ಸಿದ್ದೇಶ್ವರ ಸ್ವಾಮೀಜಿ
ಹಳ್ಳಿಯೊಳಗ ಬಾಳ ಸಣ್ಣ ಸಣ್ಣ ಮಾತು ಹೇಳ್ತಾರ. ಎಷ್ಟು ಚಲೋ ಹೇಳ್ತಾರ ಅವು ಎಲ್ಲ ಋಷಿಗಳ ಮಾತುಗಳಂಗ. ‘ಏನು ಊರ ಉಸಾಬರಿ, ಏನು ಮಾಡ್ತೀ ತಣ್ಣಗಿರು’. ಇದರ‍್ಯಾಗ ಬಾರೀ ಬಾರಿ ಅದ. ಏನಿಲ್ಲ ಹಳ್ಳಿ ಜನ ಹೇಳೋದು ಊರು ಉಸಾಬರಿ ನಿನಗ್ಯಾಕೆ? ತಣ್ಣಗಿರು. ಇನ್ನೊಬರ ಉಸಾಬರಿ ಮಾಡೋದು ಬಿಟ್ರೇ ಸ್ವರ್ಗ ಆಗ್ತದೆ ಜಗತ್ತು. ಮತ್ತೇನು ಹೇಳಿದರು, ತಣ್ಣಗಿರು. ಅಂದ್ರ ನಿನ್ನ ತಲಿ ತಣ್ಣಗಿರಲಿ ಅಂತ. ಶಾಂತವಾಗಿರು ತಲೀಲಿ ದ್ವೇಷ ಅಂತಾವ್ ಇಂತಾವ್ ಇತ್ತು ಅಂದ್ರ ತಲೀ ಕಾಯ್ತದ. ತಣ್ಣಗಿರು ಇದನ್ನ ಹೇಳಿದವರು ಯಾರು? ಮತ್ತ ಆ ಮಾತಿನಲ್ಲಿ ಎಷ್ಟು ಅರ್ಥ ಅದ. ಇದ ಬರೆದು ಹಚ್ಚಬೇಕು ಮನೆಯಾಗ ‘ಊರ ಉಸಾಬರಿ ನಮಗ್ಯಾಕ ನಾವಿರಬೇಕು ತಣ್ಣಗ’.
ಈಗ ಮನೆಯಾಗ ಹೋದಾಗ ನಾವು ಹೇಳೋದು ಏನು, ‘ಆಚೆ ಕಡೆಯವರು ಹಿಂಗ್ ಮಾಡ್ಯಾರ, ಈಚೇ ಕಡಿಯವರು ಹಿಂಗ್ ಮಾಡ್ಯಾರ’, ‘ಅಲ್ಲಿ ಅಂಗ್ ಆಗ್ಯಾದ, ಇಲ್ಲಿ ಇಂಗಾಗ್ಯಾದ’ ಅದಕ್ಕ ಹೇಳೋದು, ಊರು ಉಸಾಬರಿ ನಮಗ್ಯಾಕೆ ಅಂತ. ಆ ‘ಉಸಾಬರಿ’ ಶಬ್ದ ಎಷ್ಟು ಚಂದ್ ಅದ, ಯಾವ ಶಬ್ದಕೋಶದಾಗ ಸಿಗ್ತಾದೇನಾ? ಎಲ್ಲಿಲ್ಲ ಹುಡಿಕ್ಯಾಡರೇ ಇವರೇ, ‘ಉಸಾಬರಿ’ ಅಂದ್ರ ‘ಕೆಲಸಿಲ್ಲದ ಕೆಲಸ’. ಯಾವ ಅರ್ಥನೇ ಇಲ್ಲ ಅಂತ ಮಾತು. ಬೇರೆ ಅವರ ಮನೆ ವಿಚಾರ ನಿಂಗ್ಯಾಕಪ್ಪ? ಹಂಗ ಬದುಕಬೇಕು, ಸಣ್ಣ ಮಾತೇ ಆದರೆ ಎಷ್ಟು ಅರ್ಥಪೂರ್ಣ ಮಾತನಾಡಿದರು. ಇಂತ ಮಾತುಗಳು ಭಾರತ ದೇಶದ ಸಾಮಾನ್ಯ ಜನರ ನಾಲಿಗೆ ಮ್ಯಾಲೆ ಅವೆ. ಸುಮ್ಮನೆ ಒಂದಯ ಮಾತು ಇಟ್ಕೊಳೋದು ಬದುಕನ್ನು ಕಟ್ಟಿಕೊಳ್ಳೊದು ಚಲೋ ಇಲ್ಲೇನೋ. ಈ ಮಾತು ಹಳ್ಳಿಯವರದ್ದು. ಇವಕ್ಕ ‘ಗ್ರಾಮೀಣರ ಮಾತಂದ್ರೇ ವೇದ ಅಂತ ಗ್ರಾಮೀಣ ವೇದ, ಜಾನಪದ’ ಅಂತಾರ.
