ಮೈಸೂರು: ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಆದರೆ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಲೀಟರ್ ಬಾಟಲಿಗೆ 20 ರೂ ಕೊಟ್ಟು ಕುಡಿತೀರ. ಒಂದು ಸಾವಿರ ಟ್ರೀಟೆಡ್ ಲೀಟರ್ ನೀರಿನ ಬೆಲೆ 5 ರೂ. ಮಾತ್ರ. ನಿಮ್ಮ ಮನೆ ಒಳಗೆ ಬರೋದಕ್ಕೆ ಒಂದು ಲೀಟರ್‌ಗೆ 0.15 ಪೈಸೆ ಮಾತ್ರ ಏರಿಕೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಜಾಸ್ತಿ ಮಾಡಿರಲಿಲ್ಲ. ಕಾರ್ಪೋರೇಷನ್ ಈ ಏರಿಕೆಯಿಂದ ಬರೋದೆ ಕೇವಲ 35 ಲಕ್ಷ ಅಷ್ಟೇ. ಶೇ 30% ಏರಿಕೆ ಮಾಡಿದ್ದಾರೆ ಅಂತ ಇಲ್ಲ ಸಲ್ಲದ ಆರೋಪವನ್ನು ಬಿಜೆಪಿಗರು ಮಾಡುತ್ತಾರೆ. ಟೋಲ್ ನಲ್ಲಿ ಪ್ರತಿ ವರ್ಷ ಏರಿಕೆ ಮಾಡುತ್ತಾನೆ ಇದ್ದಾರೆ. ಅದರ ಬಗ್ಗೆ ಕೇಳೋರು ಯಾರು ಇಲ್ಲ. ಬಿಜೆಪಿ ನಾಯಕರು ಉಸಿರು ಬಿಡುತ್ತಿಲ್ಲ. ತಂಬಾಕು ಬೆಳೆಗಾರರ ಕಷ್ಟ ಕೇಳುತ್ತಿಲ್ಲ. ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಿಲ್ಲ. ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಬಳಿ ಹೋಗಿ ಜೆಡಿಎಸ್ ನಾಯಕರು ಫೋಟೋ ತೆಗೆಸಿಕೊಂಡು ಬಂದ್ರು ಏನೂ ಪ್ರಯೋಜನ ಆಗಿಲ್ಲ. ಅವರು ಭೇಟಿ ಮಾಡಿ ಬಂದಾಗಿನಿಂದ ಇನ್ನೂ ಇಳಿಕೆಯಾಗಿದೆ. ಹಾಗಾದರೆ ಇವರು ಕೇಂದ್ರ ಸಚಿವರ ಜೊತೆ ಏನು ಮಾತನಾಡಿದ್ರು ಗೊತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…