ಓದುಗರ ಪತ್ರ
ಜಾತಿ ಗಣತಿ ವರದಿ ನೋಡಿದಾಗ ಇದು ಧರ್ಮ ಗಣತಿಯೋ, ಜಾತಿ ಗಣತಿಯೋ ಎನ್ನುವುದು ತಿಳಿಯುತ್ತಿಲ್ಲ. ಹಾಗಾಗಿ ಸ್ವ ಇಚ್ಛೆಯಿಂದ ಹೇಗೆ ಆಧಾರ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಲಾಗುತ್ತಿದೆಯೋ, ಅದೇ ರೀತಿ ಆಧಾರ್ ಕಾರ್ಡ್ ಮೂಲ ದಾಖಲೆಯನ್ನಾಗಿ ಅಪ್ಲೋಡ್ ಮಾಡಿ, ಜಾತಿ ಗಣತಿ ವಿವರವನ್ನು ಸ್ವ ಇಚ್ಛೆಯಿಂದ ಜನರಿಂದ ಅನ್‌ಲೈನ್‌ನಲ್ಲಿ ಅರ್ಜಿ ಹಾಕಿ ಸಲ್ಲಿಸುವಂತೆ ಪ್ರೇರೇಪಿಸಬೇಕು.
ಅನ್‌ಲೈನ್ ನಲ್ಲಿ ಹಾಕಿದ ಅರ್ಜಿಯನ್ನು ಪರಿಶೀಲಿಸಲು ಗ್ರಾಮ ಮಟ್ಟದ ಗ್ರಾ. ಪಂ. ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಪರಿಶೀಲಿಸಿ, ಅಂಗೀಕರಿಸಬೇಕು.ನಗರ ಮಟ್ಟದಲ್ಲಿ ಸ್ಥಳೀಯ ಆಡಳಿತದಿಂದ ಪರಿಶೀಲಿಸಿ ಅಂಗೀಕರಿಸಬೇಕು.
ಇದರಿಂದ ಯಾವುದೇ ರೀತಿಯ ತೊಂದರೆ, ಅಡೆ ತಡೆ ಆಗುವುದಿಲ್ಲ. ಇಲ್ಲಿ ಜಾತಿ ಗಣತಿ ಎಂದಮೇಲೆ ಧರ್ಮ ಕಾಣಿಸಬಾರದು, ಪಂಥ ಅಥವಾ ಜಾತಿ ಎಂದು ನಮೂದಿಸಬೇಕು. ಧರ್ಮ ಹೇಗೆ ಜಾತಿ ಆಗುತ್ತದೆ? ಧರ್ಮವೇ ಬೇರೆ, ಜಾತಿಯೇ ಬೇರೆ. ಹಾಗಾಗಿ ಜನರು ಸ್ವ ಇಚ್ಛೆಯಿಂದ ಜಾತಿ ಗಣತಿ ವಿವರ ಅನ್‌ಲೈನಿನಲ್ಲಿ ಸಲ್ಲಿಸಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಅಂಗೀಕರಿಸುವಂತಹ ವ್ಯವಸ್ಥೆ ಸರ್ಕಾರ ಮಾಡಬೇಕು. -ವೀರೇಶ ಧೂಪದಮಠ
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…