ಯಳಂದೂರು ತಾಲ್ಲೂಕು ಕೇಂದ್ರದ ಹೃದುಂ ಭಾಗದಲ್ಲಿರುವ ಬುದ್ಧ ಧಮ್ಮ ಧ್ಯಾನ ಕೇಂದ್ರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಮತ್ತು ಭವನವಿರುವ ಸ್ಥಳದ ಮುಂಭಾಗದಲ್ಲಿ ಎಸ್‌ಜಿಆರ್ ಬಾರ್ ಅಂಡ್ ರೆಸ್ಟೋರೆಂಟ್‌ನಿಂದಾಗಿ ಅಂಬೇಡ್ಕರ್ ಭವನ ಹಾಗೂ ಅವರ ಪ್ರತಿಮೆಯ ಅಕ್ಕ-ಪಕ್ಕದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮದ್ಯಸನಿಗಳು ಮದ್ಯದ ಬಾಟಲಿ, ಸೇವಿಸಿದ ಮಾಂಸಹಾರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡಿ ಪರಿಸರವನ್ನು ಹಾಳುವಾಡುತ್ತಿದ್ದಾರೆ. ಈ ಮದ್ಯ ವ್ಯಸನಿಗಳಿಂದಾಗಿ ವಿದ್ಯಾರ್ಥಿಗಳಿಗೆ, ಮಹಿಳೆುಂರಿಗೆ, ಆಟೋ ಚಾಲಕರು ಸೇರದಂತೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಧ್ಯಾನ ಕೇಂದ್ರಕ್ಕೆ ಬರುವ ಬುದ್ಧನ ಅನುಾಂಯಿಗಳಿಗೆ ಹಾಗೂ ಅಂಬೇಡ್ಕರ್ ಅಭಿವಾನಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಸ್‌ಜಿಆರ್ ಬಾರ್ ಅನ್ನು ತೆರವುಗೊಳಿಸಿ ಇಲ್ಲಿನ ಪರಿಸರವನ್ನು ಕಾಪಾಡಬೇಕಾಗಿದೆ.
-ಎಸ್.ಸುಂದರ ಕಲಿವೀರ್, ಸಂಚಾಲಕ, ವಾನವ ಬಂಧುತ್ವ ವೇದಿಕೆ, ುಂಳಂದೂರು.
ಚಾಮರಾಜನಗರದ ಎಲ್ಲಾ ಕಮಾನು ಗೇಟ್‌ಗಳಲ್ಲಿ ನಗರಸಭೆಯವರು ‘ಜಾನಪದ ಕಲೆಗಳ ತವರೂರು’ ಎಂದು ಬರೆಸಿ ಹಾಕುತ್ತಿರುವುದು ಸಂತೋಷದ ಸಂಗತಿ. ಆದರೆ ಶೀರ್ಷಿಕೆುಂಲ್ಲಿ ಸ್ವಲ್ಪ ಬದಲಾವಣೆ ಮಾಡಿ ‘ಜಾನಪದ ನಾಡು ಚಾಮರಾಜನಗರಕ್ಕೆ ಸುಸ್ವಾಗತ’ ಎಂದೋ ಅಥವಾ ‘ಜಾನಪದ ತವರು ಚಾಮರಾಜನಗರಕ್ಕೆ ಸುಸ್ವಾಗತ’ ಎಂದು ಬರೆಸಿದರೆ ಶೀರ್ಷಿಕೆ ಅರ್ಥ ಪೂರ್ಣವಾಗುತ್ತದೆ.
ಜನಪದ ಎಂದರೆ ಒಂದು ಸಮುದಾಯ, ಜನರ ಗುಂಪು ಎಂದು ಅರ್ಥ ನೀಡುತ್ತದೆ ಅದೇ, ಜಾನಪದ ಎಂಬುದು ಇಡೀ ಸಮುದಾಯ ಒಳಗೊಂಡಿರುವ ಕಲೆ, ಸಾಹಿತ್ಯ, ಮಹಾಕಾವ್ಯ, ನಂಬಿಕೆ, ಸಂಪ್ರದಾಯ, ಆಚಾರ, ಪರಂಪರೆ, ಸಂಸ್ಕೃತಿ, ಜೀವನ ಕ್ರಮ, ಬುಡಕಟ್ಟು ಜೀವನ ಮತ್ತು ಎಲ್ಲಾ ರೀತಿಯ ಜನರ ಜೀವನ ವ್ಯವಸ್ಥೆಯನ್ನು ಒಳಗೊಳ್ಳುತ್ತದೆ. ಹಾಗಾಗಿ ಜಾನಪದ ತವರು, ಜಾನಪದ ನಾಡು ಎಂಬ ಶೀರ್ಷಿಕೆ ಸೂಕ್ತವಾಗಿರುತ್ತದೆ.
– ಡಾ.ಶಿವರಾಮ್ ಅಂಶಿ, ಚಾಮರಾಜನಗರ.
ಇತ್ತೀಚಿನ ದಿನಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾರ್ವಜನಿಕರು ಭಯಭೀತರಾಗಿ, ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗದ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು ಇದರ ಹಾವಳಿಯಿಂದ ಹೆದರಿ ಕೂಲಿಗೆ ತೆರಳದೆ ಪರದಾಡುತ್ತಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಸಮಯದಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ನಾಯಿ, ಕೋಳಿ, ಹಸು, ಮನುಷ್ಯನ ಮಾಂಸದ ರುಚಿಯನ್ನು ಸವಿದಿರುವ ಚಿರತೆಯ ಹಾವಳಿ ವಿಪರೀತವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅತ್ಯಂತ ಜಾಗರೂಕತೆಯಿಂದ ಇರಬೇಕು. ಮತ್ತೆ ಮನುಷ್ಯರ ಪ್ರಾಣಕ್ಕೆ ತೊಂದರೆಯಾಗುವ ಮೊದಲೇ ಅಧಿಕಾರಿ ವರ್ಗದವರು ಚಿರತೆಯನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು.
-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾದ ಮತದಾರರ ಹೆಸರು ಕಾಣೆಾಂದ ವಾದರಿುಂಂತೆ ಇದೀಗ ಮೈಸೂರು ಜಿಲ್ಲೆುಂಲ್ಲೂ ಅದೇ ರೀತಿಯ ಹಗರಣ ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ೧,೪೫,೯೦೮ ಮತದಾರರ ಹೆಸರು ಚುನಾವಣೆ ಪಟ್ಟಿಯಿಂದ ಕಾಣೆಯಾಗಿರುವುದು ಆತಂಕವನ್ನುಂಟು ಮಾಡಿದೆ.
ವಿಧಾನಸಭೆ ಚುನಾವಣೆ ಹತ್ತಿರವಿರುವುದರಿಂದ ಇಂತಹ ಪ್ರಕರಣಗಳು ರಾಜ್ಯವ್ಯಾಪಿ ಹರಡುವ ಮುನ್ನ ಕಾಣೆಯಾಗಿರುವ ಹೆಸರುಗಳನ್ನು ಪರಿಶೀಲನೆ ಕೂಡಲೇ ಮರುಸೇರ್ಪಡೆಗೊಳಿಸಬೇಕು. ಜೊತೆಗೆ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಚುನಾವಣಾ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.
————————–
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…
ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…