ಯಾರು ಈ ಮಾತು ಹೇಳಿದ್ರು ಮೊಟ್ಟ ಮೊದಲು? ಗೊತ್ತಿಲ್ಲ. ಯಾರ‍್ಯಾರ ಬರದಿಟ್ಟರೇನೂ? ಏನೂ ಇಲ್ಲ. ಆದರೆ ಯಾರಿಗೂ ಗೊತ್ತಿಲ್ಲೇನು? ಎಲ್ಲರಿಗೂ ಗೊತ್ತದ. ಮಜಾ ಇಲ್ಲೇನೂ ಇದು. ಬರೆದಿಲ್ಲ, ಓದಿಲ್ಲ, ಯಾರಂತ ಗೊತ್ತಿಲ್ಲ. ಅಂದರೂ ಎಲ್ಲರಿಗೂ ಗೊತ್ತು. ಜೀವನದ್ಯಾಗ ಇದೊಂದು ಮಾತು ನೆನಪಿಟ್ಟುಕೊಂಡು, ನಾವು ಬದುಕೊದು.
ಜಗತ್ತು ಕಾಯಿಸ್ತದ, ಆದರೆ ಆ ಕಾವು ನಮ್ಮ ತಲಿಯಾಗ ಹೋಗದ ಹಂಗ ಒಳಗ ತಣ್ಣಗೆ ಇರೋದು, ಆನಂದವಾಗಿರೋದು, ಶಾಂತವಾಗಿರೋದು. ಅಂತಹದೊಂದು ಮನಸ್ಸು ತಯಾರಯಾಯಿತು ಎಂದರೇ ಅದೇ ಶ್ರೇಷ್ಠವಾದ ಜೀವನ. ಅದನ್ನ ನಾವು ಸುಮ್ಮನೆ ಸಾಧಿಸುವುದನ್ನು. ಮನುಷ್ಯ ಮನಸ್ಸನ್ನ ಹಿಂಗ ತಣ್ಣಗೆಗೊಳಿಸೋದೇ ‘ಅಧ್ಯಾತ್ಮದ’ ಉದ್ದೇಶ. ಅಂತಹ ಮಾತುಗಳು, ಸಾವಿರ ಸಾವಿರ ಭಾರತ ದೇಶದ ವಾತಾವರಣದಲ್ಲಿ ಹರಿವ್ಯಾವ ಅವು ಮಾಸೋದಿಲ್ಲ.
ನಮ್ಮದು ಎಲ್ಲಾ ಸಮಯ ಎಲ್ಲಿ ಹೋಗ್ತದ ಅಂದ್ರೆ, ಬರೀ ಮಂದಿ ಉಸಾಬರಿ. ಅವರು ಅಂಗ್ಯಾಕ? ಇವರು ಹಿಂಗ್ಯಾಕ? ಅಲ್ಲಿ ಅವರು ಅದೇ ಅನ್ನಕತಾರ ನೀ ಹಿಂಗ್ಯಾಕ? ‘ಯಾರು ಹೆಂಗ್ಯಾರ ಇರಲಿ ನೀ ಏನು ಮಾಡ್ತೀ ಹೇಳು? ನೋಡಿ ಆನಂದ ಆಗ್ತಿತ್ತು ನೋಡು, ಒಲ್ಲಾ ಆಗ್ತಿತ್ತು ಸುಮ್ಮನ ತಣ್ಣಗಿರು. ಹೌದಲ್ಲ. ‘ಮಾತು ಕೇಳಿದರು ಹೇಳು, ಕೇಳದೇ ಇದ್ರೇ ತಲೆ ಕೆಡಿಸಿಕೊಳ್ಳಬೇಡ ಸುಮ್ಮ ನಿರು’. ಈಗ ನಾವು ಏನಾರ ಮಾತಾಡಿ ವ್ಯರ್ಥ, ಯಾರು ಕೇಳೊದೇ ಇಲ್ಲ ಈ ಜನಾಂಗ. ಕೇಳಲಿ ಬಿಡ್ಲಿ ನಿನ್ನ ತಲಿಗೆ ತಪ್ಪ್ಯಾಕೆ? ಹೇಳೊಂಗೆ ಹೇಳು, ಕೇಳದರೆ ಕೇಳ್ತಾರೆ ಬಿಟ್ರ ಬಿಡ್ತಾರೆ, ಅವರ ಬೆನ್ನತ್ತಿ ಹೋಗಬೇಡ ಅಷ್ಟೇ.
ಈಗ ಕುಡುಕರು ಒಬ್ಬರು ಬಂದ್ರು ಬಿಟ್ಟು ಬಿಡ್ರೋ ಚಲೋವಪ್ಪ ಅಂತ ಹೇಳೊದು, ಅದು ಫಲಿಸ್ತು ಫಲಿಸಲಿ, ಫಲಿಸದಿದ್ರೇ ಬಿಡ್ಲಿ ಸುಮ್ಮನೇ ಇರು. ಒಂದು ಹಿಡುಕೊಂಡು ನಾವು ಹೊರಟೀವಿ ಅಂದ್ರ ಹರಾಮ್ ಇರ‍್ತೀವಿ.
