ಓದುಗರ ಪತ್ರ
ಜನಗಣತಿ ಕಾರ್ಯದಲ್ಲಿ ಗಣತಿದಾರರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಗುರುತಿನ ಚೀಟಿ ಧರಿಸಿ, ಸೌಜನ್ಯದಿಂದ ಮಾಹಿತಿ ಸಂಗ್ರಹಿಸಿ. ಮನೆ ಬಾಗಿಲು ಮುಚ್ಚಿದ್ದರೆ ಮರು ಭೇಟಿ ನೀಡಿ ಮಾಹಿತಿ ಪಡೆಯುವುದು ನಿಮ್ಮ ಬದ್ಧತೆಯಾಗಿರಲಿ. ಊಹೆಗಳಿಗೆ ಅವಕಾಶ ನೀಡದೆ ವಾಸ್ತವವನ್ನೇ ಆಪ್‌ನಲ್ಲಿ ದಾಖಲಿಸಿ ಹಾಗೂ ಜನರ ಖಾಸಗಿ ಮಾಹಿತಿಯ ಗೌಪ್ಯತೆ ಕಾಪಾಡಿ.
ಆನ್‌ಲೈನ್‌ನಲ್ಲಿ ಮಾಹಿತಿ ನೀಡಿದವರಿಂದ ರೆಫರೆನ್ಸ್ ಸಂಖ್ಯೆ ಪಡೆದು ಕೆಲಸ ಸುಲಭವಾಗಿಸಿಕೊಳ್ಳಿ. ನಾಗರಿಕರು ನಿಖರ ಮಾಹಿತಿ ನೀಡಿ ಈ ರಾಷ್ಟ್ರೀಯ ಅಭಿಯಾನವನ್ನು ಯಶಸ್ವಿ ಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಏಪ್ರಿಲ್ ೧೫ರ ವರೆಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶವಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು. ತದನಂತರ ಏಪ್ರಿಲ್ ೧೬ರಿಂದ ಒಂದು ತಿಂಗಳ ಕಾಲ ಮೊದಲ ಹಂತವಾಗಿ ಮನೆಪಟ್ಟಿ ಹಾಗೂ ಮನೆಗಣತಿ ಕಾರ್ಯ ನಡೆಯಲಿದ್ದು, ಪ್ರತಿಯೊಬ್ಬರೂ ಗಣತಿದಾರರಿಗೆ ಸಹಕರಿಸಬೇಕು. ಈ ಬಗ್ಗೆ ಕಾಲರ್ ಟ್ಯೂನ್ ಹಾಗೂ ಸ್ವಚ್ಛತಾ ವಾಹನಗಳ ಮೂಲಕ ಜಾಗೃತಿ ಮೂಡಿಸುವುದು ಅಭಿಯಾನಕ್ಕೆ ಸಹಕಾರಿಯಾಗಿದೆ. ಮುಖ್ಯವಾಗಿ, ಗಣತಿಯಿಂದ ಸರ್ಕಾರಿ ಸೌಲಭ್ಯಗಳು ಅಥವಾ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಬೇಡ. ನಿಮ್ಮ ಮಾಹಿತಿಯು ದೇಶದ ಭವಿಷ್ಯದಯೋಜನೆಗಳಿಗೆ ಮಾತ್ರ ಬಳಕೆಯಾಗಲಿದ್ದು, ಎಲ್ಲರೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳೋಣ. –ಬಿ. ಗಣೇಶ, ಕೆ. ಜಿ. ಕೊಪ್ಪಲು,
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.…
ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https:karresults.nic.in ನಲ್ಲಿ…
ಟೆಲ್‌ಅವೀವ್: ಕದನ ವಿರಾಮದ ನಡುವೆಯೂ ಲೆಬನಾನ್‌ನಲ್ಲಿ ಇಸ್ರೇಲ್ ಏರ್‌ಸ್ಟೈಕ್ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್‌ನ ಸೋದರಳಿಯ ಯೂಸುಫ್ ಹರ್ಷಿಯನ್ನು…
ಟೆಹ್ರಾನ್ : ಅಮೆರಿಕ ಮತ್ತು ಇರಾನ್ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್…
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಏಪ್ರಿಲ್.15ಕ್ಕೆ ಮುಂದೂಡಿಕೆಯಾಗಿದೆ. ಜನಪ್ರತಿನಿಧಿಗಳ ವಿಶೇಷ…
ಚಿಕ್ಕಮಗಳೂರು : ಜಿಲ್ಲೆಯ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರಕ್ಕೆ ಕುಟುಂಬದ ಜೊತೆ ಬಂದಿದ್ದ 15 ವರ್ಷದ ಬಾಲಕಿ ಶ್ರೀನಂದಾ ಇದ್ದಕ್ಕಿದ್ದಂತೆ ಆ…