ಎಡಿಟೋರಿಯಲ್

ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದ ರಾಜರ್ಷಿ

 

  ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯರು ಆ ಸಮಾಜಸಂತತಿಯಿಂದ ರೂಪುಗೊಂಡ ಮನಸ್ಥಿತಿಯವರೇ ಆಗಿರುತ್ತಾರೆಹೀಗೆ ತರಬೇತಿಗೊಂಡವರಲ್ಲಿ ಕೆಲವರು ಸಮಾಜಸಂಸ್ಕೃತಿಯ ಆಜ್ಞಾಪಾಲಕರಾಗಿರುತ್ತಾರೆಮತ್ತೆ ಕೆಲವರು ತಾವು ಪಡೆದ ಶಿಕ್ಷಣದಿಂದಲೋವಿವೇಕದಿಂದಲೋಮನುಷ್ಯತ್ವದಿಂದಲೋ ಸಮಾಜದಲ್ಲಿನ ಒಳಿತುಕೆಡುಕುಗಳನ್ನು ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಂಡು ಜೀವಪರವಾಗಿ ಬದುಕುತ್ತಲೇ ಮಾನವೀಯ ಸಮಾಜವನ್ನು ಕಟ್ಟಲು ಬಯಸುತ್ತಾರೆಈ ಹಾದಿಯಲ್ಲಿ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಚಿರಸ್ಥಾಯಿ.

ಜಾತಿ ಶ್ರೇಣೀಕೃತ ಭಾರತದಲ್ಲಿ ಶಿಕ್ಷಣದಿಂದ ಮಾತ್ರ ಎಲ್ಲ ಬದಲಾವಣೆಗಳನ್ನೂ ಜಾರಿಗೆ ತರಲು ಸಾಧ್ಯ ಎಂಬುದನ್ನು ನಾಲ್ವಡಿಯವರು ಅರಿತುಕೊಂಡಿದ್ದರುಅದಕ್ಕಾಗಿ ದೇಶದಲ್ಲೇ ಪ್ರಥಮವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರುಮೊದಲ ಘಟಿಕೋತ್ಸವದಲ್ಲಿ ಮಾತನಾಡುತ್ತಾ: ‘ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲಈ ವಿಶ್ವವಿದ್ಯಾನಿಲಯ ಇರುವುದು ಈ ದೇಶದ ಅಕ್ಷರ ವಂಚಿತ ಸಮುದಾಯಗಳಿಗೆ’ ಎಂಬುದು ನಾಲ್ವಡಿಯವರ ನುಡಿಯಾಗಿತ್ತು.

ಮೈಸೂರಿನಲ್ಲಿ ‘ಪಂಚಮ ಬೋರ್ಡಿಂಗ್ ಹೋಂ’ ಸಂಸ್ಥೆಬುಡಕಟ್ಟುಅರಣ್ಯವಾಸಿಗಳಿಗೆ ಶಾಲೆಅಸ್ಪೃಶ್ಯರಿಗಾಗಿ ಹುಸ್ಕೂರು ಹಾಗೂ ನರಸೀಪುರದಲ್ಲಿ ಶಾಲೆ1902– ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯ ಶಾಲೆ1903– ಮೈಸೂರಿನಲ್ಲಿ ತಾಂತ್ರಿಕ ಶಾಲೆ, 1911ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭಿಸಿದ್ದು ಕೂಡ ನಾಲ್ವಡಿ ಅವರೇ.

1913ರಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೊಳಿಸಿದರುಈ ಕಾಯ್ದೆ ಪ್ರಕಾರ 7ರಿಂದ 12 ವರ್ಷ ವಯಸ್ಸಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ನೇಮಕ ಮಾಡುವುದು ನಿಷೇಧವಾಯಿತುದೇಶದ ಪ್ರಥಮ ವೈದ್ಯಕೀಯ ಶಾಲೆ ತೆರೆದರುಇದೇ ಶಾಲೆ 1924ರಲ್ಲಿ ‘ಮೆಡಿಕಲ್ ಕಾಲೇಜ್’ ಆಗಿ ಪರಿವರ್ತನೆಗೊಂಡಿತು.

ಒಡೆಯರ್ ಅವರು 1918ರಲ್ಲಿ ಶಾಲಾ ಪ್ರವೇಶದಲ್ಲಿ ಜಾತಿಪದ್ಧತಿ ಯನ್ನು ನಿರ್ಮೂಲನೆ ಮಾಡಿ ಪಂಚಮರ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ತೆರೆದದ್ದು ವರ್ಣಸಂಕರಕ್ಕೆ ಮುನ್ನುಡಿ ಎನ್ನಬಹುದುಪಂಚಮರ ಮಕ್ಕಳಿಗೆ ಶಾಲೆಗೆ ಶುಲ್ಕರಹಿತ ಪ್ರವೇಶ ನೀಡಿದರುಕುರುಡುಮೂಕ ಮಕ್ಕಳಿಗೆ ಶಾಲೆಗಳನ್ನು ತೆರೆಯುವ ಮೂಲಕ ಕಣ್ಣಿಲ್ಲದವರಿಗೆ ದಿಕ್ಕಾಗಿದ್ದವರುಬಾಯಿಲ್ಲದವರಿಗೆ ಧ್ವನಿಯಾದವರು ಒಡೆಯರ್.