‘ಉಸಾಬರಿ ಬಿಟ್ಟು ಬಿಡು, ತಲೀ ತಣ್ಣಿಗಿಟ್ಕೊಳೊದು’ ಎರಡು ಚಲೋ ಇಲ್ಲೇನು ಇದು. ಅವರು ಎಂತಾ ಬಟ್ಟೆ ತಂದಾರ, ಇವರು ಎಂತ ಬಟ್ಟೆ ತಂದಾರ, ಅವರ ಮನಿ ಯಾಗ ಯಾವ್ಯವ್ ಸಮಾನ್ ಬಂದಾವ, ಇವರ ಮನೆ ಯಾಗ ಏನೇನು ಅದಾವ, ನಮ್ಮ ಮನಿಯಾಗ ಅದಾವೋ ಇಲ್ಲವೋ ಹಿಂಗಾದ್ರ ಗತಿ ಏನೂ? ಇವನ ‘ಕಿಸೆ ಇರುವುದೇ ಸ್ವಲ್ಪ ಇವು ಬಯಕೆಗಳು ಅನೇಕ’ ಹೊಂದಿಸೋದು ಹೆಂಗಾ? ಅದಕ್ಕೆ ಯಾರು ಏನಾರೇ ಮಾಡ್ಲಿ, ಜಗತ್ತು ಹೆಂಗಾರ ಇರ್ಲಿ, ಎಲ್ಲಾ ಜಗತ್ತು ಕೆಟ್ಟದು ಅಂತ ತಲಿಯಾಗ ಹಾಕೋಳಕ್ಕೆ ಹೋಗ್ಬೇಡ. ಅದು ಹೆಂಗ ಇರ‍್ಬೇಕು ಇರ್ತದೇ, ನಿನ್ನ ಕೈ ವಾಸನ ನಿಂದ ನೋಡು. ಕಣ್ಣ ಮುಚ್ಚಿ ಒಂದು ಕ್ಷಣ ಮನಸ್ಸಿನ್ಯಾಗ ಏನು ನಡೆದದ ನೋಡು, ಮನಸ್ಸು ತಣ್ಣಗಿತ್ತು ಅಂದ್ರ, ಬದುಕಿನ ಕಲಾ ನಿನಗದೆ. ಇಲ್ಲಾ ಇಲ್ಲ.
ಎರಡೇ ಇವು ಮಾತ ಹೇಳಿದರೇ ‘ಉಸಾಬರಿ ಬ್ಯಾಡ, ತಲಿಯೊಳಗ ಕಾವು ಬೇಡ’. ತಲಿ ತಣ್ಣಿಗಿರಬೇಕು ಅಂದ್ರ ‘ಒಳಗ ಕಾವು ಆಗುವಂತ ನುಡಿಗಳು ಸುಳಿಯಬಾರದು, ವಿಚಾರಗಳು ಹರಿದಾಡಬಾರದು ಚಲೋ,ಚಲೋ ವಿಚಾರಗಳು ಇರಬೇಕು’ ಪ್ರಕೃತಿಯನ್ನು ನೋಡೊದು ಬಿಟ್ಟು, ಇನ್ನೊಬ್ಬರ ಚಪ್ಪಲ ನೋಡೊದು, ಎಷ್ಟು ರೊಕ್ಕ ಖರ್ಚು ಮಾಡ್ಯಾನ, ಮೆರೀತಾನ ಇವ. ಹಿಂಗಾದ್ರ ಆ ಸೂರ್ಯನ್ಯಾರು ನೋಡೋರು. ಎಂತ ಚಲೋ ಬೆಳಕು ತಂದುಕೊಟ್ಟಾನ. ಅದ ನೋಡಿ ಆನಂದ ಪಡಬೇಕು, ನಾಲ್ಕು ಹೂ ಇಟ್ಟಾರೆ, ಅದನೋಡಿ ಆನಂದ ಪಡಬೇಕು. ಬೇರೆ ಯವರ ನೋಡಿದ್ರೇ ಜೀವನ ಹದಗೆಡುತ್ತದೆ. ಅದಕ್ಕ ನಮ್ಮಷ್ಟಕ್ಕೆ ನಾವು ಚೆನ್ನಾಗಿ ಇರೋದನ್ನ ಕಲಿತರೇ ನಾವು ಬದುಕಿನಲ್ಲಿ ಏನನ್ನ ಪಡಿಯಬೇಕು ಅದು ಪಡೀತೀವೆ.
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಈ…
ಬೆಳಗಾವಿ: 532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ…
ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…
ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್…
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್ ಶಾಕ್ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.…