ಓದುಗರ ಪತ್ರ
ಮೈಸೂರಿನ ದೇವೇಗೌಡ ವೃತ್ತದ ಬಳಿ ಇರುವ ವಿದ್ಯಾ ವಿಕಾಸ್ ಕಾಲೇಜಿನ ಹಿಂಭಾಗದ ಗೇಟ್‌ನಿಂದ ವಸಂತ ನಗರ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ಜನರು ಕಗ್ಗತ್ತಲಿನಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯಲ್ಲಿ ನಾಲ್ಕು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಅನೇಕ ಖಾಸಗಿ ಪಿಜಿಗಳಿವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಸಂತನಗರ ಬಸ್ ನಿಲ್ದಾಣದಿಂದ ವಿದ್ಯಾ ವಿಕಾಸ್ ಕಾಲೇಜಿನ ಹಿಂಭಾಗದ ಗೇಟ್‌ವರೆಗೆ 1 ಕಿ.ಮೀ.ನಷ್ಟು ದೂರವಿದ್ದು, ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಕತ್ತಲಾಗುವುದರಿಂದ ವಿಧಿ ಇಲ್ಲದೆ ಅವರು
ಕತ್ತಲಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬರು ಸಂಜೆ ಕಾಲೇಜು ಮುಗಿಸಿ ಹೋಗುವಾಗ ಕತ್ತಲಿನಲ್ಲಿ ಹಾವನ್ನು ತುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಆ
ವಿದ್ಯಾರ್ಥಿಗೆ ಯಾವುದೇ ಅಪಾಯವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಭಾಗದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿದೆ.
-ಕೆ.ಎಂ.ಅಭಿಷೇಕ್ ಕಲ್ಲಂಬಾಳು, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.
ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ…
ವಾಷಿಂಗ್ಟನ್ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…
ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹನೂರು…
ಕೆ.ಬಿ.ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು…
ಕರ್ನಾಟಕ ವಿಧಾನಸಭೆ ಹಾಗೂ ಸಂಸತ್ ಮೇಲನೆ ಹಾಗೂ ಕೆಳಮನೆಗಳಲ್ಲಿ 2026ರ (ಬಜೆಟ್ ಮೇಲಿನ ಚರ್ಚೆ) ಮುಂದುವರಿದ ಅಧಿವೇಶನಗಳು ನಡೆಯುತ್ತಿವೆ. ಬಜೆಟ್…
ಒಳ ಮೀಸಲಾತಿ ಕುರಿತು ಮಾ.27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸಂಪುಟ ಸಭೆಯು ಎಲ್ಲಾ…