ಕಿಂಗ್ ಆಗುತ್ತಿಲ್ಲ ಎಂದು ಎಲ್‌ಪಿಜಿ ವಿತರಕರೊಬ್ಬರು ಹೇಳಿದರು.

ನಗರ ಪ್ರದೇಶದ ೨೫ ಮತ್ತು ಗ್ರಾಮಾಂತರ ೩೫ ದಿನಗಳ ಬಳಿಕ ಗ್ಯಾಸ್ ಬುಕ್ಕಿಂಗ್‌ಗೆ ನೋ ರೆಸ್ಪಾನ್ಸ್ ಕೇಂದ್ರ ಸರ್ಕಾರ ಹೇಳಿದರೂ ೩೫ ದಿನಗಳ ತನಕ ಬುಕ್ಕಿಂಗ್ ಇಲ್ಲವೆಂದು ಮಾಹಿತಿ ರವಾನೆ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ಸಮಯ ನಿಗದಿಪಡಿಸಲಾಗಿದ್ದರೂ ೨೫ ದಿನಗಳು ಕಳೆದ ಮೇಲೆ ಬುಕ್ಕಿಂಗ್ ತೆಗೆದುಕೊಳ್ಳಲಾಗುತ್ತಿದೆ. ೩೦ ಅಥವಾ ೩೫ ದಿನಗಳು ಅಂತೇನಿಲ್ಲ. ಏನಾದರೂ ಸರ್ವರ್ ಸಮಸ್ಯೆ ಇದ್ದರೆ ತಡೆಯಾಗಬಹುದು. ಒಂದು ವೇಳೆ ೩೫ ದಿನಗಳು ಕಳೆದರೂ ಬುಕ್ಕಿಂಗ್ ಆಗಿಲ್ಲದಿರುವ ಪ್ರಕರಣಗಳು ಇದ್ದರೆ ತಮ್ಮನ್ನು ಸಂಪರ್ಕಿಸಬಹುದಾಗಿದೆ. -ಮಂಟೇಸ್ವಾಮಿ, ಜಂಟಿ ನಿರ್ದೇಶಕ, ಆಹಾರ,ನಾಗರಿಕ ಮತ್ತು ಸರಬರಾಜು ಪೂರೈಕೆ ಇಲಾಖೆ

ನಾನು ೨೫ ದಿನಗಳ ನಂತರ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಂದಾದಾಗ ೩೦ ದಿನಗಳು ಕಳೆಯಬೇಕು ಎನ್ನುವ ಮೆಸೇಜ್ ಬಂತು. ೩೦ ದಿನಗಳ ಗಡುವು ಮುಗಿದ ಮೇಲೆ ಮಾಡಿದಾಗ ಐದು ದಿನಗಳು ಬಿಟ್ಟು ಮಾಡುವಂತೆ ಹೇಳಿರುವುದನ್ನು ನೋಡಿದರೆ ೩೫ ದಿನಗಳಾಗುತ್ತಿದೆ. ನಮಗೆ ಯಾವಾಗ ಬುಕ್ಕಿಂಗ್ ಮಾಡಬೇಕು ಎಂಬುದೇ ಗೊಂದಲಕ್ಕೆ ಕಾರಣವಾಗಿದೆ. -ಶಿವಸ್ವಾಮಿ, ಎಲ್‌ಪಿಜಿ ಸಿಲಿಂಡರ್ ಗ್ರಾಹಕ

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

1 hour ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

3 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

4 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

6 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

7 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

7 hours ago