ಸರ್ಕಾರಿ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾನೂನಿನ ಮೂಲಕವೇ ಜಾರಿಗೊಳಿಸಿದರು. 1902ರಲ್ಲಿ ಸೇವಾ ಇಲಾಖೆಗಳ ಉದ್ಯೋಗದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಸಮುದಾಯಗಳಿಗೆ ಪ್ರಾತಿನಿಧ್ಯ ಇಲ್ಲದ್ದನ್ನು ಕಂಡು ಶಿರಸ್ತೆದಾರ್ ಮತ್ತು ಅಮಲ್ದಾರರ ಹುದ್ದೆಗಳ ನೇಮಕಾತಿಯಲ್ಲಿ ಬ್ರಾಹ್ಮಣೇತರರ ನೇಮಕಾತಿಗೆ ಕಡಿಮೆ ಅರ್ಹತೆಗಳನ್ನು ನಿಗದಿ ಮಾಡಿದರುಅದಕ್ಕಾಗಿ ಮಿಲ್ಲರ್ ಕಮಿಷನ್ ನೇಮಿಸಿಎಲ್ಲ ಸಮುದಾಯಗಳಿಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಿದರು.

ಈ ಸಂದರ್ಭದಲ್ಲಿ ದಿವಾನರಾದ ವಿಶ್ವೇಶ್ವರಯ್ಯ ಅವರು ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆ ಹಾಳಾ ಗುತ್ತದೆ ಎಂದು ವಾದಿಸಿದರುಈ ಕಾರಣಕ್ಕಾಗಿ ತಮ್ಮ ದಿವಾನ ಹುದ್ದೆಗೆ ರಾಜೀನಾಮೆ ನೀಡಿದರುನಾಲ್ವಡಿಯವರು ಧೃತಿಗೆಡದೆ 1917ರಲ್ಲಿ ‘ಪ್ರಜಾಮಿತ್ರ ಮಂಡಲಿ’ಯನ್ನು ಸ್ಥಾಪಿಸಿ ದಮನಿತ ಸಮುದಾಯಗಳಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಿದರು. 1921ರಲ್ಲಿ ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೂ ಶೇ.75ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರುನಾಲ್ವಡಿಯವರು ಹಿಂದುಳಿದಅಸ್ಪೃಶ್ಯ ಸಮುದಾಯಗಳಲ್ಲೇ ದಕ್ಷತೆಯನ್ನು ಬೆಳೆಸಿಸಮರ್ಥವಾಗಿ ಆಡಳಿತವನ್ನು ರೂಪಿಸಬಹುದು ಎಂಬುದನ್ನು ಕ್ರಿಯೆಯ ಮೂಲಕ ತೋರಿಸಿಕೊಟ್ಟರು.

ಅಸ್ಪೃಶ್ಯಹಿಂದುಳಿದ ಜಾತಿಗಳು ಆರ್ಥಿಕವಾಗಿ ಸುಧಾರಣೆಗೊಂಡಾಗ ಮಾತ್ರ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಮನಗಂಡು, 1905ರಲ್ಲಿ ಸಹಕಾರ ಸೊಸೈಟಿಗಳ ಕಾಯ್ದೆ ಜಾರಿಗೊಳಿಸಿ ಸಾಲ ಸೌಲಭ್ಯ ಕಲ್ಪಿಸಿದರುರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ಭೂ ಅಭಿವೃದ್ಧಿ ಬ್ಯಾಂಕ್… ಹೀಗೆ ಅನೇಕ ಸಹಕಾರ ಬ್ಯಾಂಕ್‌ಗಳನ್ನು ಬಡವರ ಏಳ್ಗೆಗಾಗಿ ಪ್ರಾರಂಭಿಸಿದರುಈ ರೈತರನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿ ದ್ದನ್ನು ಕಂಡು 1928ರಲ್ಲಿ ‘ಕೃಷಿ ಸಾಲ ಮನ್ನಾ ಕಾಯ್ದೆ’ ಜಾರಿಗೆ ತಂದರುಈ ಕಾನೂನಿನಿಂದ ನಿರ್ಗತಿಕರ ಭೂಮಿಯ ಒಡೆತನ ಉಳಿಯುವಂತೆ ಮಾಡಿದರುಬಡ ರೈತರ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕನ್ನಂಬಾಡಿ (ಕೆಆರ್‌ಎಸ್), ಮಾರೀಕಣಿವೆಅಂಜನಾಪುರ ಜಲಾಶಯಭೀಮನಹಳ್ಳಿ ಜಲಾಶಯಮಾರ್ಕೋನ ಹಳ್ಳಿ ಜಲಾಶಯಗೋಪಾಲಪುರದ ಜಲಾಶಯನೆಲ್ಲೀಗೆರೆ ಜಲಾಶಯ ಮುಂತಾದವು ಗಳಿಗೆ ಅಣೆಕಟ್ಟೆಯನ್ನು ಕಟ್ಟಿಸಿದರು.

ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾಣ ವೆಚ್ಚ ಅಂದಾಜು 2 ಕೋಟಿ 73 ಲಕ್ಷ ರೂ.ಗಳಷ್ಟುಹಣದ ಕೊರತೆಯಾಗಿತ್ತುಆಗ ತಮ್ಮ ತಾಯಿಯವರ ಸಲಹೆಯಂತೆ ಒಡೆಯರ್ ತಮ್ಮದೇ ಆದ ಖಾಸಗಿ ಭಂಡಾರದಿಂದ 4 ಮೂಟೆ ರತ್ನಾಭರಣಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಿದ ಉದಾಹರಣೆ ಇದೆರಾಜ ಪರಂಪರೆಯಲ್ಲಿ ಹುಟ್ಟಿದ ನಾಲ್ವಡಿಯವರು ಜನರ ಬದುಕಿಗೆ ಜೀವನದಿಯಾದ ಸಾಕಷ್ಟು ಕಥನಗಳಿವೆ.

ಕೈಗಾರಿಕಾ ಅಭಿವೃದ್ಧಿಯಿಂದ ನಾಡಿನ ಪ್ರಗತಿ ಸಾಧ್ಯ ಎಂಬುದನ್ನು ಅರ್ಥಮಾಡಿಕೊಂಡ ಒಡೆಯರ್ ಅವರು ಭದ್ರಾವತಿಯಲ್ಲಿ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆಸಿಮೆಂಟ್ ಕಾರ್ಖಾನೆ, 1934ರಲ್ಲಿ ಮಂಡ್ಯದಲ್ಲಿ ಸಕ್ಕರೆ ಕಂಪೆನಿ, 1936ರಲ್ಲಿ ಮೈಸೂರು ಪೇಪರ್ ಮಿಲ್ಸ್ಮಂಗಳೂರಿನ ಹೆಂಚು ಕಾರ್ಖಾನೆಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಷಹಬಾದಿನ ಸಿಮೆಂಟ್ ಕಾರ್ಖಾನೆಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಸೇರಿ ಹಲವಾರು ಕಾರ್ಖಾನೆಗಳ ಹುಟ್ಟಿಗೆ ಕಾರಣರಾದರು.

ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ನಾಡುನುಡಿಗೆ ಉಸಿರಾದರುಸಮಾಜಮುಖಿ ಕಾನೂನುಗಳನ್ನು ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿಯಾಗಿ ರೂಪಿಸಿದ ನಾಲ್ವಡಿಯವರನ್ನು ವಿದೇಶಿಯ ವಿದ್ವಾಂಸರುಗಳುಶಿಕ್ಷಣ ತಜ್ಞರು ಹಾಗೂ ಇತಿಹಾಸಕಾರರು ‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿರುವುದು ಸೂಕ್ತವಾಗಿದೆಇವರ ಎಲ್ಲ ಸಾಧನೆಗಳನ್ನೂ ಗಮನಿಸಿದ ಇಂಗ್ಲೆಂಡ್‌ನ ಗ್ರಾಫಿಕ್ ಎಂಬ ಪತ್ರಿಕೆ 1906ನೇ ಮಾರ್ಚ್ 10ರ ಸಂಚಿಕೆಯಲ್ಲಿ; “ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ಯಾವ ಭಾರತೀಯ ಸಂಸ್ಥಾನಕ್ಕೂ ಅರ್ಹತೆ ಇಲ್ಲ” ಎಂದು ಪ್ರಶಂಸಿಸಿದೆಈ ದೇಶದ ನಿಜ ಚರಿತ್ರೆಯನ್ನು ತಡವಾಗಿ ಅರ್ಥೈಸಿಕೊಂಡ ಮಹಾತ್ಮ ಗಾಂಧಿಜಿಯವರು ನಾಲ್ವಡಿಯವರನ್ನು ‘ರಾಜರ್ಷಿ’ ಎಂದು ಕರೆದದ್ದು ಅರ್ಥಪೂರ್ಣವಾಗಿದೆ.

 

(ಲೇಖಕರುಸಹಾಯಕ ಪ್ರಾಧ್ಯಾಪಕರುಇತಿಹಾಸ ವಿಭಾಗಶರಾವತಿ ಪ್ರಥಮ ದರ್ಜೆ ಕಾಲೇಜುಕೋಣಂದೂರುತೀರ್ಥಹಳ್ಳಿ ತಾಲ್ಲೂಕುಶಿವಮೊಗ್ಗ ಜಿಲ್ಲೆ)

andolanait

Share
Published by
andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

26 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

31 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

41 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago